Shah Rukh Khan: ವಿಜ್ಞಾನಿಯಾದ ಶಾರುಖ್ ಖಾನ್; ಫ್ಯಾನ್ಸ್ಗೆ ಖುಷಿಯೋ ಖುಷಿ
ಸಾಮಾನ್ಯವಾಗಿ ಬಿಗ್ ಬಜೆಟ್ ಚಿತ್ರಗಳು, ಸ್ಟಾರ್ ನಟರ ಸಿನಿಮಾಗಳು ಎಂದಾಗ ಒಂದಷ್ಟು ವದಂತಿಗಳು ಹುಟ್ಟಿಕೊಳ್ಳುತ್ತವೆ. ಈಗ ‘ಬ್ರಹ್ಮಾಸ್ತ್ರ’ ಬಗ್ಗೆ ಹುಟ್ಟಿಕೊಂಡಿರುವ ಸುದ್ದಿ ಎಷ್ಟು ಸತ್ಯ ಎಂಬುದು ಸದ್ಯದ ಕುತೂಹಲ.
ನಟ ಶಾರುಖ್ ಖಾನ್ (Shah Rukh Khan) ಅವರು ನಟನೆಯಲ್ಲಿ ಬ್ಯುಸಿ ಇದ್ದಾರೆ. ನಾಲ್ಕು ವರ್ಷಗಳ ಗ್ಯಾಪ್ನ ನಂತರ ನಟನೆಗೆ ಮರಳಿರುವ ಅವರು ಒಟ್ಟೊಟ್ಟಿಗೆ ಮೂರು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ಗಾಗಿ ವಿದೇಶಕ್ಕೂ ಕೂಡ ತೆರಳಲಿದ್ದಾರೆ. ಈ ಮಧ್ಯೆ ಶಾರುಖ್ ಖಾನ್ ವಿಜ್ಞಾನಿ ಆಗಿದ್ದಾರೆ. ಲ್ಯಾಬ್ನಲ್ಲಿ ಕುಳಿತು ಅವರು ಸಂಶೋಧನೆ ನಡೆಸಲಿದ್ದಾರೆ. ಹಾಗಂತ ಅವರು ವಿಜ್ಞಾನಿ ಆಗಿರುವುದು ನಿಜ ಜೀವನದಲ್ಲಿ ಅಲ್ಲವೇ ಅಲ್ಲ. ಅವರು ಸೈಂಟಿಸ್ಟ್ ಗೆಟಪ್ ತಾಳುತ್ತಿರುವುದು ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ (Brahmastra Movie) ಸಿನಿಮಾದಲ್ಲಿ.
‘ಬ್ರಹ್ಮಾಸ್ತ್ರ’ ಸಿನಿಮಾ ಮೂರು ಪಾರ್ಟ್ಗಳಲ್ಲಿ ತೆರೆಗೆ ಬರುತ್ತಿದೆ. ಈ ವರ್ಷ ತೆರೆಗೆ ಬರಲಿರುವುದು ಮೊದಲ ಭಾಗ. ಈಗಾಗಲೇ ಟೀಸರ್ ಮೂಲಕ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದೊಂದು ಫ್ಯಾಂಟಸಿ ಸಿನಿಮಾ. ಈ ಕಾರಣಕ್ಕೂ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಕೊಂಡಿದೆ. ಈ ಚಿತ್ರದಲ್ಲಿ ರಿಯಲ್ ಲೈಫ್ ಜೋಡಿ ಆಲಿಯಾ ಹಾಗೂ ರಣಬೀರ್ ಒಟ್ಟಾಗಿ ನಟಿಸುತ್ತಿರುವುದು ವಿಶೇಷ. ಈಗ ತಂಡಕ್ಕೆ ಶಾರುಖ್ ಖಾನ್ ಕೂಡ ಸೇರ್ಪಡೆ ಆಗಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.
ಸಾಮಾನ್ಯವಾಗಿ ಬಿಗ್ ಬಜೆಟ್ ಚಿತ್ರಗಳು, ಸ್ಟಾರ್ ನಟರ ಸಿನಿಮಾಗಳು ಎಂದಾಗ ಒಂದಷ್ಟು ವದಂತಿಗಳು ಹುಟ್ಟಿಕೊಳ್ಳುತ್ತವೆ. ಈಗ ‘ಬ್ರಹ್ಮಾಸ್ತ್ರ’ ಬಗ್ಗೆ ಹುಟ್ಟಿಕೊಂಡಿರುವ ಸುದ್ದಿ ಎಷ್ಟು ಸತ್ಯ ಎಂಬುದು ಸದ್ಯದ ಕುತೂಹಲ. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎಂಬುದು ಕೆಲವರ ವಾದ. ಒಟ್ಟಿನಲ್ಲಿ ಶಾರುಖ್ ಖಾನ್ ಅವರ ಪಾತ್ರದ ಬಗ್ಗೆ ಫ್ಯಾನ್ಸ್ ವಲಯದಲ್ಲಿ ಕುತೂಹಲಗಳ ಬುಗ್ಗೆ ಹುಟ್ಟಿಕೊಂಡಿದ್ದಂತೂ ನಿಜ.
“SRK plays the role of a scientist who is working towards creating a powerful energy from resources around him. He has access to Brahmastra – which is a major source of his energy. He appears in the first 30 minutes of the film.” ~ BW Hungama #Brahmastra #ShahRukhKhan ??
— Bada Jaanwar (@BadaJaanwar) June 11, 2022
ಶಾರುಖ್ ಖಾನ್ ಈ ಮೊದಲು ಕೂಡ ಹಲವು ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲೂ ಅವರು ನಿರ್ವಹಿಸುತ್ತಿರುವುದು ಅತಿಥಿ ಪಾತ್ರ ಎನ್ನಲಾಗುತ್ತಿದೆ. ಈ ಎಲ್ಲಾ ಕುತೂಹಲಗಳಿಗೆ ಚಿತ್ರತಂಡದಿಂದಲೇ ಉತ್ತರ ಸಿಗಬೇಕಿದೆ.
ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಗಾಬರಿಯಿಂದ ಓಡಿ ಹೋದ ನಟಿ ಆಲಿಯಾ ಭಟ್; ವೈರಲ್ ವಿಡಿಯೋದ ಸತ್ಯಾಂಶ ಏನು?
ಶಾರುಖ್ ಖಾನ್ ಮೂರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ರಾಜ್ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಚಿತ್ರದ ಶೂಟಿಂಗ್ ಆರಂಭಗೊಂಡಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಸಿದ್ದಾರ್ಥ್ ಆನಂದ್ ನಿರ್ದೇಶನದ ‘ಪಠಾಣ್’ ಚಿತ್ರದಲ್ಲಿ ಕಿಂಗ್ ಖಾನ್ ನಟಿಸುತ್ತಿದ್ದು, ದೀಪಿಕಾ ಶಾರುಖ್ಗೆ ಜತೆಯಾಗಿದ್ದಾರೆ. ನಿರ್ದೇಶಕ ಅಟ್ಲೀ-ಶಾರುಖ್ ಸಿನಿಮಾಗೆ ‘ಜವಾನ್’ ಎನ್ನುವ ಶೀರ್ಷಿಕೆ ಇಡಲಾಗಿದೆ. ಇವುಗಳಲ್ಲಿ ಯಾವ ಸಿನಿಮಾ ಮೊದಲು ತೆರೆಗೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:31 am, Tue, 14 June 22