ಅವಸರದಲ್ಲಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ!
ಅಲ್ಲಿಂದ ಅವರು ಬೇರೆ ಎಲ್ಲಿಗೋ ಹೋಗಬೇಕಿತ್ತು. ಹಾಗಾಗೇ, ಅವರು ತಮ್ಮ ಕಾರಿನ ಬಳಿ ವೇಗವಾಗಿ ಹೋಗುವಾಗ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುವ ವ್ಯವಧಾನವನ್ನು ತೋರಲಿಲ್ಲ.
Bengaluru: ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಸೋಮವಾರ ಬಹಳ ಬ್ಯೂಸಿಯಾಗಿದ್ದರು ಅನಿಸುತ್ತೆ. ಮುಸಲ್ಮಾನ ಶಾಸಕ ಮತ್ತು ನಾಯಕರ ನಿಯೋಗವೊಂದು (delegation) ಬೆಳಗಿನ ಸಮಯ ಅವರನ್ನು ಭೇಟಿಯಾಗಿ ಅಜಾನ್ (Azaan) ಕುರಿತು ಎದ್ದಿರುವ ವಿವಾದದ ಬಗ್ಗೆ ಆತಂಕ ತೋಡಿಕೊಳ್ಳುತ್ತಾ ಮನವಿ ಪತ್ರ ಸಲ್ಲಿಸಿದರು. ಅದಾದ ಮೇಲೆ ಬೇರೆ ಬೇರೆ ಜನ ಅವರ ಅಧಿಕೃತ ನಿವಾಸದ ಬಳಿ ಘೇರಾಯಿಸಿ ಮನವಿಗಳನ್ನು ಸಲ್ಲಿಸಿದರು. ಜನಜಂಗುಳಿ ಜಾಸ್ತಿಯಿತ್ತು ಮತ್ತು ನೂಕುನುಗ್ಗಲಲ್ಲಿ ಕೆಲವರು ಸಿದ್ದರಾಮಯ್ಯನವರ ಮೈಮೇಲೂ ಬಿದ್ದರು. ಅರೆಕ್ಷಣ ಗಾಬರಿಯಾದ ಅವರು ಏಯ್ ಅಂತ ಜೋರಾಗಿ ಕಿರುಚಿ ಬಳಿಕ ಸಾವರಿಸಿಕೊಂಡರು. ಆದರೆ ಅಲ್ಲಿದ್ದ ಎಲ್ಲ ಜನರಿಂದ ಪತ್ರಗಳನ್ನು ತೆಗೆದುಕೊಂಡರು.
ಅಲ್ಲಿಂದ ಅವರು ಬೇರೆ ಎಲ್ಲಿಗೋ ಹೋಗಬೇಕಿತ್ತು. ಹಾಗಾಗೇ, ಅವರು ತಮ್ಮ ಕಾರಿನ ಬಳಿ ವೇಗವಾಗಿ ಹೋಗುವಾಗ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುವ ವ್ಯವಧಾನವನ್ನು ತೋರಲಿಲ್ಲ. ‘ಸರ್ ಮುಸ್ಲಿಂ ನಾಯಕರ ನಿಯೋಗ ನಿಮ್ಮನ್ನು ಭೇಟಿ ಮಾಡಿತಲ್ಲ, ಏನು ಚರ್ಚೆಯಾಯಿತು,’ ಅಂತ ಮಾಧ್ಯಮದವರು ಕೇಳಿದಾಗ ಹೊರಡುವ ತರಾತುರಿಯಲ್ಲಿದ್ದ ಅವರು ಏನನ್ನೂ ಹೇಳದೆ, ಆಯ್ತು ಆಯ್ತು ಅನ್ನುತ್ತಾ ಮುಂದೆ ಸಾಗಿದರು.
ಆಮೇಲೆ ಮಾಧ್ಯಮದವರು ಹನುಮಾನ ಚಾಲೀಸಾ ಪಠಿಸುವುದು ಶುರುವಾಗಿರುವ ಬಗ್ಗೆ ಕೇಳಿದಾಗ ನಾನು ಉತ್ತರ ಕೊಡೋದಿಲ್ಲ ಅನ್ನುತ್ತಾ ಮುಂದಕ್ಕೆ ಹೋಗುತ್ತಾರೆ. ಪತ್ರಕರ್ತರು ಅವರನ್ನು ಹಿಂಬಾಲಿಸ ಅದೇ ಪ್ರಶ್ನೆಯನ್ನು ಪುನರಾವರ್ತಿಸಿದಾಗ ಆಯ್ತು ಬಿಡಿ ಭಗವಾನ ಹನುಮಾನ ಎಲ್ಲರಿಗೂ ಸದ್ಬುದ್ಧಿ ನೀಡಲಿ ಅನ್ನುತ್ತಾರೆ.
ಸಾಮಾನ್ಯವಾಗಿ ಸಿದ್ದರಾಮಯ್ಯನವರು ಮಾಧ್ಯಮದವರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಆದರೆ ಸೋಮವಾರ ಅವರಿಗೆ ಅದ್ಯಾವ ತುರ್ತು ಕೆಲಸವಿತ್ತೋ?
ಇದನ್ನೂ ಓದಿ: ಆಜಾನ್ ವಿರುದ್ಧ ಮಂತ್ರ ಪಠಣ: ಅವರವರ ಧರ್ಮಕ್ಕೆ ಅವರವರು ಗೌರವ ಕೊಡಬೇಕು: ಡಿ.ಕೆ.ಶಿವಕುಮಾರ್