Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಮನ ಶಾಂತಗೊಳಿಸಬೇಕಿದ್ದ ಆಜಾನ್​-ಭಜನೆ ಸದ್ದು ಜೋರಾಗುತ್ತಿದೆ, ಭಯೋತ್ಪಾದನೆ ಸೃಷ್ಟಿ ಹಂತಕ್ಕೆ ಹೋಲಿಸಲಾಗಿದೆ! ಈ ಬಗ್ಗೆ ಟಿವಿ 9 ಕನ್ನಡ ಡಿಜಿಟಲ್​ ಲೈವ್​ ಚರ್ಚೆ

ಮೈಮನ ಶಾಂತಗೊಳಿಸಬೇಕಿದ್ದ ಆಜಾನ್​-ಭಜನೆ ಸದ್ದು ಜೋರಾಗುತ್ತಿದೆ, ಭಯೋತ್ಪಾದನೆ ಸೃಷ್ಟಿ ಹಂತಕ್ಕೆ ಹೋಲಿಸಲಾಗಿದೆ! ಈ ಬಗ್ಗೆ ಟಿವಿ 9 ಕನ್ನಡ ಡಿಜಿಟಲ್​ ಲೈವ್​ ಚರ್ಚೆ

TV9 Web
| Updated By: ಸಾಧು ಶ್ರೀನಾಥ್​

Updated on: May 10, 2022 | 3:38 PM

TV 9 Kannada Digital Live: ಮೈಮನಗಳನ್ನು ಶಾಂತಗೊಳಿಸಿ, ನೆಮ್ಮದಿ ಸ್ಥಾಪಿಸಬೇಕಿದ್ದ ಆಜಾನ್​ ಮತ್ತು ಭಜನೆ ವಿಷಯಗಳು ವಿವಾದದ ಸದ್ದು ಮಾಡತೊಗಿವೆ. ಅದನ್ನು ಭಯೋತ್ಪಾದನೆ ಸೃಷ್ಟಿಗೆ ಹೋಲಿಸಲಾಗುತ್ತಿದೆ. ಭಜನೆ ಮಾಡುವವರನ್ನು ಭಯೋತ್ಪಾದಕರು ಎಂದೂ ವರ್ಣಿಸಲಾಗಿದೆ. ಈ ಬಗ್ಗೆ ಟಿವಿ 9 ಕನ್ನಡ ಡಿಜಿಟಲ್​ ಲೈವ್​ ಚರ್ಚೆ

ಮೈಮನಗಳನ್ನು ಶಾಂತಗೊಳಿಸಿ, ನೆಮ್ಮದಿ ಸ್ಥಾಪಿಸಬೇಕಿದ್ದ ಆಜಾನ್​ ಮತ್ತು ಭಜನೆ ವಿಷಯಗಳು ವಿವಾದದ ಸದ್ದು ಮಾಡತೊಗಿವೆ. ಅದನ್ನು ಭಯೋತ್ಪಾದನೆ ಸೃಷ್ಟಿಗೆ ಹೋಲಿಸಲಾಗುತ್ತಿದೆ (Azaan vs Hanuman Chalisa). ಭಜನೆ ಮಾಡುವವರನ್ನು ಭಯೋತ್ಪಾದಕರು ಎಂದು ಹೇಳುವ ಮೂಲಕ, ಮೇಲ್ಮನೆ ವಿರೋಧ ಪಕ್ಷದ ನಾಯಕ (Congress) ಬಿ.ಕೆ. ಹರಿಪ್ರಸಾದ್​ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ. ಈ ವಿವಾದದ ಕುರಿತು ಆ್ಯಂಕರ್​ ಹರಿಪ್ರಸಾದ್,​ ಇಂದಿನ ಟಿವಿ 9 ಕನ್ನಡ ಡಿಜಿಟಲ್​ ಲೈವ್​ ಚರ್ಚೆಯನ್ನು ಮಧ್ಯಾಹ್ನ 3.30 ಕ್ಕೆ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ (TV 9 Kannada Digital Live)

ಈ ನಡುವೆ ಅಜಾನ್ v/s ಹನುಮಾನ್ ಚಾಲೀಸ್ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸ್ ಅಧಿಕಾರಿಗಳ ಜೊತೆ ಸೋಮವಾರ ಸಂಜೆ ಮಹತ್ವದ ಸಭೆ ನಡೆಸಿದ್ದಾರೆ. ಶಾಂತಿ ಕದಡುವ ವಾತಾವರಣ ನಿರ್ಮಾಣವಾಗಬಾರದು. ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು ಎಂದು ಸಭೆಯಲ್ಲಿ ಉನ್ನತಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹೈಕೋರ್ಟ್, ಸುಪ್ರೀಂಕೋರ್ಟ್ ಆದೇಶವನ್ನ ಪಾಲಿಸಬೇಕು. ಇಲ್ಲೀಗಲ್ ಆಗಿರುವ ಡಿಸಿಬಲ್ಗಳು ಅರ್ಜಿ ಹಾಕಿ ಅನುಮತಿ ಪಡೆಯಬೇಕು. 15 ದಿನ ಅಥವಾ 1 ತಿಂಗಳಲ್ಲಿ ಅರ್ಜಿ ಆಹ್ವಾನಿಸಿ. ಯಾವ ಡಿಸಿಬಲ್ ಯಾವ ಟೈಮ್ನಲ್ಲಿ ಬಳಸಬೇಕು ಅನ್ನೋದನ್ನ ಸುಪ್ರೀಂಕೋರ್ಟ್ ಆದೇಶದಂತೆ ಪಾಲಿಸಬೇಕು. ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಒಂದು ಡಿಸಿಬಲ್, ರಾತ್ರಿ 10 ಗಂಟೆಯಿಂದ 6 ಗಂಟೆವರೆಗೆ ಒಂದು ಪ್ರಮಾಣದಂತೆ ಅನುಸರಿಸಬೇಕು. ಇದು ಕೇವಲ ಹಿಂದೂ ಧಾರ್ಮಿಕ ಅಥವಾ ಮುಸ್ಲಿಂ ಧಾರ್ಮಿಕ ಧ್ವನಿವರ್ಧಕಗಳಿಗೆ ಮಾತ್ರ ಅನ್ವಯವಾಗೋದಿಲ್ಲ. ಸಾರ್ವಜನಿಕ ಕಾರ್ಯಕ್ರಮಗಳಿಗೂ ಇದು ಅನ್ವಯಿಸುತ್ತೆ. ಧ್ವನಿವರ್ಧಕ ಮಿತಿ ಪ್ರಮಾಣದಲ್ಲೇ ಬಳಸಬೇಕು. ಒಂದು ಸರ್ಕ್ಯೂಲರ್ ಅನ್ನು ಶೀಘ್ರವೇ ಹೊರಡಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ