‘ವಿಕ್ರಾಂತ್ ರೋಣ ಬಗ್ಗೆ ಅಭಿಮಾನಿಗಳಿಗೆ ದಿನಕ್ಕೊಂದು ಅಪ್​​ಡೇಟ್​ ಕೊಡ್ತೀವಿ’; ಜಾಕ್ ಮಂಜು

‘ವಿಕ್ರಾಂತ್ ರೋಣ’ ಸಿನಿಮಾ ಬಗ್ಗೆ ನಿರ್ಮಾಪಕ ಜಾಕ್ ಮಂಜು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಬಗ್ಗೆ ಅವರು ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ.

TV9kannada Web Team

| Edited By: Rajesh Duggumane

May 10, 2022 | 9:59 AM

‘ಕಿಚ್ಚ’ ಸುದೀಪ್ (Kichcha Sudeep) ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ಟೀಸರ್ ಮೂಲಕ ಗಮನ ಸೆಳೆದಿದೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ‘ಒನ್​ ಟ್ವೆಂಟಿ 8 ಮೀಡಿಯಾ’ ಸಂಸ್ಥೆಯು ‘ವಿಕ್ರಾಂತ್​ ರೋಣ’ ಸಿನಿಮಾದ ಹೊರ ದೇಶಗಳ ವಿತರಣೆ ಹಕ್ಕುಗಳನ್ನು ಖರೀದಿಸಿದೆ. 10 ಕೋಟಿ ರೂಪಾಯಿಗೆ ಈ ಹಕ್ಕು ಮಾರಾಟ ಆದ ಬಗ್ಗೆ ಇತ್ತೀಚೆಗೆ ವರದಿ ಆಗಿತ್ತು. ಈ ಚಿತ್ರದ ಬಗ್ಗೆ ನಿರ್ಮಾಪಕ ಜಾಕ್ ಮಂಜು (Jack Manju) ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಬಗ್ಗೆ ಅವರು ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ. ‘ಮುಂದಿನ ವಾರ ಒಂದು ದೊಡ್ಡ ಅಪ್​ಡೇಟ್ ಕೊಡ್ತೀವಿ. ಅದಾದ ನಂತರದ ವಾರಗಳಿಂದ ಅಭಿಮಾನಿಗಳಿಗೆ ಸಿನಿಮಾ ಬಗ್ಗೆ ದಿನಕ್ಕೊಂದು ಅಪ್​​ಡೇಟ್​ ಸಿಗಲಿದೆ’ ಎಂದು ಜಾಕ್ ಮಂಜು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada