ಅತಿಥಿಯಾಗಿ ತೆರಳಿದ ಊರ್ವಶಿ ರೌಟೇಲಾಗೆ ಭಾರೀ ಮುಜುಗರ; ದೊಡ್ಡದಾಗಿ ಪಂತ್..ಪಂತ್.. ಎಂದು ಕೂಗಿದ ಫ್ಯಾನ್ಸ್​

ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಊರ್ವಶಿ ರೌಟೇಲಾ ಹಾಗೂ ರಿಷಭ್ ನಡುವೆ ಏನೋ ನಡೆಯುತ್ತಿದೆ ಎಂಬುದು ಈ ಮೊದಲಿನಿಂದಲೂ ಹರಿದಾಡುತ್ತಿರುವ ಸುದ್ದಿ. ಈಗ ಇದೇ ವಿಚಾರ ಇಟ್ಟುಕೊಂಡು ಫ್ಯಾನ್ಸ್​ ಊರ್ವಶಿ ಅವರ ಕಾಲೆಳೆದಿದ್ದಾರೆ.

ಅತಿಥಿಯಾಗಿ ತೆರಳಿದ ಊರ್ವಶಿ ರೌಟೇಲಾಗೆ ಭಾರೀ ಮುಜುಗರ; ದೊಡ್ಡದಾಗಿ ಪಂತ್..ಪಂತ್.. ಎಂದು ಕೂಗಿದ ಫ್ಯಾನ್ಸ್​
ರಿಷಬ್​-ಊರ್ವಶಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 14, 2022 | 8:32 AM

ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಹೆಚ್ಚು ಸಿನಿಮಾಗಳಲ್ಲಿ ನಟಿಸಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಸಖತ್ ಜನಪ್ರಿಯತೆ ಇದೆ. 5 ಕೋಟಿಗೂ (50 ಮಿಲಿಯನ್) ಅಧಿಕ ಮಂದಿ ಅವರನ್ನು ಹಿಂಬಾಲಿಸುತ್ತಿದ್ದಾರೆ. ಕೆಲ ದೊಡ್ಡ ದೊಡ್ಡ ನಟಿಯರಿಗೂ ಇಷ್ಟೊಂದು ಹಿಂಬಾಲಕರಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಊರ್ವಶಿ ಅವರು ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ (Rishabh Pant) ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಇದೇ ವಿಚಾರದಲ್ಲಿ ಊರ್ವಶಿ ಅವರು ಮುಜುಗರ ಎದುರಿಸಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

ಬಾಲಿವುಡ್​ಗೂ ಕ್ರಿಕೆಟ್​ ಲೋಕಕ್ಕೂ ಮೊದಲಿನಿಂದಲೂ ನಂಟಿದೆ. ಅನೇಕ ಕ್ರಿಕೆಟಿಗರು ಬಾಲಿವುಡ್​ ನಟಿಯರ ಜತೆ ಡೇಟಿಂಗ್ ಮಾಡಿದ್ದಾರೆ. ಇನ್ನೂ ಕೆಲ ಕ್ರಿಕೆಟಿಗರು ಬಾಲಿವುಡ್​ ಬೆಡಗಿಯರನ್ನು ಮದುವೆ ಕೂಡ ಆಗಿದ್ದಾರೆ. ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಊರ್ವಶಿ ರೌಟೇಲಾ ಹಾಗೂ ರಿಷಭ್ ನಡುವೆ ಏನೋ ನಡೆಯುತ್ತಿದೆ ಎಂಬುದು ಈ ಮೊದಲಿನಿಂದಲೂ ಹರಿದಾಡುತ್ತಿರುವ ಸುದ್ದಿ. ಈಗ ಇದೇ ವಿಚಾರ ಇಟ್ಟುಕೊಂಡು ಫ್ಯಾನ್ಸ್​ ಊರ್ವಶಿ ಅವರ ಕಾಲೆಳೆದಿದ್ದಾರೆ.

ಇದನ್ನೂ ಓದಿ
Image
Shah Rukh Khan: ವಿಜ್ಞಾನಿಯಾದ ಶಾರುಖ್ ಖಾನ್​; ಫ್ಯಾನ್ಸ್​ಗೆ ಖುಷಿಯೋ ಖುಷಿ
Image
ಉಪೇಂದ್ರ ನಿರ್ದೇಶನದ ಚಿತ್ರದ ಮುಹೂರ್ತಕ್ಕೆ ಫಿಕ್ಸ್ ಆಯ್ತು ದಿನಾಂಕ; ಇಲ್ಲಿದೆ ವಿವರ
Image
ಸಖತ್ ಸ್ಪೈಸಿ ಆಗಿದೆ ‘ರಾ ರಾ ರಕ್ಕಮ್ಮ’ ಸಾಂಗ್; ಹೆಚ್ಚಿತು ‘ವಿಕ್ರಾಂತ್ ರೋಣ’ ಚಿತ್ರದ ಮೈಲೇಜ್
Image
ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ತಮನ್ನಾ, ಊರ್ವಶಿ ರೌಟೇಲಾ; ಇಲ್ಲಿವೆ ಕಲರ್​ಫುಲ್​ ಫೋಟೋಗಳು

ಊರ್ವಶಿ ಅವರಿಗೆ ಸ್ಟಾರ್​ ಪಟ್ಟ ಇದೆ. ಈ ಕಾರಣಕ್ಕೆ ಸಾಕಷ್ಟು ಕಾರ್ಯಕ್ರಮಗಳಿಗೆ ಅವರು ಅತಿಥಿಯಾಗಿ ತೆರಳುತ್ತಿರುತ್ತಾರೆ. ಇತ್ತೀಚೆಗೆ ಅವರು ಕಾಲೇಜ್ ಒಂದರ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ತೆರಳಿದ್ದರು. ಅವರು ಆಗಮಿಸುತ್ತಿದ್ದಂತೆ ಅಲ್ಲಿದ್ದ ವಿದ್ಯಾರ್ಥಿಗಳು ದೊಡ್ಡದಾಗಿ ‘ರಿಷಭ್​.. ರಿಷಭ್​..’ ಎಂದು ಘೋಷಣೆ ಕೂಗಿದ್ದಾರೆ. ಇದರಿಂದ ಊರ್ವಶಿಗೆ ತೀವ್ರ ಮುಜುಗರ ಆಗಿದೆ. ಆದರೆ, ಅದನ್ನು ಅವರು ತೋರಿಸಿಕೊಂಡಿಲ್ಲ. ನಗುತ್ತಲೇ ಮುಂದೆ ನಡೆದಿದ್ದಾರೆ.

View this post on Instagram

A post shared by High bro (@high.br0)

ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ತಮನ್ನಾ, ಊರ್ವಶಿ ರೌಟೇಲಾ; ಇಲ್ಲಿವೆ ಕಲರ್​ಫುಲ್​ ಫೋಟೋಗಳು

2019ರಲ್ಲಿ ರಿಷಭ್ ಹಾಗೂ ಊರ್ವಶಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಅಚ್ಚರಿಯ ವಿಚಾರ ಎಂದರೆ, ರಿಷಭ್​ಗಿಂತಲೂ ಊರ್ವಶಿ ಸುಮಾರು ಮೂರು ವರ್ಷ ದೊಡ್ಡವರು. ಇಬ್ಬರೂ ರಿಲೇಶನ್​ಶಿಪ್​ನಲ್ಲಿದ್ದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇಬ್ಬರೂ ಒಟ್ಟಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು ನಿಜ, ಆದರೆ, ಇವರ ನಡುವೆ ಯಾವುದೇ ರಿಲೇಶನ್​ಶಿಪ್ ಇರಲಿಲ್ಲ ಎಂದು ಮೂಲಗಳು ಸ್ಪಷ್ಟಡಿಸಿದ್ದವು. ಆದರೂ ಈ ಗಾಸಿಪ್ ನಿಂತಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:32 am, Tue, 14 June 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್