ಮೊದಲ ಬಾರಿಗೆ ಮಗುವಿನ ಮುಖ ತೋರಿಸಿದ ನಟಿ ಕಾಜಲ್ ಅಗರ್​​ವಾಲ್​

ಮಗುವಿಗೆ ನೀಲ್ ಎಂದು ನಾಮಕರಣ ಮಾಡಲಾಗಿದೆ. ಮಗು ಜನಿಸಿ ಕೆಲ ತಿಂಗಳ ನಂತರದಲ್ಲಿ ಕಾಜಲ್ ಅಗರ್​ವಾಲ್​ ಮಗುವಿನ ಮುಖ ತೋರಿಸಿದ್ದಾರೆ.

ಮೊದಲ ಬಾರಿಗೆ ಮಗುವಿನ ಮುಖ ತೋರಿಸಿದ ನಟಿ ಕಾಜಲ್ ಅಗರ್​​ವಾಲ್​
ಕಾಜಲ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 13, 2022 | 4:22 PM

ನಟಿ ಕಾಜಲ್​ ಅಗರ್​ವಾಲ್ ಅವರ (Kajal Aggarwal) ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಕಾಜಲ್​ ಅವರಿಗೆ ಏಪ್ರಿಲ್​ ತಿಂಗಳಲ್ಲಿ ಗಂಡು ಮಗು ಜನಿಸಿತ್ತು. ಈಗ ಇದೇ ಮೊದಲ ಬಾರಿಗೆ ಅವರು ಮಗುವಿನ ಮುಖವನ್ನು ತೋರಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ (Instagram) ಅವರು ಫೋಟೋ ಹಂಚಿಕೊಂಡಿದ್ದು, ಇದಕ್ಕೆ ಫ್ಯಾನ್ಸ್ ಲೈಕ್ಸ್ ಒತ್ತುತ್ತಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಮಗುವಿನ ಮುಖ ನೋಡಿ ಫ್ಯಾನ್ಸ್​ ಖುಷಿಪಟ್ಟಿದ್ದಾರೆ.

ನಟಿ ಕಾಜಲ್​ ಅಗರ್​ವಾಲ್ 2020ರ ಅಕ್ಟೋಬರ್​ ತಿಂಗಳಲ್ಲಿ ಮದುವೆ ಆದರು. ತಮ್ಮ ಬಾಯ್​ಫ್ರೆಂಡ್​ ಗೌತಮ್ ಕಿಚ್ಲು ಅವರನ್ನು ವಿವಾಹ ಆಗುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದರು. ತಾವು ​ಪ್ರೆಗ್ನೆಂಟ್​ ಎನ್ನುವ ವಿಚಾರವನ್ನು ಕಾಜಲ್ ಕಳೆದ ವರ್ಷವೇ ಘೋಷಣೆ ಮಾಡಿದ್ದರು. ಇತ್ತೀಚೆಗೆ ಕಾಜಲ್​ಗೆ ಗಂಡು ಮಗು ಜನಿಸಿತ್ತು. ಕಾಜಲ್​ಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದುಬಂದವು. ಮಗುವಿಗೆ ನೀಲ್ ಎಂದು ನಾಮಕರಣ ಮಾಡಲಾಗಿದೆ. ಮಗು ಜನಿಸಿ ಕೆಲ ತಿಂಗಳ ನಂತರದಲ್ಲಿ ಕಾಜಲ್ ಅಗರ್​ವಾಲ್​ ಮಗುವಿನ ಮುಖ ತೋರಿಸಿದ್ದಾರೆ.

ಕಾಜಲ್​ ಮಲಗಿದ್ದಾರೆ. ಅವರ ಪಕ್ಕದಲ್ಲಿ ಮಗು ಮಲಗಿದೆ. ಈ ಫೋಟೋಗೆ ‘ನೀಲ್ ಕಿಚ್ಲು, ನನ್ನ ಜೀವನದ ಪ್ರೀತಿ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಈ ಚಿತ್ರಕ್ಕೆ ರಾಶಿ ಖನ್ನಾ, ಕೀರ್ತಿ ಸುರೇಶ್​​ ಸೇರಿ ಅನೇಕರು ಕಮೆಂಟ್ ಮಾಡಿದ್ದಾರೆ. ಅಭಿಮಾನಿಗಳ ಕಡೆಯಿಂದ ಪ್ರೀತಿ ಹರಿದು ಬಂದಿದೆ.

ಇದನ್ನೂ ಓದಿ
Image
Kajal Aggarwal: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಕಾಜಲ್ ಅಗರ್ವಾಲ್​​
Image
Kajal Aggarwal: ‘ಆಚಾರ್ಯ’ ಚಿತ್ರದಲ್ಲಿ ಕಾಜಲ್‌ ಪಾತ್ರ ಏಕಿಲ್ಲ? ಕಾರಣ ಬಹಿರಂಗಪಡಿಸಿದ ನಿರ್ದೇಶಕ
Image
Kajal Aggarwal: ಕಾಜಲ್ ಅಗರ್ವಾಲ್ ಪುತ್ರನ ಹೆಸರು ಬಹಿರಂಗ; ಮಗುವಿನ ಹೆಸರು ತಿಳಿಸಿದ ಪತಿ ಗೌತಮ್

ಇದನ್ನೂ ಓದಿ: 21 ಮಿಲಿಯನ್​ ಫಾಲೋವರ್ಸ್​ ಪಡೆದ ಖುಷಿಗೆ ನಟಿ ಕಾಜಲ್​ ಅಗರ್​ವಾಲ್​ ಹೊಸ ಫೋಟೋಶೂಟ್​

ವಿಶ್ವ ತಾಯಂದಿರ ದಿನದಂದು ಕಾಜಲ್ ಮಗುವಿನ ಫೋಟೋ ಹಂಚಿಕೊಂಡಿದ್ದರು. ಆದರೆ, ಮುಖವನ್ನು ಅವರು ತೋರಿಸಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಅವರು ನೀಲ್​ನ ಮುಖವನ್ನು ತೋರಿದ್ದಾರೆ.

ಪ್ರಣಿತಾಗೆ ಹೆಣ್ಣು ಮಗು

ಖ್ಯಾತ ನಟಿ ಪ್ರಣಿತಾ ಸುಭಾಷ್ ​ ಅವರು ಇತ್ತೀಚೆಗೆ ಗುಡ್​ ನ್ಯೂಸ್​ ನೀಡಿದ್ದರು. ಅವರ ಮನೆಗೆ ಹೆಣ್ಣು ಮಗುವಿನ ಆಗಮನ ಆಗಿದೆ. ಈ ವಿಚಾರವನ್ನು ಪ್ರಣಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಮಾಡಿದ್ದರು. ಅಲ್ಲದೆ, ಮಗುವಿನ ಜತೆ ಇರುವ ಮುದ್ದಾದ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ತಾಯಿ-ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ