Thrivikrama Release Date: ವಿಕ್ರಮ್ ರವಿಚಂದ್ರನ್ ನಟನೆಯ ‘ತ್ರಿವಿಕ್ರಮ’ ರಿಲೀಸ್ ಡೇಟ್ ಅನೌನ್ಸ್

Vikram Ravichandran: ಕೊವಿಡ್ ನಂತರ ಇದೀಗ ಸ್ಯಾಂಡಲ್​ವುಡ್ ಭರ್ಜರಿಯಾಗಿ ಚೇತರಿಸಿಕೊಂಡಿದ್ದು, ಸಾಲುಸಾಲಾಗಿ ಬಹುನಿರೀಕ್ಷಿತ ಚಿತ್ರಗಳು ರಿಲೀಸ್ ಆಗುತ್ತಿವೆ. ವಿಕ್ರಮ್ ರವಿಚಂದ್ರನ್ ನಟನೆಯ ‘ತ್ರಿವಿಕ್ರಮ’ ಕೂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.

TV9kannada Web Team

| Edited By: shivaprasad.hs

May 10, 2022 | 2:53 PM

ಕೊವಿಡ್ ನಂತರ ಇದೀಗ ಸ್ಯಾಂಡಲ್​ವುಡ್ (Sandalwood) ಭರ್ಜರಿಯಾಗಿ ಚೇತರಿಸಿಕೊಂಡಿದ್ದು, ಸಾಲುಸಾಲಾಗಿ ಬಹುನಿರೀಕ್ಷಿತ ಚಿತ್ರಗಳು ರಿಲೀಸ್ ಆಗುತ್ತಿವೆ. ವಿಕ್ರಮ್ ರವಿಚಂದ್ರನ್ ನಟನೆಯ ‘ತ್ರಿವಿಕ್ರಮ’ (Thrivikrama Movie) ಕೂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಜೂನ್ 24ರಂದು ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಚಿತ್ರತಂಡ ಘೋಷಿಸಿದೆ. ಕಾರ್ಯಕ್ರಮದಲ್ಲಿ ನಟಿ ತಾರಾ, ನಟ ಶರಣ್, ಸಾಧುಕೋಕಿಲ, ಮನುರಂಜನ್, ನಿರ್ದೇಶಕ ಶರಣ್ ಮೊದಲಾದವರು ಉಪಸ್ಥಿತರಿದ್ದರು. ‘ತ್ರಿವಿಕ್ರಮ’ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದು, ಸಂತೋಷ್ ರೈ ಛಾಯಾಗ್ರಹಣ ಮಾಡಿದ್ದಾರೆ. ಈಗಾಗಲೇ ಚಿತ್ರದ ಆಡಿಯೋ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು ಸುದ್ದಿಯಾಗಿತ್ತು. ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆಗಳಿದ್ದು, ರವಿಚಂದ್ರನ್ ಪುತ್ರ ವಿಕ್ರಮ್​ರ ಮೊದಲ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಗಳು ಗರಿಗೆದರಿವೆ.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on

Click on your DTH Provider to Add TV9 Kannada