AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ಅಸಾಧ್ಯ’; ಮಗ ಸಿದ್ಧಾಂತ್​​ ಕಪೂರ್​ ಡ್ರಗ್ಸ್​ ಸೇವಿಸಿದ್ದಾರಲ್ಲ ಅಂತ ಕೇಳಿದ್ದಕ್ಕೆ ತಂದೆ ಶಕ್ತಿ ಕಪೂರ್​ ಹೇಳಿದ್ದಿಷ್ಟು​

Siddhanth Kapoor Drugs Case: ಖಾಸಗಿ ಹೋಟೆಲ್​ನಲ್ಲಿ ಪಾರ್ಟಿ ಮಾಡಿದ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಈ ವೇಳೆ ಸಿದ್ಧಾಂತ್​ ಕಪೂರ್​ ಕೂಡ ಮಾದಕ ವಸ್ತು ಸೇವಿಸಿರುವುದು ಖಚಿತವಾಗಿದೆ.

‘ಇದು ಅಸಾಧ್ಯ’; ಮಗ ಸಿದ್ಧಾಂತ್​​ ಕಪೂರ್​ ಡ್ರಗ್ಸ್​ ಸೇವಿಸಿದ್ದಾರಲ್ಲ ಅಂತ ಕೇಳಿದ್ದಕ್ಕೆ ತಂದೆ ಶಕ್ತಿ ಕಪೂರ್​ ಹೇಳಿದ್ದಿಷ್ಟು​
ಸಿದ್ಧಾಂತ್ ಕಪೂರ್, ಶಕ್ತಿ ಕಪೂರ್
TV9 Web
| Updated By: ಮದನ್​ ಕುಮಾರ್​|

Updated on:Jun 13, 2022 | 12:33 PM

Share

ಮಕ್ಕಳು ಮಾಡುವ ತಪ್ಪಿನಿಂದಾಗಿ ಅವರ ತಂದೆ-ತಾಯಿ ಕೂಡ ತಲೆ ತಗ್ಗಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಇಡೀ ಕುಟುಂಬಕ್ಕೆ ಮುಜುಗರ ಆಗುತ್ತದೆ. ನಟ ಸಿದ್ಧಾಂತ್​ ಕಪೂರ್ (Siddhanth Kapoor)​ ಅವರು ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದಿರುವುದು ಅವರ ಕುಟುಂಬಕ್ಕೆ ತಲೆ ನೋವಾಗಿದೆ. ಸಿದ್ಧಾಂತ್​ ಕಪೂರ್​ ಅವರ ತಂದೆ ಶಕ್ತಿ ಕಪೂರ್​ ಅವರು ಬಾಲಿವುಡ್​ನ ಜನಪ್ರಿಯ ನಟ. ಹಲವಾರು ಸಿನಿಮಾಗಳಲ್ಲಿ ನಟಿಸಿದ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ಅವರ ಪುತ್ರ ಸಿದ್ಧಾಂತ್​ ಕಪೂರ್​ ಈಗ ಬೆಂಗಳೂರಿನಲ್ಲಿ ಡ್ರಗ್ಸ್​ ಪಾರ್ಟಿ (Bengaluru Drugs Party) ಮಾಡಿ ಹೆಸರು ಕೆಡಿಸಿಕೊಂಡಿದ್ದಾರೆ. ಭಾನುವಾರ (ಜೂನ್​ 12) ತಡರಾತ್ರಿ ಈ ಪಾರ್ಟಿ ನಡೆದಿದೆ. ರೇವ್​ ಪಾರ್ಟಿಯಲ್ಲಿ ಡ್ರಗ್ಸ್​ ಬಳಕೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಅನೇಕರನ್ನು ಬಂಧಿಸಿದ್ದಾರೆ. ಈ ಘಟನೆ ಕುರಿತಂತೆ ಮಾಧ್ಯಮಗಳಿಗೆ ಶಕ್ತಿ ಕಪೂರ್​ (Shakti Kapoor) ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಖಾಸಗಿ ಹೋಟೆಲ್​ನಲ್ಲಿ ಪಾರ್ಟಿ ಮಾಡಿದ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಈ ವೇಳೆ ಸಿದ್ಧಾಂತ್​ ಕಪೂರ್​ ಕೂಡ ಮಾದಕ ವಸ್ತು ಸೇವಿಸಿರುವುದು ಖಚಿತವಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ಪಡೆಯಲು ಶಕ್ತಿ ಕಪೂರ್​ ಅವರನ್ನು ‘ಇಟೈಮ್ಸ್​’ ಸಂಪರ್ಕಿಸಿದೆ. ‘ಇದು ಅಸಾಧ್ಯ. ಅಷ್ಟು ಮಾತ್ರ ನಾನು ಹೇಳಬಲ್ಲೆ’ ಎಂದು ಶಕ್ತಿ ಕಪೂರ್​ ಹೇಳಿರುವುದಾಗಿ ವರದಿ ಆಗಿದೆ.

ಬೆಂಗಳೂರಿಗೆ ಬಂದು ಪಾರ್ಟಿಯಲ್ಲಿ ಭಾಗವಹಿಸುವ ಬಗ್ಗೆ ಸಿದ್ಧಾಂತ್​ ಕಪೂರ್​ ಅವರು ತಮ್ಮ ಕುಟುಂಬದವರಿಗೆ ಸರಿಯಾಗಿ ಮಾಹಿತಿ ನೀಡಿರಲಿಲ್ಲ. ಬೆಂಗಳೂರಿನ ಯಾವ ಹೋಟೆಲ್​ನಲ್ಲಿ ಸಿದ್ಧಾಂತ್​ ಉಳಿದುಕೊಂಡಿದ್ದಾರೆ ಎಂಬುದು ಕೂಡ ಫ್ಯಾಮಿಲಿಯವರಿಗೆ ತಿಳಿದಿರಲಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ. ಒಟ್ಟಿನಲ್ಲಿ ಶಕ್ತಿ ಕಪೂರ್​ ಕುಟುಂಬಕ್ಕೆ ಈ ಘಟನೆಯಿಂದ ಮುಜುಗರ ಆದಂತಾಗಿದೆ.

ಇದನ್ನೂ ಓದಿ
Image
Siddhanth Kapoor: ಬೆಂಗಳೂರು ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶ್ರದ್ಧಾ ಕಪೂರ್​ ಅಣ್ಣ ಸಿದ್ಧಾಂತ್​ ಕಪೂರ್​ ಹಿನ್ನೆಲೆ ಏನು?
Image
Drug Case: ಡ್ರಗ್ಸ್ ಪಾರ್ಟಿ ಆಯೋಜನೆ ಆರೋಪ: ಬಾಲಿವುಡ್‌ ನಟ ಸಿದ್ಧಾಂತ್​ ಕಪೂರ್ ಪೊಲೀಸರ ವಶಕ್ಕೆ
Image
Aryan Khan: ಡ್ರಗ್ಸ್​ ಪ್ರಕರಣದಿಂದ ಮುಕ್ತಿ ಸಿಕ್ಕ ಬೆನ್ನಲ್ಲೇ ಅಮೇರಿಕಾಗೆ ತೆರಳಲಿದ್ದಾರಾ ಆರ್ಯನ್ ಖಾನ್?
Image
ಬಾಲಿವುಡ್​ Drugs ದಂಧೆ ಆರೋಪ ಪ್ರಕರಣ: ಮೂವರು ನಟಿಯರಿಗೆ NCB ಸಮನ್ಸ್

ಸಿದ್ಧಾಂತ್​ ಕಪೂರ್ ಅವರ ತಂಗಿ ಶ್ರದ್ಧಾ ಕಪೂರ್ ಅವರು ಬಾಲಿವುಡ್​ನಲ್ಲಿ ಸ್ಟಾರ್​ ನಟಿಯಾಗಿ ಮಿಂಚುತ್ತಿದ್ದಾರೆ. ಈ ಹಿಂದೆ ಅವರು ಕೂಡ ಎನ್​ಸಿಬಿ ಕಚೇರಿಯ ಮೆಟ್ಟಿಲು ಹತ್ತಿದ್ದರು. ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ತನಿಖೆಯ ವೇಳೆ ಬಾಲಿವುಡ್​ ಡ್ರಗ್ಸ್​ ಕೇಸ್​ ಪುರಾಣ ಬಯಲಾಗಿತ್ತು. ಆ ಸಂಬಂಧ ಶ್ರದ್ಧಾ ಕಪೂರ್​ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ತಮ್ಮ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದು ಅವರು ಹೇಳಿದ್ದರು. ಈಗ ಅವರ ಸಹೋದರ ಸಿದ್ಧಾಂತ್​ ಕಪೂರ್​ ಡ್ರಗ್ಸ್​ ಪಾರ್ಟಿ ಮಾಡಿ ಪೊಲೀಸರ ಅತಿಥಿ ಆಗಿರುವುದರಿಂದ ಶಕ್ತಿ ಕಪೂರ್​ ಕುಟುಂಬಕ್ಕೆ ಸಂಕಷ್ಟ ಶುರುವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:33 pm, Mon, 13 June 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ