ಯಶ್ ಜಿಮ್​ ಟ್ರೇನರ್ ಪಾನಿಪುರಿ ಕಿಟ್ಟಿ ಸಂದರ್ಶನ ಮಾಡಿದ ನಟ ಕಿರಣ್ ರಾಜ್

ಸೋಲೋ ಹೀರೋ ಆಗಿ ಅವರು ನಟಿಸಿದ ಮೊದಲ ಸಿನಿಮಾ ‘ಬಡ್ಡೀಸ್​’ ಜೂನ್ 24ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರಮೋಷನ್ ವಿಭಿನ್ನವಾಗಿ ಮಾಡಿದ್ದಾರೆ ಕಿರಣ್ ರಾಜ್.

TV9kannada Web Team

| Edited By: Rajesh Duggumane

Jun 12, 2022 | 8:41 PM

ಕಿರುತೆರೆಯ ಖ್ಯಾತ ನಟ ಕಿರಣ್​ ರಾಜ್​ ಅವರು (Kiran Raj) ಸಿನಿಮಾದಲ್ಲೂ ಸಕ್ರಿಯರಾಗಿದ್ದಾರೆ. ‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಹರ್ಷ ಎಂಬ ಪಾತ್ರ ಮಾಡುತ್ತಿರುವ ಅವರು ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ಹಲವು ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಸೋಲೋ ಹೀರೋ ಆಗಿ ಅವರು ನಟಿಸಿದ ಮೊದಲ ಸಿನಿಮಾ ‘ಬಡ್ಡೀಸ್​’ ಜೂನ್ 24ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರಮೋಷನ್ ವಿಭಿನ್ನವಾಗಿ ಮಾಡಿದ್ದಾರೆ ಕಿರಣ್ ರಾಜ್. ನಟ ಯಶ್ ಅವರಿಗೆ ಜಿಮ್ ಕೋಚ್ ಆದ ಪಾನಿಪುರಿ ಕಿಟ್ಟಿ ಅವರ ಜೊತೆ ಒಂದಷ್ಟು ಮಾತುಕತೆ ನಡೆಸಿದ್ದಾರೆ. ಆ ವಿಡಿಯೋ ಇಲ್ಲಿದೆ. ‘ಬಡ್ಡೀಸ್​’ ಚಿತ್ರಕ್ಕೆ ಗುರು ತೇಜ್​ ಶೆಟ್ಟಿ ನಿರ್ದೇಶನ ಮಾಡಿದ್ದು, ಭಾರತಿ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಕಿರಣ್​ ರಾಜ್​ಗೆ ಜೋಡಿಯಾಗಿ ಸಿರಿ ಪ್ರಹ್ಲಾದ್​​ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada