Mahesh Babu: ವಿದೇಶದಲ್ಲಿ ಮಹೇಶ್ ಬಾಬು ರೋಡ್ ಟ್ರಿಪ್; ಹೈಲೈಟ್ ಆದ ಮಗಳು ಸಿತಾರಾ
‘ಸರ್ಕಾರು ವಾರಿ ಪಾಟ’ ಸಿನಿಮಾ ಮೇ 12ರಂದು ರಿಲೀಸ್ ಆಗಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ಗಳಿಸಿದೆ. ಇದೇ ಖುಷಿಯಲ್ಲಿ ಮಹೇಶ್ ಬಾಬು ಫ್ಯಾಮಿಲಿ ಜತೆ ವಿದೇಶಕ್ಕೆ ತೆರಳಿದ್ದಾರೆ.
ಮಹೇಶ್ ಬಾಬು (Mahesh Babu) ಪಕ್ಕಾ ಫ್ಯಾಮಿಲಿ ಮ್ಯಾನ್. ಅವರು ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಾರೆ. ಅವರ ಅಭಿಮಾನಿಗಳಿಗೆ ಈ ವಿಚಾರದ ಬಗ್ಗೆ ಹೆಚ್ಚು ಗೊತ್ತಿದೆ. ಸಿನಿಮಾ ಕೆಲಸ ಹಾಗೂ ಕುಟುಂಬ ಎಂದು ಬಂದರೆ ಅವರ ಮೊದಲ ಆದ್ಯತೆ ಕುಟುಂಬಕ್ಕೆ. ಇದು ಅನೇಕ ಬಾರಿ ಸಾಬೀತಾಗಿದೆ. ಪ್ರತಿ ಸಿನಿಮಾ ತೆರೆಗೆ ಬಂದ ನಂತರ ವಿದೇಶಕ್ಕೆ ತೆರಳೋದು ವಾಡಿಕೆ. ಇಡೀ ಕುಟುಂಬದ ಜತೆ ಅವರು ಹಾಯಾಗಿ ಸುತ್ತಾಡಿ ಬರುತ್ತಾರೆ. ‘ಸರ್ಕಾರು ವಾರಿ ಪಾಟ’ ಸಿನಿಮಾ (Sarkaru Vaari Paata) ಕಳೆದ ತಿಂಗಳು ತೆರೆಗೆ ಬಂದು ದೊಡ್ಡ ಯಶಸ್ಸು ಕಂಡಿದೆ. ಈ ಸಿನಿಮಾ ತೆರೆಗೆ ಬಂದು ಒಂದು ತಿಂಗಳಿಗೆ ಇಡೀ ಕುಟುಂಬ ವಿದೇಶಕ್ಕೆ ಹಾರಿದೆ. ಈ ಬಗ್ಗೆ ಸ್ವತಃ ಮಹೇಶ್ ಬಾಬು ಅವರು ಅಪ್ಡೇಟ್ ನೀಡಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಮಹೇಶ್ ಬಾಬು ಮಗಳು ಸಿತಾರಾ ಈ ಫೋಟೋದಲ್ಲಿ ಹೈಲೈಟ್ ಆಗಿದ್ದಾಳೆ.
‘ಸರ್ಕಾರು ವಾರಿ ಪಾಟ’ ಸಿನಿಮಾ ಮೇ 12ರಂದು ರಿಲೀಸ್ ಆಗಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ಗಳಿಸಿದೆ. ಇತ್ತೀಚೆಗೆ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದ್ದು, ದುಡ್ಡು ಕೊಟ್ಟು ಮಾತ್ರ ವೀಕ್ಷಿಸಬಹುದಾಗಿದೆ. ಚಂದಾದಾರರಿಗೆ ಶೀಘ್ರವೇ ಈ ಸಿನಿಮಾ ಉಚಿತವಾಗಿ ವೀಕ್ಷಿಸಬಹುದು. ಈಗ ಮಹೇಶ್ ಬಾಬು ಫ್ಯಾಮಿಲಿ ಜತೆ ವಿದೇಶಕ್ಕೆ ತೆರಳಿದ್ದಾರೆ.
ಪತ್ನಿ ನಮೃತಾ, ಮಗಳು ಸಿತಾರಾ ಜತೆ ಯುರೋಪ್ ಟ್ರಿಪ್ ತೆರಳಿದ್ದಾರೆ ಮಹೇಶ್ ಬಾಬು. ಅಲ್ಲಿ ಇವರು ರೋಡ್ ಟ್ರಿಪ್ ತೆರಳುವ ಪ್ಲ್ಯಾನ್ ಮಾಡಿದ್ದಾರೆ. ‘ರೋಡ್ ಟ್ರಿಪ್. ಮುಂದಿನ ನಿಲ್ದಾಣ ಇಟಲಿ’ ಎಂದು ಮಹೇಶ್ ಬಾಬು ಬರೆದುಕೊಂಡಿದ್ದಾರೆ. ಈ ಫೋಟೋ ಮಹೇಶ್ ಬಾಬು ಫ್ಯಾನ್ ಪೇಜ್ಗಳಲ್ಲಿ ವೈರಲ್ ಆಗಿದೆ.
View this post on Instagram
ಇನ್ನು ನಮೃತಾ ಕೂಡ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಮಗಳು ಸಿತಾರಾ ಹಾಗೂ ಮಗ ಗೌತಮ್ ಜತೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಫ್ಯಾನ್ಸ್ ಬಗೆ ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ಈ ಫ್ಯಾಮಿಲಿ ಫೋಟೋವನ್ನು ಇಷ್ಟಪಟ್ಟಿದ್ದಾರೆ.
View this post on Instagram
ಮಹೇಶ್ ಬಾಬು ಅವರು ಮುಂದಿನ ಚಿತ್ರಕ್ಕಾಗಿ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಜತೆ ಕೈ ಜೋಡಿಸಿದ್ದಾರೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಪೂಜಾ ಹೆಗ್ಡೆ ಈ ಚಿತ್ರಕ್ಕೆ ನಾಯಕಿ ಆಗುವ ಸಾಧ್ಯತೆ ಇದೆ. ಈ ಸಿನಿಮಾ ಕೆಲಸಗಳು ಪೂರ್ಣಗೊಂಡ ಬಳಿಕ ಅವರು ನಿರ್ದೇಶಕ ರಾಜಮೌಳಿ ಸಿನಿಮಾದಲ್ಲಿ ನಟಿಸಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.