Siddhanth Kapoor: ‘ನಾನಾಗಿಯೇ ಡ್ರಗ್ಸ್​ ಸೇವಿಸಿಲ್ಲ, ಫ್ರೆಂಡ್ಸ್​ ಮಿಕ್ಸ್​ ಮಾಡಿ ಕೊಟ್ರು’; ತನಿಖೆ ವೇಳೆ ಸಿದ್ಧಾಂತ್ ಕಪೂರ್​​ ಹೇಳಿಕೆ

Siddhanth Kapoor Drug Case: ಸಿದ್ಧಾಂತ್​ ಕಪೂರ್​ ಅವರ ಮೊಬೈಲ್​ ಫೋನ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದರಲ್ಲಿನ ಮಾಹಿತಿಗಳನ್ನು ಪಡೆಯಲಾಗುತ್ತಿದೆ.

Siddhanth Kapoor: ‘ನಾನಾಗಿಯೇ ಡ್ರಗ್ಸ್​ ಸೇವಿಸಿಲ್ಲ, ಫ್ರೆಂಡ್ಸ್​ ಮಿಕ್ಸ್​ ಮಾಡಿ ಕೊಟ್ರು’; ತನಿಖೆ ವೇಳೆ ಸಿದ್ಧಾಂತ್ ಕಪೂರ್​​ ಹೇಳಿಕೆ
ಸಿದ್ಧಾಂತ್ ಕಪೂರ್
Follow us
TV9 Web
| Updated By: ಮದನ್​ ಕುಮಾರ್​

Updated on:Jun 15, 2022 | 10:43 AM

ಬಾಲಿವುಡ್​ ನಟ ಸಿದ್ಧಾಂತ್​ ಕಪೂರ್ (Siddhanth Kapoor)​ ಅವರು ಡ್ರಗ್ಸ್​ ಜಾಲದಲ್ಲಿ ಸಿಲುಕಿಕೊಂಡಿದ್ದಾರೆ. ಬೆಂಗಳೂರಿನ ಸ್ಟಾರ್ ಹೋಟೆಲ್​ನಲ್ಲಿ ನಡೆದ ಪಾರ್ಟಿಯಲ್ಲಿ (Bengaluru Drugs Party) ಅವರು ಮಾದಕ ವಸ್ತು ಸೇವಿಸಿದ್ದರು ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ಖಚಿತವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಿದ್ಧಾಂತ್​ ಕಪೂರ್ ಅವರು ಪೊಲೀಸರ ಎದುರು ಬೇರೆಯದೇ ರೀತಿಯ ಹೇಳಿಕೆ ನೀಡಿದ್ದಾರೆ. ‘ನಾನಾಗಿಯೇ ಡ್ರಗ್ಸ್​ ಸೇವಿಸಿಲ್ಲ, ನನ್ನ ಪಾನೀಯದಲ್ಲಿ ಯಾರೋ ಮಿಕ್ಸ್​ ಮಾಡಿ ಕೊಟ್ಟರು. ಡ್ರಗ್ಸ್​ ಬಗ್ಗೆ ನನಗೆ ಗೊತ್ತಿರಲಿಲ್ಲ’ ಅಂತ ಸಿದ್ಧಾಂತ್​ ಹೇಳಿದ್ದಾರೆ ಎಂದು ‘ಇಂಡಿಯಾ.ಕಾಮ್​’ ವರದಿ ಮಾಡಿದೆ. ಭಾನುವಾರ (ಜೂನ್​ 12) ತಡರಾತ್ರಿ ಈ ಪಾರ್ಟಿ ನಡೆಯುತ್ತಿತ್ತು. ರೇವ್​ ಪಾರ್ಟಿಯಲ್ಲಿ ಡ್ರಗ್ಸ್​ ಬಳಕೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಅನೇಕರನ್ನು ಬಂಧಿಸಿದರು. ಈ ಕೇಸ್​ಗೆ​ (Bengaluru Drugs Bust) ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ.

ಬೆಂಗಳೂರಿನ ಕೆಲವರ ಜೊತೆ ಸಿದ್ಧಾಂತ್​ ಕಪೂರ್​ ನಂಟು ಹೊಂದಿದ್ದಾರೆ. ಈ ಮೊದಲು ಅನೇಕ ಬಾರಿ ಅವರು ಬೆಂಗಳೂರಿಗೆ ಬಂದು ಹೋಗಿದ್ದಾರೆ. ಶ್ರೀಮಂತರ ಪಾರ್ಟಿಗಳಲ್ಲಿ ಅವರು ಡಿಜೆ ಆಗಿ ಪಾಲ್ಗೊಂಡಿದ್ದಾರೆ. ಇಲ್ಲಿ ಹಲವು ಸ್ನೇಹಿತರನ್ನು ಹೊಂದಿದ್ದಾರೆ. ಸದ್ಯ ಸಿದ್ಧಾಂತ್​ ಕಪೂರ್​ ಅವರ ಮೊಬೈಲ್​ ಫೋನ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದರಲ್ಲಿನ ಮಾಹಿತಿಗಳನ್ನು ಪಡೆಯಲಾಗುತ್ತಿದೆ. ಸಂಶಯ ಇರುವ ಎಲ್ಲರನ್ನೂ ಕರೆಸಿ ವಿಚಾರಣೆ ನಡೆಸಲಾಗುವುದು. ಹಾಗಾಗಿ ಇನ್ನೂ ಅನೇಕರ ಹೆಸರುಗಳು ಹೊರಬರುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಇದು ಅಸಾಧ್ಯ’; ಮಗ ಸಿದ್ಧಾಂತ್​​ ಕಪೂರ್​ ಡ್ರಗ್ಸ್​ ಸೇವಿಸಿದ್ದಾರಲ್ಲ ಅಂತ ಕೇಳಿದ್ದಕ್ಕೆ ತಂದೆ ಶಕ್ತಿ ಕಪೂರ್​ ಹೇಳಿದ್ದಿಷ್ಟು​

ಇದನ್ನೂ ಓದಿ
Image
‘ಇದು ಅಸಾಧ್ಯ’; ಮಗ ಸಿದ್ಧಾಂತ್​​ ಕಪೂರ್​ ಡ್ರಗ್ಸ್​ ಸೇವಿಸಿದ್ದಾರಲ್ಲ ಅಂತ ಕೇಳಿದ್ದಕ್ಕೆ ತಂದೆ ಶಕ್ತಿ ಕಪೂರ್​ ಹೇಳಿದ್ದಿಷ್ಟು​
Image
Drug Case: ಡ್ರಗ್ಸ್ ಪಾರ್ಟಿ ಆಯೋಜನೆ ಆರೋಪ: ಬಾಲಿವುಡ್‌ ನಟ ಸಿದ್ಧಾಂತ್​ ಕಪೂರ್ ಪೊಲೀಸರ ವಶಕ್ಕೆ
Image
Aryan Khan: ಮುಂಬೈ ಡ್ರಗ್ಸ್​ ಪ್ರಕರಣ; ಶಾರುಖ್ ಖಾನ್ ಮಗ ಆರ್ಯನ್ ಖಾನ್​ಗೆ ಎನ್​ಸಿಬಿಯಿಂದ ಕ್ಲೀನ್ ಚಿಟ್
Image
ಡ್ರಗ್ಸ್​ ಮತ್ತು ಹುಡುಗಿ ವಿಷಯದಲ್ಲಿ ಸಂಜಯ್​ ದತ್​ ತಿಳಿದುಕೊಂಡಿದ್ದೇ ಬೇರೆ: ಎಲ್ಲವನ್ನೂ ಬಾಯ್ಬಿಟ್ಟ ಅಧೀರ

ಯಾರು ಈ ಸಿದ್ಧಾಂತ್​ ಕಪೂರ್​:

ಸಿದ್ಧಾಂತ್​ ಕಪೂರ್​ ಅವರದ್ದು ಫಿಲ್ಮಿ ಹಿನ್ನೆಲೆಯ ಕುಟುಂಬ. ಅವರ ತಂದೆ ಶಕ್ತಿ ಕಪೂರ್​ ಅವರು ಬಾಲಿವುಡ್​ನಲ್ಲಿ ಜನಪ್ರಿಯ ನಟ. ಚಿತ್ರರಂಗದಲ್ಲಿ ಶಕ್ತಿ ಕಪೂರ್​ ಅವರ ಅನುಭವ ಅಪಾರ. ಸಿದ್ಧಾಂತ್​ ಅವರ ಸಹೋದರಿ ಶ್ರದ್ಧಾ ಕಪೂರ್​ ಅವರು ಈಗಾಗಲೇ ಹಿಂದಿ ಚಿತ್ರರಂಗದಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಣ್ಣದ ಲೋಕದಲ್ಲಿ ಸಿದ್ಧಾಂತ್​ ಕಪೂರ್​ ಕೂಡ ಸಕ್ರಿಯರಾಗಿದ್ದಾರೆ. 2006ರಲ್ಲಿ ಬಂದ ‘ಭಾಗಂ ಭಾಗ್​’ ಚಿತ್ರಕ್ಕೆ ಅವರು ಸಹಾಯಕ ನಿರ್ದೇಶಕನಾಗಿದ್ದರು. ‘ಚುಪ್​ ಚುಪ್​ಕೇ’, ‘ಭೂಲ್​ ಭುಲಯ್ಯ’, ‘ಡೋಲ್​’ ಮುಂತಾದ ಸಿನಿಮಾಗಳಿಗೂ ಅವರು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು. ನಟನಾಗಿಯೂ ಸಿದ್ಧಾಂತ್​ ಕಪೂರ್​ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ದೊಡ್ಡ ಮಟ್ಟದಲ್ಲಿ ಅವರಿಗೆ ಜನಪ್ರಿಯತೆ ಸಿಕ್ಕಿಲ್ಲ. ‘ಹೆಲೋ ಚಾರ್ಲಿ’, ‘ಅಗ್ಲಿ’, ‘ಜಝ್ಬಾ’, ‘ಹಸೀನಾ ಪಾರ್ಕರ್​’ ಸೇರಿ ಹಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:43 am, Wed, 15 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ