Sonu Sood: ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಸೋನು ಸೂದ್ಗೆ ಹಣ ಬರೋದು ಎಲ್ಲಿಂದ? ಪೂರ್ತಿ ವಿವರ ನೀಡಿದ ನಟ
Sonu Soon endorsement fees: ಹೆಚ್ಚಾಗಿ ವಿಲನ್ ಪಾತ್ರದಲ್ಲಿ ಬಣ್ಣಹಚ್ಚುವ ಸೋನು ಸೂದ್ ದೇಶಾದ್ಯಂತ ಜನರಿಗೆ ಸಹಾಯ ಮಾಡಲು ಆರ್ಥಿಕವಾಗಿ ಹೇಗೆ ಸಾಧ್ಯವಾಯಿತು ಎನ್ನುವುದು ಹಲವರ ಪ್ರಶ್ನೆ. ಇದಕ್ಕೆ ನಟ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಉತ್ತರಿಸಿದ್ದಾರೆ. ಜತೆಗೆ ಅವರ ಕಾರ್ಯವಿಧಾನದ ಬಗ್ಗೆ ಕುತೂಹಲಕರ ವಿಚಾರ ತೆರೆದಿಟ್ಟಿದ್ದಾರೆ.
ಬಹುಭಾಷಾ ನಟ ಸೋನು ಸೂದ್ (Sonu Sood) ಕೊರೊನಾ ಕಾಲಘಟ್ಟದ ನಂತರ ರಿಯಲ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಇದೇನು ಅವರ ಚಿತ್ರಗಳಿಂದ ಬಂದ ಹೆಗ್ಗಳಿಕೆಯಲ್ಲ. ಬದಲಾಗಿ ಕಷ್ಟದಲ್ಲಿರುವ ಜನ ಸಾಮಾನ್ಯರಿಗೆ ಅವರು ನೆರವು ನೀಡಿದ ನಂತರ ಜನರೇ ಪ್ರೀತಿಯಿಂದ ಕರೆಯುತ್ತಿರುವ ಹೆಸರು ‘ರಿಯಲ್ ಹೀರೋ’. ದಿನದಿಂದ ದಿನಕ್ಕೆ ಸೋನು ವರ್ಚಸ್ಸು ಹೆಚ್ಚುತ್ತಿದೆ. ದೇಶದ ಮೂಲೆಮೂಲೆಗಳಿಂದ ನಟನ ಬಳಿ ಸಹಾಯ ಕೇಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ತಮ್ಮ ಸಂಸ್ಥೆಯ ಮೂಲಕ ಸಹಾಯ ಮಾಡಲು ನಟ ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಹಲವರು ಸೋನು ಅವರ ಹಣದ ಮೂಲದ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಹೆಚ್ಚಾಗಿ ವಿಲನ್ ಪಾತ್ರದಲ್ಲಿ ಬಣ್ಣಹಚ್ಚುವ ಸೋನು ಸೂದ್ ದೇಶಾದ್ಯಂತ ಜನರಿಗೆ ಸಹಾಯ ಮಾಡಲು ಆರ್ಥಿಕವಾಗಿ ಹೇಗೆ ಸಾಧ್ಯವಾಯಿತು ಎನ್ನುವುದು ಹಲವರ ಪ್ರಶ್ನೆ. ಇದಕ್ಕೆ ನಟ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಉತ್ತರಿಸಿದ್ದಾರೆ. ಜತೆಗೆ ಅವರ ಕಾರ್ಯವಿಧಾನದ ಬಗ್ಗೆ ಕುತೂಹಲಕರ ವಿಚಾರ ತೆರೆದಿಟ್ಟಿದ್ದಾರೆ.
‘ದಿ ಮ್ಯಾನ್ ಮ್ಯಾಗಜೀನ್’ ಜತೆ ಮಾತನಾಡಿದ ನಟ ಹೇಗೆ ಜನರಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ ಹಲವು ಸಹಾಯಗಳು ಒದಗಿ ಬರುತ್ತವೆ ಎಂದು ವಿವರಿಸಿದ್ದು, ಬೇರೆ ಜನರ ಸಹಾಯವನ್ನು ಪಡೆಯುವುದರ ಬಗ್ಗೆ ವಿವರಿಸಿದ್ದಾರೆ. ‘‘ನಾನೊಂದು ಉದಾಹರಣೆ ನೀಡುತ್ತೇನೆ’’ ಎಂದು ಮಾತು ಆರಂಭಿಸಿರುವ ಸೋನು ಸೂದ್, ‘‘ಇತ್ತೀಚೆಗೆ ದುಬೈ ಟ್ರಿಪ್ಗೆ ತೆರಳಿದಾಗ ಆಸ್ಟರ್ ಆಸ್ಪತ್ರೆಯ ವಿಲ್ಸನ್ ಎನ್ನುವವರು ಪರಿಚಯವಾದರು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಾ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ನಿಮ್ಮ ಕಾರ್ಯಕ್ಕೆ ನಾನೂ ಜತೆಯಾಗಬೇಕು ಎಂದು ಅವರು ಕೋರಿಕೆ ಇಟ್ಟರು’’ ಎಂದಿದ್ದಾರೆ ಸೋನು ಸೂದ್.
ನಂತರ ನಡೆದ ಮಾತುಕತೆಯ ವಿವರ ಬಹಿರಂಗಪಡಿಸಿದ ನಟ, ‘‘ಅವರ ಮಾತಿಗೆ ಪ್ರತಿಯಾಗಿ ನಾನು- ಸರಿ, ನಿಮ್ಮ ಆಸ್ಪತ್ರೆಗೆ ರಾಯಭಾರಿಯಾಗುತ್ತೇನೆ. ಅದಕ್ಕೆ ಪ್ರತಿರೂಪವಾಗಿ 50 ಲಿವರ್ ಟ್ರಾನ್ಸ್ಪ್ಲಾಂಟ್ಗಳನ್ನು ನೀಡಿ ಎಂದೆ. ಅದರ ಒಟ್ಟಾರೆ ಮೊತ್ತ ಸುಮಾರು 12 ಕೋಟಿ ರೂಗಳಾಗಬಹುದು’’ ಎಂದಿದ್ದಾರೆ.
ಜಾಹಿರಾತಿಗೆ ಪಡೆಯುವ ಸಂಭಾವನೆಯ ಬದಲಾಗಿ ಲಿವರ್ ಟ್ರಾನ್ಸ್ಪ್ಲಾಂಟ್ಗಳನ್ನು ಪ್ರತಿಯಾಗಿ ಪಡೆಯುವ ಬಗ್ಗೆ ಸೋನು ಮತ್ತಷ್ಟು ಮಾಹಿತಿ ನೀಡಿದ್ದಾರೆ. ‘‘ಈಗ ನಾವು ಮಾತನಾಡುವ ವೇಳೆಗೆ- ಯಾರಿಗೆ ಜೀವನದಲ್ಲಿ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಭರಿಸುವುದೇ ಅಸಾಧ್ಯವಾಗಿತ್ತೋ ಅಂತಹ ಇಬ್ಬರು ಲಿವರ್ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾಗಿದ್ದಾರೆ’’ ಎಂದಿದ್ದಾರೆ.
ತಮ್ಮ ಕಾರ್ಯನಿರ್ವಹಣೆಯ ವಿಧಾನವನ್ನು ವಿವರಿಸಿದ ಸೋನು, ‘‘ಇದು ಸರಿಯಾದ ಚುಕ್ಕೆಗಳನ್ನು ಜೋಡಿಸುವ ಕ್ರಮವಷ್ಟೇ. ಜನರು ನಮ್ಮ ಬಳಿಗೆ ಬಂದು ನಾವು ಸಹಾಯ ಮಾಡಬೇಕು ಎನ್ನುತ್ತಾರೆ. ಅದಕ್ಕೆ ಒಂದು ಮಾರ್ಗವನ್ನು ಹುಡುಕಿದರಾಯಿತು’’ ಎಂದಿದ್ದಾರೆ. ಈ ಮೂಲಕ ತಮ್ಮ ಕಾರ್ಯವಿಧಾನದ ಬಗ್ಗೆ ಉದಾಹರಣೆಯನ್ನು ನೀಡಿರುವ ನಟ, ಹೇಗೆ ಅಷ್ಟೆಲ್ಲಾ ಜನರಿಗೆ ಸಹಾಯ ಮಾಡಲು ಸಾಧ್ಯವಾಯಿತು ಎನ್ನುವುಸನ್ನು ವಿವರಿಸಿದ್ದಾರೆ. ಸದ್ಯ ಸೋನು ಸೂದ್ ಅವರ ಕಾರ್ಯಶೈಲಿಗೆ ನೆಟ್ಟಿಗರಿಂದ ಅಪಾರ ಪ್ರಶಂಸೆ ವ್ಯಕ್ತವಾಗಿದೆ.
ಚಿತ್ರಗಳ ವಿಷಯಕ್ಕೆ ಬಂದರೆ ಸೋನು ಸೂದ್ ‘ಪೃಥ್ವಿರಾಜ್’ ಚಿತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ. ತಮಿಳು ಚಿತ್ರದಲ್ಲೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:45 am, Wed, 11 May 22