‘ಕೆಜಿಎಫ್ 2’ ಹೆಸರಿಗೆ ಸೇರಿತು ಮತ್ತೊಂದು ಅಪರೂಪದ ದಾಖಲೆ; ಏನದು?

‘ಕೆಜಿಎಫ್ 2’ ಹೆಸರಿಗೆ ಸೇರಿತು ಮತ್ತೊಂದು ಅಪರೂಪದ ದಾಖಲೆ; ಏನದು?
ಯಶ್

ಕನ್ನಡದ ಸಿನಿಮಾ ಒಂದು ಆ ದೇಶದಲ್ಲಿ ಇಷ್ಟು ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದ್ದು ಇದೇ ಮೊದಲು ಅನ್ನೋದು ವಿಶೇಷ.ಈ ಮೂಲಕ ಅಪರೂಪದ ದಾಖಲೆಯನ್ನು ‘ಕೆಜಿಎಫ್ 2’ ಮಾಡಿದೆ.

TV9kannada Web Team

| Edited By: Rajesh Duggumane

May 13, 2022 | 1:38 PM

‘ಕೆಜಿಎಫ್: ಚಾಪ್ಟರ್ 2’ ಸಿನಿಮಾ (Rakshit Shetty) ನಿತ್ಯ ಹೊಸ ಹೊಸ ದಾಖಲೆ ಬರೆದು ಮುನ್ನುಗ್ಗುತ್ತಿದೆ. ಈ ಸಿನಿಮಾ ತೆರೆಕಂಡು ಒಂದು ತಿಂಗಳು ಕಳೆದರೂ ಚಿತ್ರದ ಕಲೆಕ್ಷನ್ ಒಳ್ಳೆಯ ರೀತಿಯಲ್ಲೇ ಆಗುತ್ತಿದೆ. ವಿದೇಶದಲ್ಲೂ ಚಿತ್ರವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಹೀಗಾಗಿ, ವಿದೇಶದಲ್ಲಿ ಈ ಸಿನಿಮಾ ಭರ್ಜರಿ ಕಮಾಯಿ ಮಾಡುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ, ಸಿಂಗಾಪುರ್ ಮೊದಲಾದ ಕಡೆಗಳಲ್ಲಿ ಭಾರತದ ಸಿನಿಮಾಗಳು ಹೆಚ್ಚಾಗಿ ಪ್ರದರ್ಶನ ಕಾಣುತ್ತವೆ. ಉಳಿದ ಕಡೆಗಳಲ್ಲಿ ಸಿನಿಮಾ ರಿಲೀಸ್ ಆದರೂ ಹೆಚ್ಚು ದಿನ ಚಿತ್ರಮಂದಿರದಲ್ಲಿ ಇರುವುದಿಲ್ಲ. ಆದರೆ, ದೂರದ ದಕ್ಷಿಣ ಕೊರಿಯಾದಲ್ಲಿ(South Korea)  ‘ಕೆಜಿಎಫ್ 2’ ಧಮಾಕಾ ಮಾಡುತ್ತಿದೆ. ಅಲ್ಲಿನ ಸಿನಿಪ್ರಿಯರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ಕನ್ನಡ ಸಿನಿಮಾಗಳು ರಿಲೀಸ್ ಆಗೋದು ತುಂಬಾನೇ ಕಡಿಮೆ. ಆದರೆ, ‘ಕೆಜಿಎಫ್ 2’ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿದೆ. ಕೇವಲ ಭಾರತೀಯರು ಮಾತ್ರವಲ್ಲ, ದಕ್ಷಿಣ ಕೊರಿಯಾದ ಮಂದಿ ಕೂಡ ಈ ಸಿನಿಮಾವನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಕನ್ನಡದ ಸಿನಿಮಾ ಒಂದು ಆ ದೇಶದಲ್ಲಿ ಇಷ್ಟು ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದ್ದು ಇದೇ ಮೊದಲು ಅನ್ನೋದು ವಿಶೇಷ.ಈ ಮೂಲಕ ಅಪರೂಪದ ದಾಖಲೆಯನ್ನು ‘ಕೆಜಿಎಫ್ 2’ ಮಾಡಿದೆ.

ದಕ್ಷಿಣ ಕೊರಿಯಾ ಫ್ಯಾನ್ಸ್​ಗಳು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ. ‘ಕೆಜಿಎಫ್ 2’ ಸಿನಿಮಾ ಕನ್ನಡ, ತೆಲುಗು, ತಮಿಳು ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದೆ. ದಕ್ಷಿಣ ಕೊರಿಯಾದಲ್ಲಿ ಹಿಂದಿ ಹಾಗೂ ಕನ್ನಡ ವರ್ಷನ್ ಪ್ರದರ್ಶನ ಕಾಣುತ್ತಿದೆ ಎನ್ನಲಾಗಿದೆ. ಭಾಷೆ ಅರ್ಥವಾಗದಿದ್ದರೂ ದಕ್ಷಿಣ ಕೊರಿಯಾ ಮಂದಿ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ.

ಬಾಲಿವುಡ್​ನಲ್ಲಿ 420 ಕೋಟಿ ರೂಪಾಯಿ

‘ಕೆಜಿಎಫ್ 2’ ಸಿನಿಮಾ ಬಾಲಿವುಡ್​ನಲ್ಲಿ 420 ಕೋಟಿ ರೂಪಾಯಿ ಗಳಿಸಿದೆ. ಸಿನಿಮಾ ತೆರೆಕಂಡು ಒಂದು ತಿಂಗಳು ಕಳೆದಿದೆ. ಗುರುವಾರ (ಮೇ 13) ಈ ಸಿನಿಮಾ 1 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ‘ಕೆಜಿಎಫ್ 2’ ಸೃಷ್ಟಿ ಮಾಡಿರುವ ಹೈಪ್​ಗೆ ಸಾಕ್ಷಿ. ಹಿಂದಿಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಚಿತ್ರದ ಕಲೆಕ್ಷನ್ ಬಗ್ಗೆ ಬಾಲಿವುಡ್ ಮಂದಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಈ ವಾರಾಂತ್ಯದಲ್ಲಿ ಸಿನಿಮಾ ಒಳ್ಳೆಯ ಗಳಿಕೆ ಮಾಡಬಹುದು.

l

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada