ಪುನೀತ್ ರಾಜ್ಕುಮಾರ್ ಬದುಕಿದ್ದಾಗಲೇ ‘ರಾಜ್ ಕಪ್’ ಆಯೋಜಿಸಲು ನಡೆದಿತ್ತು ಸಿದ್ಧತೆ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ‘ರಾಜ್ಕಪ್ ಕ್ರಿಕೆಟ್ಟೂರ್ನಿ’ ಆಯೋಜನೆಗೊಂಡಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ 8 ತಂಡಗಳಿಗೆ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆದಿದೆ.
ಕ್ರಿಕೆಟ್ನಲ್ಲಿ ನಾನಾ ರೀತಿಯ ಲೀಗ್ಗಳು ಆರಂಭವಾಗಿದೆ. ಅದೇ ರೀತಿ ಸ್ಯಾಂಡಲ್ವುಡ್ನಲ್ಲೂ (Sandalwood) ರಾಜ್ ಕಪ್ ಟೂರ್ನಿ ನಡೆಯುತ್ತಿದೆ. ಇದಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಸ್ಮರಣಾರ್ಥ ‘ರಾಜ್ಕಪ್ ಕ್ರಿಕೆಟ್ಟೂರ್ನಿ’ ಆಯೋಜನೆಗೊಂಡಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ 8 ತಂಡಗಳಿಗೆ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆದಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಎಂಟು ತಂಡಗಳ ಮಾಲೀಕರು ಭಾಗಿ ಆಗಿದ್ದಾರೆ. ‘ಇದು ಐದನೇ ಸೀಸನ್. ಪುನೀತ್ ಇದ್ದಾಗಲೇ ಅದನ್ನು ಆಯೋಜನೆ ಮಾಡಲು ಪ್ಲ್ಯಾನ್ ನಡೆದಿತ್ತು. ಆದರೆ, ಕಾರಣಾಂತರಗಳಿಂದ ಮುಂದೂಡುತ್ತಾ ಬಂದೆವು. ಅವರಿದ್ದರೆ ನಮಗೆ ದೊಡ್ಡ ಶಕ್ತಿ ಆಗಿರುತ್ತಿತ್ತು’ ಎಂದು ರಾಜೇಶ್ ಬ್ರಹ್ಮಾವರ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos