‘ಸರ್ಕಾರು ವಾರಿ ಪಾಟ’ ಬಾಕ್ಸ್​ ಆಫೀಸ್​ ಕಲೆಕ್ಷನ್​: ಮೊದಲ ದಿನ ಮಹೇಶ್​ ಬಾಬು ಸಿನಿಮಾ ಗಳಿಸಿದ್ದು ಎಷ್ಟು?

Sarkaru Vaari Paata Box Office Collection: ‘ಸರ್ಕಾರು ವಾರಿ ಪಾಟ’ ಸಿನಿಮಾಗೆ ಮಹೇಶ್​ ಬಾಬು ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಫಸ್ಟ್​ ಡೇ ಬರೋಬ್ಬರಿ 45 ಕೋಟಿ ರೂಪಾಯಿ ಗಳಿಕೆ ಆಗಿದೆ ಎಂದು ವರದಿ ಆಗಿದೆ.

‘ಸರ್ಕಾರು ವಾರಿ ಪಾಟ’ ಬಾಕ್ಸ್​ ಆಫೀಸ್​ ಕಲೆಕ್ಷನ್​: ಮೊದಲ ದಿನ ಮಹೇಶ್​ ಬಾಬು ಸಿನಿಮಾ ಗಳಿಸಿದ್ದು ಎಷ್ಟು?
ಮಹೇಶ್ ಬಾಬು
Follow us
TV9 Web
| Updated By: ಮದನ್​ ಕುಮಾರ್​

Updated on:May 13, 2022 | 12:27 PM

ನಟ ಮಹೇಶ್​ ಬಾಬು (Mahesh Babu) ಅವರ ಸಿನಿಮಾಗಳಿಗೆ ಎಲ್ಲ ಕಡೆಗಳಲ್ಲಿ ಒಳ್ಳೆಯ ಮಾರ್ಕೆಟ್​ ಇದೆ. ತೆಲುಗು ರಾಜ್ಯಗಳಲ್ಲಿ ಮಾತ್ರಲ್ಲದೇ ದೇಶಾದ್ಯಂತ ಅವರ ಚಿತ್ರಗಳನ್ನು ಜನರು ವೀಕ್ಷಿಸುತ್ತಾರೆ. ಮೇ 12ರಂದು ಮಹೇಶ್​ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ (Sarkaru Vaari Paata) ಸಿನಿಮಾ ಬಿಡುಗಡೆ ಆಯಿತು. ಮೊದಲ ದಿನವೇ ಈ ಚಿತ್ರವನ್ನು ಜನರು ಮುಗಿಬಿದ್ದು ನೋಡಿದ್ದಾರೆ. ಪರಿಣಾಮವಾಗಿ ಸಿನಿಮಾ ಒಳ್ಳೆಯ ಓಪನಿಂಗ್​ ಪಡೆದುಕೊಂಡಿದೆ. ಫಸ್ಟ್​ ಡೇ ಫಸ್ಟ್​ ಶೋ ನೋಡಿದ ಪ್ರೇಕ್ಷಕರಿಂದ ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತು. ಬಾಕ್ಸ್​ ಆಫೀಸ್​ ಗಳಿಕೆ (Sarkaru Vaari Paata Box Office Collection) ಮೇಲೆ ಅದು ಪರಿಣಾಮ ಬೀರಿಲ್ಲ. ಮೊದಲ ದಿನವೇ ಈ ಚಿತ್ರ ಬಹುಕೋಟಿ ರೂಪಾಯಿ ಬಿಸ್ನೆಸ್​ ಮಾಡಿದೆ. ಇದು ಬಹುನಿರೀಕ್ಷಿತ ಚಿತ್ರ ಆಗಿದ್ದರೂ ಕೂಡ ಬೇರೆ ಭಾಷೆಗಳಿಗೆ ಡಬ್​ ಆಗಿಲ್ಲ. ಕೇವಲ ತೆಲುಗಿನಲ್ಲಿ ರಿಲೀಸ್​ ಆದ ಈ ಸಿನಿಮಾಗೆ ಪ್ರೇಕ್ಷಕರು ಭರ್ಜರಿ ರೆಸ್ಪಾನ್ಸ್​ ನೀಡಿದ್ದಾರೆ. ಫಸ್ಟ್​ ಡೇ ಬರೋಬ್ಬರಿ 45 ಕೋಟಿ ರೂಪಾಯಿ ಗಳಿಕೆ ಆಗಿದೆ ಎಂಬ ವರದಿ ಆಗಿದೆ.

‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಮಹೇಶ್​ ಬಾಬು ಅವರು ಮಾಸ್ ಅವತಾರ ತಾಳಿದ್ದಾರೆ. ಬ್ಯಾಂಕಿಂಗ್​ ಕ್ಷೇತ್ರದ ಕುರಿತಾದ ಕಥೆಯನ್ನು ಇಟ್ಟುಕೊಂಡು ಅವರು ಪ್ರೇಕ್ಷಕರಿಗೆ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ. ಪರಶುರಾಮ್​ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಮಹೇಶ್​ ಬಾಬು ಅವರಿಗೆ ಜೋಡಿಯಾಗಿ ಕೀರ್ತಿ ಸುರೇಶ್​ ನಟಿಸಿದ್ದಾರೆ. ಅದ್ದೂರಿ ಆ್ಯಕ್ಷನ್​ ದೃಶ್ಯಗಳನ್ನು ಮಹೇಶ್​ ಬಾಬು ಫ್ಯಾನ್ಸ್​ ಇಷ್ಟಪಟ್ಟಿದ್ದಾರೆ. ಒಟ್ಟಾರೆಯಾಗಿ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್​ ಮಾಡುತ್ತಿದೆ.

ಇದನ್ನೂ ಓದಿ
Image
ಮಹೇಶ್​ ಬಾಬು ಮಾತಿಗೆ ಬೆಂಬಲ ನೀಡಿದ ಕಂಗನಾ; ಬಾಲಿವುಡ್ ವರ್ಸಸ್​​ ಸೌತ್​ ಚರ್ಚೆ ಇನ್ನಷ್ಟು ಜೋರು
Image
‘ಒಮ್ಮೆ ನೋಡಬಹುದು, ಹೆಚ್ಚು ಮನರಂಜನೆ ಇಲ್ಲ’: ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಪ್ರೇಕ್ಷಕರ ಪ್ರಾಮಾಣಿಕ ವಿಮರ್ಶೆ
Image
‘ಸಮಂತಾ ಆಂಟಿ ನನ್ನ ಬೆಸ್ಟ್​ ಫ್ರೆಂಡ್​’ ಎಂದ ಮಹೇಶ್​ ಬಾಬು ಪುತ್ರಿ ಸಿತಾರಾ; ವಿಡಿಯೋ ವೈರಲ್​
Image
Sarkaru Vaari Paata Twitter review: ‘ಸರ್ಕಾರು ವಾರಿ ಪಾಟ’ ಚಿತ್ರ ನೋಡಿ ಮಹೇಶ್​ ಬಾಬು ಫ್ಯಾನ್ಸ್​ ಏನಂದ್ರು?

ಆಂಧ್ರ ಮತ್ತು ತೆಲಂಗಾಣದ ಯಾವ ಏರಿಯಾದಲ್ಲಿ ಎಷ್ಟು ಕಲೆಕ್ಷನ್​ ಆಗಿದೆ ಎಂಬ ಕುರಿತು ಟ್ರೇಡ್​ ಅನಲಿಸ್ಟ್ ರಮೇಶ್​ ಬಾಲ ಅವರು ಟ್ವೀಟ್​ ಮಾಡಿದ್ದಾರೆ. ತೆಲುಗು ರಾಜ್ಯಗಳಿಂದ ಮೊದಲ ದಿನ 36.63 ಕೋಟಿ ರೂಪಾಯಿ ಕಮಾಯಿ ಆಗಿದೆ ಎಂದು ಅವರು ​ಮಾಹಿತಿ ಹಂಚಿಕೊಂಡಿದ್ದಾರೆ. ವಿದೇಶದಲ್ಲೂ ಮಹೇಶ್​ ಬಾಬು ಅವರಿಗೆ ಅಭಿಮಾನಿಗಳಿದ್ದಾರೆ. ಈ ಚಿತ್ರಕ್ಕೆ ಅಮೆರಿಕದಲ್ಲಿ 1.5 ಮಿಲಿಯನ್​ ಡಾಲರ್​ ಕಲೆಕ್ಷನ್​ ಆಗಿದೆ ಎಂದು ವರದಿ ಆಗಿದೆ. ಈ ಎಲ್ಲ ಕಲೆಕ್ಷನ್​ ರಿಪೋರ್ಟ್​ ಕುರಿತು ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್’ ಕಡೆಯಿಂದ ಅಧಿಕೃತ ಮಾಹಿತಿ ಹೊರಬರಬೇಕಿದೆ.

ಮಹೇಶ್​ ಬಾಬು ಅವರಿಗೆ ದಕ್ಷಿಣ ಭಾರತದಲ್ಲಿ ಸಖತ್ ಬೇಡಿಕೆ ಇದೆ. ಅವರ ಸಿನಿಮಾಗಳು ದಕ್ಷಿಣದಲ್ಲಿ ಸೂಪರ್​ ಹಿಟ್​ ಆಗುತ್ತವೆ. ಈ ಹಿಂದೆ ಬಿಡುಗಡೆ ಆಗಿದ್ದ ‘ಸರಿಲೇರು ನೀಕೆವ್ವರು’ ಸಿನಿಮಾ ಕೂಡ ಹಿಟ್​ ಆಗಿತ್ತು. ಈಗ ಅವರು ‘ಸರ್ಕಾರು ವಾರಿ ಪಾಟ’ ಚಿತ್ರದ ಮೂಲಕ ಮತ್ತೊಂದು ಗೆಲುವು ಕಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಬಾಲಿವುಡ್​ ಬಗ್ಗೆ ನೀಡಿದ ಹೇಳಿಕೆ ಕೂಡ ಸಖತ್​ ಚರ್ಚೆ ಹುಟ್ಟು ಹಾಕಿದೆ. ‘ಬಾಲಿವುಡ್​ಗೆ ನನ್ನನ್ನು ಭರಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದರು. ಆ ಹೇಳಿಕೆ ಕುರಿತು ಬಾಲಿವುಡ್​ನ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ಮಹೇಶ್ ಬಾಬು ಹೇಳಿದ್ದು ಸರಿ’ ಎಂದು ಕಂಗನಾ ರಣಾವತ್​ ಪ್ರತಿಕ್ರಿಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:27 pm, Fri, 13 May 22

ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ