Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದ್ವೇಷ ಮಾಡೋಕೆ ಶುರು ಮಾಡಿದ್ರೆ, ದ್ವೇಷಿಸಿದವನ ಹೃದಯ ನಿಲ್ಲೋವರೆಗೂ ಬಿಡಲ್ಲ’; ಕಿರಣ್ ರಾಜ್ ಮಾಸ್​ ಎಂಟ್ರಿ

ಟೀಸರ್​ನಲ್ಲಿ ಕಿರಣ್ ರಾಜ್ ಎಂಟ್ರಿ ಸಖತ್ ಮಾಸ್​ ಆಗಿದೆ. ಈ ಸಿನಿಮಾದಲ್ಲಿ ಅವರು ಲವರ್ ಬಾಯ್​ ರೀತಿಯಲ್ಲೂ ಕಾಣಿಸಿಕೊಂಡಿದ್ದಾರೆ. ‘ಒಳ್ಳೆಯ ಟೀಸರ್, ಸಿನಿಮಾಗೆ ಒಳ್ಳೆಯದಾಗಲಿ. ಕಿರಣ್ ರಾಜ್ ಅವರಿಗೆ ಒಳ್ಳೆಯದಾಗಲಿ’ ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ.

‘ದ್ವೇಷ ಮಾಡೋಕೆ ಶುರು ಮಾಡಿದ್ರೆ, ದ್ವೇಷಿಸಿದವನ ಹೃದಯ ನಿಲ್ಲೋವರೆಗೂ ಬಿಡಲ್ಲ’; ಕಿರಣ್ ರಾಜ್ ಮಾಸ್​ ಎಂಟ್ರಿ
ಕಿರಣ್ ರಾಜ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 08, 2022 | 2:22 PM

ಕಿರಣ್​ ರಾಜ್​ (Kiran Raj) ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.  ‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಅವರ ಪಾತ್ರ ವೀಕ್ಷಕರಿಗೆ ಇಷ್ಟವಾಗಿದೆ. ಧಾರಾವಾಹಿಯಲ್ಲಿ ಕಿರಣ್​ ರಾಜ್​ ಲವರ್ ಬಾಯ್​ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಸಿನಿಮಾಗಾಗಿ ಅವರು ಬದಲಾಗಿದ್ದಾರೆ. ‘ಭರ್ಜರಿ​ ಗಂಡು’ (Bharjari Gandu) ಚಿತ್ರದಲ್ಲಿ ಅವರ ಸ್ಟೈಲ್​, ಲುಕ್​ ಸಂಪೂರ್ಣ ಭಿನ್ನವಾಗಿದೆ. ಅವರ ಮೈಕಟ್ಟು ನೋಡಿ ಅನೇಕರು ಫಿದಾ ಆಗಿದ್ದಾರೆ. ಇನ್ನು, ಅವರ ಆ್ಯಕ್ಷನ್​ ದೃಶ್ಯಗಳನ್ನು ಕಣ್ತುಂಬಿಕೊಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇಂದು (ಮಾರ್ಚ್​ 8) ಚಿತ್ರದ ಟೀಸರ್ ರಿಲೀಸ್​ ಆಗಿದ್ದು, ಇದಕ್ಕೆ ನಾನಾ ರೀತಿಯಲ್ಲಿ ಮೆಚ್ಚುಗೆಯ ಕಮೆಂಟ್​ಗಳು ಬರುತ್ತಿವೆ.

ಟೀಸರ್​ನಲ್ಲಿ ಕಿರಣ್ ರಾಜ್ ಎಂಟ್ರಿ ಸಖತ್ ಮಾಸ್​ ಆಗಿದೆ. ಈ ಸಿನಿಮಾದಲ್ಲಿ ಅವರು ಲವರ್ ಬಾಯ್​ ರೀತಿಯಲ್ಲೂ ಕಾಣಿಸಿಕೊಂಡಿದ್ದಾರೆ. ‘ಪ್ರೀತಿ ಮಾಡೋಕೆ ಶುರು ಮಾಡಿದರೆ ಪ್ರೀತಿಸಿದವಳ ಹೃದಯ ಗೆಲ್ಲೋವರೆಗೂ ಬಿಡಲ್ಲ. ದ್ವೇಷ ಮಾಡೋಕೆ ಶುರು ಮಾಡಿದ್ರೆ, ದ್ವೇಷಿಸಿದವನ ಹೃದಯ ನಿಲ್ಲೋವರೆಗೂ ಬಿಡಲ್ಲ’ ಎನ್ನುವ ಡೈಲಾಗ್​ ಸಖತ್​ ಹೈಲೈಟ್​ ಆಗಿದೆ. ‘ಒಳ್ಳೆಯ ಟೀಸರ್, ಸಿನಿಮಾಗೆ ಒಳ್ಳೆಯದಾಗಲಿ. ಕಿರಣ್ ರಾಜ್ ಅವರಿಗೆ ಒಳ್ಳೆಯದಾಗಲಿ’ ಎಂದು ಅಭಿಮಾನಿಗಳು ಬರೆದುಕೊಂಡಿದ್ದಾರೆ.

ಸಿನಿಮಾದಲ್ಲಿ ಕ್ಲೈಮ್ಯಾಕ್ಸ್​ನಲ್ಲಿ ಬರೋ ಫೈಟ್​ಗೋಸ್ಕರ್​ ಕಿರಣ್​ ರಾಜ್​ ನಾಲ್ಕು ತಿಂಗಳ ಕಾಲ ಸತತವಾಗಿ ವರ್ಕೌಟ್​ ಮಾಡಿದ್ದಾರೆ. ‘ರಾತ್ರಿ 12ರಿಂದ ಮುಂಜಾನೆ 4:30ವರೆಗೆ ನಾನು ನಿರಂತರವಾಗಿ 4 ತಿಂಗಳು ವರ್ಕೌಟ್​ ಮಾಡಿದ್ದೇನೆ. ಅದು ಸಿನಿಮಾದಲ್ಲಿ ಬರುವ ಕ್ಲೈಮ್ಯಾಕ್ಸ್​ ದೃಶ್ಯಕ್ಕೋಸ್ಕರ. ಬೆಳಗ್ಗೆ ಧಾರಾವಾಹಿ ಶೂಟಿಂಗ್​, ಚ್ಯಾರಿಟಿ ಕೆಲಸಗಳು ಇರುತ್ತಿದ್ದವು. ಹೀಗಾಗಿ, ರಾತ್ರಿ ವರ್ಕೌಟ್​ ಮಾಡುತ್ತಿದ್ದೆ’ ಎಂದು ತಮ್ಮ ಶ್ರಮದ ಬಗ್ಗೆ ಕಿರಣ್​ ರಾಜ್​ ಈ ಮೊದಲು ಹೇಳಿಕೊಂಡಿದ್ದರು.

ಪ್ರಸಿದ್ಧ್​ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಯಶಾ ಶಿವಕುಮಾರ್​ ಚಿತ್ರದ ನಾಯಕಿ. ಕಿಟ್ಟಿ ಕೌಶಿಕ್​ ಛಾಯಾಗ್ರಹಣ ಈ ಸಿನಿಮಾಗಿದೆ. ಪ್ರಸಿದ್ಧ್​ ಸಿನಿಮಾಸ್​ ಹಾಗೂ ಮೊದಲಾದವರು ‘ಭರ್ಜರಿ​ ಗಂಡು’ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

‘ಜೀವ್ನಾನೇ ನಾಟ್ಕ ಸಾಮಿ’ ಸಿನಿಮಾದಲ್ಲಿ ಕಿರಣ್ ರಾಜ್​ ಈ ಮೊದಲು ನಟಿಸಿದ್ದರು. ಕಳೆದ ವರ್ಷ ಸಿನಿಮಾ ತೆರೆಗೆ ಬಂದಿತ್ತು. ರಂಗಭೂಮಿ ಹಿನ್ನೆಲೆ ಹೊಂದಿರುವ ರಾಜು ಭಂಡಾರಿ ರಾಜವರ್ತ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರ ಕಳೆದ ವರ್ಷ ತೆರೆ ಕಂಡಿತ್ತು. ಈಗ ‘ಭರ್ಜರಿ ಗಂಡು’ ಸಿನಿಮಾ ಮೂಲಕ ಮಾಸ್​ ಆಗಿ ಎಂಟ್ರಿ ನೀಡೋಕೆ ಕಿರಣ್​ ರಾಜ್​ ಸಿದ್ಧತೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ‘ಅವಕಾಶ ಇದ್ದಿದ್ರೆ ನಾನು ಒಂದು ಝೂ ಮಾಡ್ತಿದ್ದೆ’; ‘ಕನ್ನಡತಿ’ ನಟ ಕಿರಣ್​ ರಾಜ್​

ಮಂಗಳಮುಖಿಯರಿಗೆ ಕಿರಣ್ ರಾಜ್ ಸಹಾಯ; ಮನಸಾರೆ ನಟನಿಗೆ ಹರಸಿದ ತೃತೀಯ ಲಿಂಗಿಗಳು

Published On - 2:21 pm, Tue, 8 March 22

Live: ದ್ವಿತೀಯ ಪಿಯುಸಿ ಫಲಿತಾಂಶ 2025 ಲೈವ್​ ವಿಡಿಯೋ
Live: ದ್ವಿತೀಯ ಪಿಯುಸಿ ಫಲಿತಾಂಶ 2025 ಲೈವ್​ ವಿಡಿಯೋ
ಸಿಲಿಂಡರ್ ಬೆಲೆ ಹೆಚ್ಚಾಗಿರುವುದನ್ನು ಸರ್ಕಾರ ಗುರಾಣಿಯಾಗಿ ಬಳಸಬಾರದು: ರವಿ
ಸಿಲಿಂಡರ್ ಬೆಲೆ ಹೆಚ್ಚಾಗಿರುವುದನ್ನು ಸರ್ಕಾರ ಗುರಾಣಿಯಾಗಿ ಬಳಸಬಾರದು: ರವಿ
ದೊಡ್ಡ ನಗರದಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಹೇಳಿಕೆಗೆ ಪರಮೇಶ್ವರ್ ವಿಷಾದ
ದೊಡ್ಡ ನಗರದಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಹೇಳಿಕೆಗೆ ಪರಮೇಶ್ವರ್ ವಿಷಾದ
ಹಾಸನಕ್ಕೆ ನಾನ್ಯಾವತ್ತೂ ಕೃಷಿ ವಿಶ್ವವಿದ್ಯಾಲಯ ಕೇಳಿಲ್ಲ: ರೇವಣ್ಣ
ಹಾಸನಕ್ಕೆ ನಾನ್ಯಾವತ್ತೂ ಕೃಷಿ ವಿಶ್ವವಿದ್ಯಾಲಯ ಕೇಳಿಲ್ಲ: ರೇವಣ್ಣ
ಕಲ್ಲೆಸದವನನ್ನು ವಶಕ್ಕೆ ಪಡೆದು ಅಹಿತಕರ ಘಟನೆಗಳಿಗೆ ಅವಕಾಶವೀಯದ ಪೊಲೀಸ್
ಕಲ್ಲೆಸದವನನ್ನು ವಶಕ್ಕೆ ಪಡೆದು ಅಹಿತಕರ ಘಟನೆಗಳಿಗೆ ಅವಕಾಶವೀಯದ ಪೊಲೀಸ್
ನನ್ನ ಸುದೀಪ್ ಮಧ್ಯೆ ಮನಸ್ತಾಪ ಆಗಿರಬಹುದು, ವೈರತ್ವ ಬೆಳೆದಿಲ್ಲ; ಶಿವಣ್ಣ
ನನ್ನ ಸುದೀಪ್ ಮಧ್ಯೆ ಮನಸ್ತಾಪ ಆಗಿರಬಹುದು, ವೈರತ್ವ ಬೆಳೆದಿಲ್ಲ; ಶಿವಣ್ಣ
ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ಸಜ್ಜನರ ನೋಯಿಸಿದರೆ ಆ ಕರ್ಮ ಹೇಗೆ ಸುತ್ತಿಕೊಳ್ಳುತ್ತೆ? ಇಲ್ಲಿದೆ ವಿವರ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುವ ಇಂದಿನ ರಾಶಿ ಭವಿಷ್ಯ
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ಮುಂಬೈ ಸೋಲಿಗೆ ಕಾರಣವಾಯ್ತು ಸಾಲ್ಟ್ ಹಿಡಿದ ಕ್ಯಾಚ್
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ