ಫ್ಯಾನ್ ಮೇಲೆ ಬಾಡಿಗಾರ್ಡ್ ರೇಗಾಡಿದ್ದನ್ನು ನೋಡಿ ಸಿಟ್ಟಾದ ರಶ್ಮಿಕಾ ಮಂದಣ್ಣ; ಇಲ್ಲಿದೆ ವಿಡಿಯೋ
ರಶ್ಮಿಕಾ ಮಂದಣ್ಣ ಬಳಿ ಬಂದ ಅಭಿಮಾನಿಯೋರ್ವನನ್ನು ಬಾಡಿಗಾರ್ಡ್ ದೂರ ತಳ್ಳಲು ಪ್ರಯತ್ನಿಸಿದ್ದ. ಇದಕ್ಕೆ ರಶ್ಮಿಕಾ ಅಸಮಾಧಾನಗೊಂಡಿದ್ದಾರೆ.
ಸ್ಟಾರ್ ನಟ/ನಟಿಯರನ್ನು ಕಂಡಾಗ ಫ್ಯಾನ್ಸ್ ಸೆಲ್ಫೀ ತೆಗೆದುಕೊಳ್ಳೋಕೆ, ಅವರನ್ನು ಮಾತನಾಡಿಸೋಕೆ ಮುಂದಾಗುತ್ತಾರೆ. ಸೆಲೆಬ್ರಿಟಿಗಳು ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಂಡಾಗ ನೂಕುನುಗ್ಗಲು ಆದ ಉದಾಹರಣೆ ಕೂಡ ಇದೆ. ಇದನ್ನು ಸಂಭಾಳಿಸುವ ಸಂಪೂರ್ಣ ಜವಾಬ್ದಾರಿ ಸೆಲೆಬ್ರಿಟಿಗಳ ಬಾಡಿಗಾರ್ಡ್ಗೆ ಇರುತ್ತದೆ. ಫ್ಯಾನ್ಸ್ ವರ್ತಿಸುವ ರೀತಿಗೆ ಕೆಲವೊಮ್ಮೆ ಬಾಡಿಗಾರ್ಡ್ಗಳು (Bodyguard) ಸಿಟ್ಟಾಗುತ್ತಾರೆ. ಈಗ ರಶ್ಮಿಕಾ ಮಂದಣ್ಣ ಅವರ (Rashmika Mandanna) ಜತೆ ಅಭಿಮಾನಿಗಳು ಸೆಲ್ಫೀ ತೆಗೆದುಕೊಳ್ಳಲು ಬಂದಾಗಲೂ ಇದೇ ರೀತಿ ಆಗಿದೆ. ಈ ವೇಳೆ ಬಾಡಿಗಾರ್ಡ್ ನಡೆದುಕೊಂಡ ರೀತಿಗೆ ರಶ್ಮಿಕಾ ಮಂದಣ್ಣ ಸಿಟ್ಟಾಗಿದ್ದಾರೆ.
ರಶ್ಮಿಕಾ ಮಂದಣ್ಣಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. 6 ವರ್ಷಗಳ ಹಿಂದೆ ಕನ್ನಡದಿಂದ ಬಣ್ಣದ ಬದುಕು ಆರಂಭಿಸಿದ ಅವರು ಈಗ ಬಾಲಿವುಡ್ವರೆಗೆ ಹೋಗಿ ನಿಂತಿದ್ದಾರೆ. ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಕೋಟ್ಯಂತರ ಮಂದಿ ಫಾಲೋ ಮಾಡುತ್ತಿದ್ದಾರೆ. ಹೀಗಾಗಿ, ಅವರು ಎದುರಾದಾಗ ಸಹಜವಾಗಿಯೇ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ.
ಈಗಲೂ ಹಾಗೆಯೇ ಆಗಿದೆ. ರಶ್ಮಿಕಾ ಅವರು ಮುಂಬೈನಲ್ಲಿ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪಾಪರಾಜಿಗಳು ಅವರ ವಿಡಿಯೋ ಶೂಟ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಅಭಿಮಾನಿಗಳು ರಶ್ಮಿಕಾ ಜತೆ ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದರು. ರಶ್ಮಿಕಾ ಬಳಿ ಬಂದ ಅಭಿಮಾನಿಯೋರ್ವನನ್ನು ಬಾಡಿಗಾರ್ಡ್ ದೂರ ತಳ್ಳಲು ಪ್ರಯತ್ನಿಸಿದ್ದ. ಇದಕ್ಕೆ ರಶ್ಮಿಕಾ ಅಸಮಾಧಾನಗೊಂಡಿದ್ದಾರೆ. ಆ ರೀತಿ ಮಾಡಬೇಡಿ ಎಂದು ಹೇಳಿ, ಅಭಿಮಾನಿ ಜತೆ ಫೋಟೋ ತೆಗೆಸಿಕೊಂಡಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆಗಳು ಬರುತ್ತಿವೆ.
ಇದನ್ನೂ ಓದಿ: ರಣಬೀರ್ ಮಾತ್ರ ಹಾಗೆ ಕರೆಯುತ್ತಾರೆ, ಅದು ನನಗೆ ಕೊಂಚವೂ ಇಷ್ಟವಿಲ್ಲ ಎಂದ ರಶ್ಮಿಕಾ ಮಂದಣ್ಣ
ರಶ್ಮಿಕಾ ಆರು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. ದಳಪತಿ ವಿಜಯ್ 66ನೇ ಚಿತ್ರಕ್ಕೆ ರಶ್ಮಿಕಾ ನಾಯಕಿ. ಸಿದ್ದಾರ್ಥ್ ಮಲ್ಹೋತ್ರಾ ನಟನೆಯ ‘ಮಿಷನ್ ಮಜ್ನು’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಅಮಿತಾಭ್ ಬಚ್ಚನ್ ನಟನೆಯ ‘ಗುಡ್ಬೈ’ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ರಣಬೀರ್ ಕಪೂರ್ ಅವರ ‘ಎನಿಮಲ್’ ಚಿತ್ರದಲ್ಲೂ ರಶ್ಮಿಕಾ ಬ್ಯುಸಿ ಇದ್ದಾರೆ. ‘ಪುಷ್ಪ 2’ ಚಿತ್ರದ ಕೆಲಸಗಳು ಇನ್ನಷ್ಟೇ ಆರಂಭಗೊಳ್ಳಬೇಕಿದೆ. ‘ಸೀತಾ ರಾಮಮ್’ ಚಿತ್ರದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:36 pm, Tue, 14 June 22