Michael Jackson Children: ಮೈಕೆಲ್​ ಜಾಕ್ಸನ್​ ಮಕ್ಕಳು ಈಗ ಹೇಗಿದ್ದಾರೆ? ಪ್ಯಾರಿಸ್​, ಪ್ರಿನ್ಸ್​ ಕಂಡು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ ಫ್ಯಾನ್ಸ್​

Tony Awards 2022: ಮೈಕೆಲ್​ ಜಾಕ್ಸನ್ ಪುತ್ರಿ ಪ್ಯಾರಿಸ್​ ಜಾಕ್ಸನ್ ಅವರಿಗೆ ಈಗ 24ರ ಪ್ರಾಯ. ಪುತ್ರ ಪ್ರಿನ್ಸ್​ ಜಾಕ್ಸನ್​ಗೆ 25 ವರ್ಷ ವಯಸ್ಸು.

Michael Jackson Children: ಮೈಕೆಲ್​ ಜಾಕ್ಸನ್​ ಮಕ್ಕಳು ಈಗ ಹೇಗಿದ್ದಾರೆ? ಪ್ಯಾರಿಸ್​, ಪ್ರಿನ್ಸ್​ ಕಂಡು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ ಫ್ಯಾನ್ಸ್​
ಪ್ಯಾರಿಸ್ ಜಾಕ್ಸನ್, ಪ್ರಿನ್ಸ್ ಜಾಕ್ಸನ್, ಮೈಕೆಲ್ ಜಾಕ್ಸನ್,
Follow us
TV9 Web
| Updated By: ಮದನ್​ ಕುಮಾರ್​

Updated on:Jun 13, 2022 | 1:54 PM

ಪಾಪ್​ ಸಂಗೀತ ಲೋಕದ ಲೆಜೆಂಡರಿ ಪ್ರತಿಭೆ, ಗಾಯಕ, ಡ್ಯಾನ್ಸರ್​ ಮೈಕೆಲ್​ ಜಾಕ್ಸನ್ (Michael Jackson)​ ಅವರ ಬಗ್ಗೆ ಕೇಳದವರೇ ಇಲ್ಲ. ಅವರ ಗಾಯನ ಮತ್ತು ಡ್ಯಾನ್ಸ್​ ಕಂಡು ವಿಶ್ವಾದ್ಯಂತ ಇರುವ ಜನರು ನಿಬ್ಬೆರಗಾಗಿದ್ದರು. ಅವರು ಇಹಲೋಕ ತ್ಯಜಿಸಿ 13 ವರ್ಷಗಳೇ ಕಳೆದಿದೆ. ಮೈಕೆಲ್​ ಜಾಕ್ಸನ್​ ಅವರನ್ನು ಅಭಿಮಾನಿಗಳು ಸದಾ ಮಿಸ್​ ಮಾಡಿಕೊಳ್ಳುತ್ತಾರೆ. ಇಂದಿಗೂ ಅವರ ಮ್ಯೂಸಿಕ್​ ಮತ್ತು ಡ್ಯಾನ್ಸ್​ ವಿಡಿಯೋಗಳನ್ನು ನೋಡಿ ಜನರು ಎಂಜಾಯ್​ ಮಾಡುತ್ತಾರೆ. ಮೈಕೆಲ್​ ಜಾಕ್ಸನ್​ ಅವರ ಮಕ್ಕಳಾದ ಪ್ಯಾರಿಸ್​ ಜಾಕ್ಸನ್​ (Paris Jackson) ಮತ್ತು ಪ್ರಿನ್ಸ್​ ಜಾಕ್ಸನ್​ (Prince Jackson) ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈಗ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಬೆಳೆದು ನಿಂತಿರುವ ಇವರಿಬ್ಬರ ಫೋಟೋಗಳು ಈಗ ವೈರಲ್​ ಆಗಿವೆ. ಈ ವರ್ಷದ ‘ಟೋನಿ ಅವಾರ್ಡ್​’ ಕಾರ್ಯಕ್ರಮದಲ್ಲಿ ಅವರು ಹಾಜರಿ ಹಾಕಿದ್ದಾರೆ. ಅವರನ್ನು ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಮೈಕೆಲ್​ ಜಾಕ್ಸನ್​ ಅವರು 2009ರಲ್ಲಿ ನಿಧನರಾದಾಗ ಪ್ಯಾರಿಸ್​ ಜಾಕ್ಸನ್​ ಮತ್ತು ಪ್ರಿನ್ಸ್​ ಜಾಕ್ಸನ್ ಚಿಕ್ಕವರಾಗಿದ್ದರು. ತಂದೆಗೆ ಅವರು ಅಂತಿಮ ನಮನ ಸಲ್ಲಿಸಿದ ವಿಡಿಯೋಗಳು ವೈರಲ್​ ಆಗಿದ್ದವು. ಈಗ ಮಕ್ಕಳಿಬ್ಬರೂ ಬೆಳೆದು ನಿಂತಿದ್ದಾರೆ. ಪುತ್ರಿ ಪ್ಯಾರಿಸ್​ ಜಾಕ್ಸನ್ ಅವರಿಗೆ ಈಗ 24ರ ಪ್ರಾಯ. ಪುತ್ರ ಪ್ರಿನ್ಸ್​ ಜಾಕ್ಸನ್​ಗೆ 25 ವರ್ಷ ವಯಸ್ಸು.

ಇದನ್ನೂ ಓದಿ
Image
‘ಇದು ಅಸಾಧ್ಯ’; ಮಗ ಸಿದ್ಧಾಂತ್​​ ಕಪೂರ್​ ಡ್ರಗ್ಸ್​ ಸೇವಿಸಿದ್ದಾರಲ್ಲ ಅಂತ ಕೇಳಿದ್ದಕ್ಕೆ ತಂದೆ ಶಕ್ತಿ ಕಪೂರ್​ ಹೇಳಿದ್ದಿಷ್ಟು​
Image
Siddhanth Kapoor: ಬೆಂಗಳೂರು ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶ್ರದ್ಧಾ ಕಪೂರ್​ ಅಣ್ಣ ಸಿದ್ಧಾಂತ್​ ಕಪೂರ್​ ಹಿನ್ನೆಲೆ ಏನು?
Image
ಮೈ ಮೇಲೆ ಜನರು ಚಪ್ಪಲಿ ಎಸೆದಾಗ ಖುಷಿಪಟ್ಟಿದ್ದ ಹಿಂದಿ ಖಳನಟ; ಇಂಟರೆಸ್ಟಿಂಗ್​ ಘಟನೆ ವಿವರಿಸಿದ ಕೀರ್ತಿರಾಜ್​
Image
36 ವರ್ಷದ ಬಳಿಕ ಮರುಕಳಿಸಿತು ಇತಿಹಾಸ; ಕಮಲ್​ ಹಾಸನ್​-ಚಿರಂಜೀವಿ ಸ್ನೇಹದ ರೆಟ್ರೋ ಫೋಟೋ ವೈರಲ್

ಇದನ್ನೂ ಓದಿ: Viral News: ಮೈಕೆಲ್ ಜಾಕ್ಸನ್ ದೆವ್ವವನ್ನೇ ಮದುವೆಯಾದ ಮಹಿಳೆ; ಥ್ರಿಲ್ಲಿಂಗ್ ಪ್ರೇಮ್ ಕಹಾನಿ ಇಲ್ಲಿದೆ

ನಟಿ, ಮಾಡೆಲ್​ ಮತ್ತು ಗಾಯಕಿಯಾಗಿ ಪ್ಯಾರಿಸ್​ ಜಾಕ್ಸನ್ ಗುರುತಿಸಿಕೊಂಡಿದ್ದಾರೆ. ಅವರ ನಟನೆಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. 75ನೇ ವರ್ಷದ ‘ಟೋನಿ ಅವಾರ್ಡ್​’ ಸಮಾರಂಭದಲ್ಲಿ ಅವರು ಸಹೋದರ ಪ್ರಿನ್ಸ್​ ಜಾಕ್ಸನ್ ಜೊತೆ ಬಂದು ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ‘ಈ ಮಕ್ಕಳು ಇನ್ನೂ ಚಿಕ್ಕವರು ಅಂತ ನಾವು ಊಹಿಸಿದ್ದೆವು. ಎಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಪ್ಯಾರಿಸ್​ ತುಂಬ ಸುಂದರವಾಗಿ ಕಾಣಿಸುತ್ತಿದ್ದಾರೆ’ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

75ನೇ ವರ್ಷದ ‘ಟೋನಿ ಅವಾರ್ಡ್​’ ಸಮಾರಂಭದ ವೇದಿಕೆಯಲ್ಲಿ ಮೈಕೆಲ್​ ಜಾಕ್ಸನ್​ ಬಗ್ಗೆ ಅವರ ಮಕ್ಕಳು ಮಾತನಾಡಿದ್ದಾರೆ. ತಂದೆಯ ಹಾಡುಗಳನ್ನು ಒಳಗೊಂಡ ‘ಎಂಜೆ: ದ ಮ್ಯೂಸಿಕಲ್​’ ಜ್ಯೂಕ್​ ಬಾಕ್ಸ್​ ಅನ್ನು ಅವರು ಪರಿಚಯಿಸಿದರು. ಆ ಮೂಲಕ ಗೌರವ ಸಲ್ಲಿಸಿದರು. ಇವರಿಬ್ಬರು ವೇದಿಕೆ ಮೇಲೆ ಮಾತನಾಡಿದ ವಿಡಿಯೋ ವೈರಲ್​ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:54 pm, Mon, 13 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ