AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alia Bhatt: ಜನಸಾಮಾನ್ಯರ ಹಾದಿ ತಪ್ಪಿಸುತ್ತಿದ್ದಾರಾ ಆಲಿಯಾ ಭಟ್? ಸಾಕ್ಷಿ ಸಮೇತ ವಿವರಿಸಿದ ನೆಟ್ಟಿಗರು

Alia Bhatt Controversy: ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಾವು ನಿರಾಕರಿಸಿದ್ದರ ಉತ್ಪನ್ನಗಳನ್ನೇ ಪ್ರಚಾರ ಮಾಡುತ್ತಿದ್ದಾರೆ ಆಲಿಯಾ ಭಟ್. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಏನಿದು ವಿವಾದ? ಪೂರ್ಣ ವಿವರ ಇಲ್ಲಿದೆ ನೋಡಿ.

Alia Bhatt: ಜನಸಾಮಾನ್ಯರ ಹಾದಿ ತಪ್ಪಿಸುತ್ತಿದ್ದಾರಾ ಆಲಿಯಾ ಭಟ್? ಸಾಕ್ಷಿ ಸಮೇತ ವಿವರಿಸಿದ ನೆಟ್ಟಿಗರು
ಆಲಿಯಾ ಭಟ್
TV9 Web
| Updated By: shivaprasad.hs|

Updated on: May 10, 2022 | 2:17 PM

Share

ಬಾಲಿವುಡ್ ಬೆಡಗಿ ಆಲಿಯಾ ಭಟ್ (Alia Bhatt)​ ಮತ್ತೆ ಟ್ರೋಲ್​ಗೆ ಒಳಗಾಗಿದ್ದಾರೆ. ಈ ಬಾರಿ ನೆಟ್ಟಿಗರು ಆಲಿಯಾರ ಹಳೆಯ ವಿಡಿಯೋಗಳನ್ನು ಹಾಗೂ ಅವರ ಇತ್ತೀಚಿನ ಜಾಹಿರಾತುಗಳನ್ನು ಹೋಲಿಸಿ ನಟಿಗೆ ಡಬಲ್ ಸ್ಟಾಂಡರ್ಡ್ ಎಂದು ಟೀಕಿಸುತ್ತಿದ್ದಾರೆ. ಅಷ್ಟಕ್ಕೂ ಆಲಿಯಾ ಹೀಗೆ ಟೀಕೆಗೆ ಒಳಗಾಗಲು ಕಾರಣವೇನು ಎಂಬುದರ ಮಾಹಿತಿ ಇಲ್ಲಿದೆ. ಈ ಹಿಂದೆ ಆಲಿಯಾ ಕಪಿಲ್ ಶರ್ಮಾ ಶೋದಲ್ಲಿ ಭಾಗಿಯಾಗಿದ್ದಾಗ ಚಹಾವನ್ನು ನಿರಾಕರಿಸಿದ್ದರು. ಅದಕ್ಕೆ ಕಾರಣ ಅದರಲ್ಲಿ ಸಕ್ಕರೆ ಹಾಕಿದ್ದಾರೆ ಎಂಬುದಾಗಿತ್ತು. ಕಪ್​ನಲ್ಲಿ ತಂದುಕೊಟ್ಟಿದ್ದ ಟೀಯನ್ನು ಕುಡಿದಿದ್ದ ಆಲಿಯಾ, ಒಂದು ಗುಟುಕು ಕುಡಿಯುತ್ತಲೇ ಇದಕ್ಕೆ ಶುಗರ್ ಹಾಕಿದ್ದಾರೆಯೇ ಎಂದು ಪ್ರಶ್ನಿಸಿದ್ದರು. ಜತೆಗೆ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿ ಪಾನೀಯವನ್ನು ಮರಳಿಸಿದ್ದರು. ಆಗ ಸೆಟ್​ನಲ್ಲಿದ್ದ ಕಪಿಲ್ ಶರ್ಮಾ ಹಾಗೂ ಸಹನಟರು ಇಷ್ಟೆಲ್ಲಾ ದುಡಿಯುತ್ತೀರಿ, ಆದರೆ ಶುಗರ್ ತಿನ್ನುವುದಕ್ಕಾಗುವುದಿಲ್ಲವೇ ಎಂದು ಪ್ರಶ್ನಿಸಿದಾಗ, ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಆಲಿಯಾ ಅದರ ಬಗ್ಗೆ ಎಲ್ಲರಿಗೂ ತಿಳಿಹೇಳಿದ್ದರು. ಆದರೆ ಆಲಿಯಾ ಪ್ರಸ್ತುತ ಶುಗರ್ ಹೊಂದಿರುವ ಹಲವಾರು ಪಾನೀಯ ಹಾಗೂ ತಿನಿಸುಗಳ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.

ಆಲಿಯಾರ ಹೇಳಿಕೆಯನ್ನು ಹಾಗೂ ಅವರ ಜಾಹಿರಾತುಗಳನ್ನು ಸೇರಿಸಿ ಟ್ವಿಟರ್​ನಲ್ಲಿ ವಿಡಿಯೋಗಳನ್ನು ಹರಿಬಿಡಲಾಗಿದೆ. ಅದರಲ್ಲಿ ಮೊದಲಿಗೆ ಆಲಿಯಾ ಶುಗರ್ ಒಳ್ಳೆಯದಲ್ಲ ಎನ್ನುವುದನ್ನು ತೋರಿಸಲಾಗಿದೆ. ಮುಂದಿನ ವಿಡಿಯೋದಲ್ಲಿ ಐಸ್​ಕ್ರೀಮ್, ಪಾನೀಯ, ಚಾಕಲೇಟ್​ ಸೇರಿದಂತೆ ವಿವಿಧ ಪದಾರ್ಥಗಳನ್ನು ಮಾರುವ ಕಂಪನಿಗಳ ಜಾಹಿರಾತುಗಳಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ. ಜತೆಗೆ ಜನರಿಗೆ ಅದನ್ನೇ ತಿನ್ನುವಂತೆ ಸಲಹೆ ನೀಡಿದ್ದಾರೆ. ಇದು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ
Image
ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಟ್ರೇಲರ್ ರಿಲೀಸ್ ಡೇಟ್​ ಅನೌನ್ಸ್​; ಇಲ್ಲಿದೆ ಮಾಹಿತಿ
Image
ಹಿಂದಿ ಚಿತ್ರರಂಗದ ಎಂಟ್ರಿ ಬಗ್ಗೆ ಮಹೇಶ್​ ಬಾಬುಗೆ ಪದೇಪದೇ ಪ್ರಶ್ನೆ; ಅವರು ಕೊಟ್ಟ ಖಡಕ್ ಉತ್ತರ ಹೇಗಿತ್ತು ನೋಡಿ
Image
ಜಾನ್ವಿ ಕಪೂರ್ ಜತೆ ಕಾಣಿಸಿಕೊಂಡ ಮಿಸ್ಟರಿ ಮ್ಯಾನ್​; ಫ್ಯಾನ್ಸ್​ ಮನಸ್ಸಲ್ಲಿರುವ ಪ್ರಶ್ನೆ ಏನು?
Image
‘ವಿಕ್ರಾಂತ್ ರೋಣ ಬಗ್ಗೆ ಅಭಿಮಾನಿಗಳಿಗೆ ದಿನಕ್ಕೊಂದು ಅಪ್​​ಡೇಟ್​ ಕೊಡ್ತೀವಿ’; ಜಾಕ್ ಮಂಜು

‘‘ಶುಗರ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ನೀವು ತಿನ್ನುವುದನ್ನು ಬಿಟ್ಟಿದ್ದೀರಿ, ಆದರೆ ಜನರಿಗೆ ಅಂತಹ ಪದಾರ್ಥಗಳನ್ನೇ ತಿನ್ನುವಂತೆ ಸಾಲು ಸಾಲು ಜಾಹಿರಾತು ನೀಡುತ್ತೀರಲ್ಲ, ಇದು ಡಬಲ್ ಸ್ಟಾಂಡರ್ಡ್ ಅಲ್ಲವೇ?’’ ಎಂದು ಟ್ವೀಟ್ ಮೂಲಕ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ. ಆಲಿಯಾ ನಿಲುವು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದ್ದು, ಜನರನ್ನು ತಪ್ಪಿದಾರಿಗೆ ಏಕೆ ಎಳೆಯುತ್ತೀರಿ ಎಂದು ಹಲವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಆಲಿಯಾ ಕಪಿಲ್ ಶರ್ಮಾ ಶೋದಲ್ಲಿ ಮಾತನಾಡಿರುವ ಹಾಗೂ ಅವರ ಜಾಹಿರಾತುಗಳ ವಿಡಿಯೋ ಇಲ್ಲಿದೆ:

ಅಂದಹಾಗೆ ಬಾಲಿವುಡ್ ತಾರೆಯರಿಗೆ ಜಾಹಿರಾತುಗಳ ವಿಚಾರವಾಗಿ ಟೀಕೆಗಳು ಬರುವುದು ಹೊಸದೇನಲ್ಲ. ಇತ್ತೀಚೆಗಂತೂ ಬಾಲಿವುಡ್​ ಸ್ಟಾರ್​ಗಳು ಪಾನ್ ಮಸಾಲಾ ಬ್ರಾಂಡ್​ಗಳನ್ನು ಬೆಂಬಲಿಸುತ್ತಿರುವುದಕ್ಕೆ ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಅಭಿಮಾನಿಗಳ ಆಕ್ರೋಶದ ನಂತರ ಅಮಿತಾಭ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ಈ ಬ್ರಾಂಡ್​ಗಳ ಜಾಹಿರಾತುಗಳಿಂದ ಹಿಂದೆ ಸರಿದಿದ್ದನ್ನು ಇಲ್ಲಿ ಸ್ಮರಿಸಬಹುದು.

ಚಿತ್ರಗಳ ವಿಷಯಕ್ಕೆ ಬಂದರೆ ಆಲಿಯಾ ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಆರ್​ಆರ್​ಆರ್​’ ಚಿತ್ರದಲ್ಲಿ. ನಂತರ ರಣಬೀರ್ ಕಪೂರ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಆಲಿಯಾ, ‘ಬ್ರಹ್ಮಾಸ್ತ್ರ’ ಬಿಡುಗಡೆಗೆ ಕಾಯುತ್ತಿದ್ದಾರೆ. ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಹಾಗೂ ಹಾಲಿವುಡ್​ನ ‘ಹಾರ್ಟ್ ಆಫ್ ಸ್ಟೋನ್’ ಚಿತ್ರದಲ್ಲಿ ನಟಿ ಬಣ್ಣಹಚ್ಚುತ್ತಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಗಂಭೀರವಾಗಿ ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ ರಿಷಭ್ ಪಂತ್
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
ಸೇನೆಯಿಂದ ಜಮ್ಮು ಕಾಶ್ಮೀರದ ಪ್ರವಾಹದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
8 ವರ್ಷಗಳ ನಂತರ ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಇಂದು ಅರಂಭಿಸಿದ್ದ ಪ್ರತಿಭಟನೆಯನ್ನು ವಾಪಸ್ಸು ಪಡೆದ ಸಣ್ಣ ವ್ಯಾಪಾರಿಗಳು
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಶೌಚಾಲಯದ ಸಿಬ್ಬಂದಿ ನೀಡುವ ಮಾಹಿತಿ ನಿಖರವಾಗಿಲ್ಲ, ಅಸ್ಪಷ್ಟ
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಆಂಧ್ರದ ಅಮಲಾಪುರಂನಲ್ಲಿ 4 ಕೋಳಿಗಳನ್ನು ನುಂಗಿದ 6 ಅಡಿ ಉದ್ದದ ನಾಗರಹಾವು
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಯಡಿಯೂರಪ್ಪ, ವಿಜಯೇಂದ್ರ ರೈತನ ಮಕ್ಕಳಾದ್ರೆ ನಾವು ಎಮ್ಮೆಯ ಮಕ್ಕಳೇ? ಯತ್ನಾಳ್
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಸಣ್ಣ ವ್ಯಾಪಾರಿಗಳಿಂದ ತೆರಿಗೆ ವಸೂಲಿ ಮಾಡಲ್ಲ: ಸಿಎಂ ಸ್ಪಷ್ಟನೆ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
ಫೋಟೋ ತೆಗೆಸಿಕೊಂಡವರ ಹಿನ್ನೆಲೆ ನನಗೆ ಹೇಗೆ ಗೊತ್ತಾಗುತ್ತದೆ: ಬಸವರಾಜ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ
‘ಕೊತ್ತಲವಾಡಿ’ ಬಜೆಟ್ ಎಷ್ಟು? ಕಾಟನ್ ಸೀರೆ ಉದಾಹರಣೆ ಕೊಟ್ಟ ಯಶ್ ತಾಯಿ