KGF Chapter 2: ‘ನನ್ನ ಸಾಮರ್ಥ್ಯವನ್ನು ಮತ್ತೆ ನೆನಪಿಸಿತು’; ಕೆಜಿಎಫ್ ಚಾಪ್ಟರ್ 2 ಬಗ್ಗೆ ಸಂಜಯ್ ದತ್ ವಿಶೇಷ ಮಾತು

Sanjay Dutt | Yash | Prashanth Neel: ಸಂಜಯ್ ದತ್ ತಮ್ಮ ‘ಅಧೀರ’ ಪಾತ್ರದ ಬಗ್ಗೆ ಬರೆದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ, ‘‘ನನ್ನ ಸಾಮರ್ಥವನ್ನು ನನಗಿದು ನೆನಪಿಸಿದೆ’’ ಎಂದು ಹೇಳಿದ್ದಾರೆ.

KGF Chapter 2: ‘ನನ್ನ ಸಾಮರ್ಥ್ಯವನ್ನು ಮತ್ತೆ ನೆನಪಿಸಿತು’; ಕೆಜಿಎಫ್ ಚಾಪ್ಟರ್ 2 ಬಗ್ಗೆ ಸಂಜಯ್ ದತ್ ವಿಶೇಷ ಮಾತು
‘ಕೆಜಿಎಫ್ ಚಾಪ್ಟರ್ 2’ ಚಿತ್ರದಲ್ಲಿ ಸಂಜಯ್ ದತ್
Follow us
TV9 Web
| Updated By: shivaprasad.hs

Updated on: Apr 23, 2022 | 1:55 PM

‘ಕೆಜಿಎಫ್ ಚಾಪ್ಟರ್ 2’ (KGF Chapter 2) ಭರ್ಜರಿ ಯಶಸ್ಸು ಕಂಡಿರುವುದಲ್ಲದೇ ವಿಶ್ವಾದ್ಯಂತ ಅಪಾರ ಮೆಚ್ಚುಗೆ ಗಳಿಸಿದೆ. ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಕೂಡ ದೀರ್ಘ ಕಾಲದಿಂದ ಬಹುದೊಡ್ಡ ಗೆಲುವಿಗೆ ಕಾದಿದ್ದರು. ಅವರಿಗೆ ಕನ್ನಡ ಚಿತ್ರದ ಮೂಲಕ ದೊಡ್ಡ ಗೆಲುವು ಸಿಕ್ಕಿರುವುದು ವಿಶೇಷ. ಚಿತ್ರ ನೋಡಿದ ವಿಮರ್ಶಕರು, ಅಭಿಮಾನಿಗಳು ಈ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಾ, ಸಂಜಯ್ ಅವರಲ್ಲಿದ್ದ ಅಭಿನಯವನ್ನು ಇದುವರೆಗಿನ ನಿರ್ದೇಶಕರೆಲ್ಲಾ ಸದುಪಯೋಗ ಪಡಿಸಿಕೊಂಡಿಲ್ಲವೇನೋ ಎಂದು ಬರೆದಿದ್ದರು. ಅಲ್ಲದೇ ಇದು ಕೇವಲ ಸೂಪರ್ ಹಿಟ್ ಮಾತ್ರವಲ್ಲ, ಸಂಜಯ್ ದತ್ ಎಂತಹ ಪಾತ್ರವನ್ನು ನಿರ್ವಹಿಸಬಹುದು ಎಂಬುದನ್ನು ಜನರಿಗೆ ತೋರಿಸಿಕೊಟ್ಟ ಚಿತ್ರ ಎಂದೂ ಹೇಳಿದ್ದರು. ಇದೀಗ ಸ್ವತಃ ಸಂಜಯ್ ದತ್ ತಮ್ಮ ‘ಅಧೀರ’ (Adheeraa) ಪಾತ್ರದ ಬಗ್ಗೆ, ಚಿತ್ರದ ಬಗ್ಗೆ, ನಿರ್ದೇಶಕರ ಕಲ್ಪನೆಯ ಬಗ್ಗೆ ಬರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ, ‘‘ಈ ಚಿತ್ರ ನನ್ನ ಸಾಮರ್ಥವನ್ನು ನನಗೆ ಮತ್ತೆ ನೆನಪಿಸಿದೆ’’ ಎಂದು ಬರೆದಿದ್ದಾರೆ.

ಸಂಜಯ್ ದತ್ ತಮ್ಮ ಬರಹದಲ್ಲಿ ಹೇಳಿದ್ದೇನು?

ಸಂಜಯ್ ದತ್ ತಮ್ಮ ಬರಹದಲ್ಲಿ ಅಭಿಮಾನಿಗಳು, ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಿಗೆ ಧನ್ಯವಾದ ಹೇಳಿದ್ದಾರೆ. ನಂತರ ಕೆಜಿಎಫ್ ಚಾಪ್ಟರ್ 2 ತಮ್ಮ ವೃತ್ತಿ ಜೀವನದಲ್ಲಿ ಹೇಗೆ ವಿಶೇಷವಾಗಿದೆ ಎಂಬುದನ್ನು ‘ಅಧೀರ’ ಪಾತ್ರಧಾರಿ ವಿವರಿಸಿದ್ದಾರೆ. ‘‘ವೃತ್ತಿಜೀವನದಲ್ಲಿ ಕೆಲವೊಂದು ಚಿತ್ರಗಳು ಬೇರೆಲ್ಲಾ ಚಿತ್ರಗಳಿಗಿಂತ ವಿಶೇಷವಾಗಿರುತ್ತವೆ. ಪ್ರತಿ ಬಾರಿ ನನ್ನನ್ನು ನಾನು ಕಂಫರ್ಟ್ ಜೋನ್​ನಿಂದ ಹೊರತರುವ ಚಿತ್ರಗಳನ್ನು ಹುಡುಕುತ್ತಿರುತ್ತೇನೆ. ಕೆಜಿಎಫ್ 2 ಅಂತಹ ಚಿತ್ರವಾಗಿತ್ತು’’ ಎಂದಿದ್ದಾರೆ ಸಂಜಯ್ ದತ್.

ಮುಂದುವರೆದು ಬರೆದಿರುವ ನಟ, ‘‘ಕೆಜಿಎಫ್ ಚಾಪ್ಟರ್ 2 ಚಿತ್ರ ನನ್ನ ಸಾಮರ್ಥ್ಯವನ್ನೇ ನನಗೆ ನೆನಪಿಸಿತು ಹಾಗೆಯೇ ಆನಂದವನ್ನೂ ನೀಡಿತು. ಜತೆಗೆ ಸಿನಿಮಾವೊಂದು ಬಹಳ ಆಸಕ್ತಿಯಿಂದ ರೂಪುಗೊಂಡರೆ ಹೇಗಿರುತ್ತದೆ ಎಂಬುದನ್ನು ತಿಳಿಸಿಕೊಟ್ಟಿತು’’ ಎಂದಿದ್ದಾರೆ.

ನಿರ್ದೇಶಕ ಪ್ರಶಾಂತ್ ನೀಲ್ ಬಗ್ಗೆ ಸಂಜಯ್ ದತ್ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘‘ನನ್ನ ನಿರ್ದೇಶಕ ಪ್ರಶಾಂತ್ ನೀಲ್ ಅಧೀರನ ಪಾತ್ರವನ್ನು ನನಗೆ ವಿವರಿಸಿದರು. ಆ ಇಡೀ ಪಾತ್ರ ಮೂಡಿ ಬಂದ ಬಗೆಗೆ ಪ್ರಶಾಂತ್ ನೀಲ್​ಗೆ ಕ್ರೆಡಿಟ್ ಸಲ್ಲಬೇಕು. ಹಡಗಿನ ನಾವಿಕರಾಗಿರುವ ಅವರ ಕಲ್ಪನೆಯನ್ನು ನಾವೆಲ್ಲಾ ಸಾಕಾರಗೊಳಿಸಿದೆವು’’ ಎಂದು ಸಂಜಯ್ ದತ್ ತಮ್ಮ ಬರಹದಲ್ಲಿ ಬರೆದಿದ್ದಾರೆ.

‘‘ಜೀವನದಲ್ಲಿ ಉತ್ತಮವಾಗಿದ್ದು ಮಾಡಲು ಇನ್ನೂ ಇದೆ ಎನ್ನುವುದನ್ನು ಚಲನಚಿತ್ರವು ನನಗೆ ನೆನಪಿಸುತ್ತದೆ’’ ಎಂದು ಬರೆದಿರುವ ಸಂಜಯ್ ದತ್, ತಮ್ಮ ವೃತ್ತಿಜೀವನಕ್ಕೆ ಆಧಾರವಾಗಿರುವ ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಸಂಜಯ್ ದತ್ ಪೋಸ್ಟ್ ಇಲ್ಲಿದೆ:

ಪ್ರಸ್ತುತ ‘ಕೆಜಿಎಫ್ ಚಾಪ್ಟರ್ 2’ ಹಿಂದಿ ಭಾಷಿಕ ರಾಜ್ಯಗಳಾದ ಉತ್ತರ ಭಾರತದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದುವರೆಗೆ 280 ಕೋಟಿ ರೂಗಳನ್ನು ಗಳಿಸಿದ್ದು, ಈ ವೀಕೆಂಡ್​ ಮುಗಿಯುವುದರೊಳಗೆ ಚಿತ್ರದ ಕಲೆಕ್ಷನ್ 300 ಕೋಟಿ ರೂ ದಾಟುವ ನಿರೀಕ್ಷೆಗಳಿವೆ.

ಸಂಜಯ್ ದತ್ ಚಿತ್ರಗಳ ವಿಷಯಕ್ಕೆ ಬಂದರೆ, ನಟ ‘ಶಂಷೇರಾ’, ‘ಪೃಥ್ವಿರಾಜ್’ ಮೊದಲಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ‘ಜೆರ್ಸಿ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ; ಬಾಲಿವುಡ್​ ಅಂಗಳದಲ್ಲಿ ಮುಂದುವರಿಯಲಿದೆ ‘ಕೆಜಿಎಫ್ 2’ ಅಬ್ಬರ

ಆರ್​ಆರ್​ಆರ್​ ಸಿನಿಮಾ ಮಾಡಿರದ ದಾಖಲೆ ಮಾಡಿದ ‘ಕೆಜಿಎಫ್ 2’ ಸಿನಿಮಾ; ಏನದು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ