ಸ್ಯಾಂಡಲ್ವುಡ್ನ (Sandalwood) ಖ್ಯಾತ ನಟ ನಿರ್ಮಾಪಕ ದಿ. ಎಂ.ಪಿ.ಶಂಕರ್ (MP Shankar) ಪತ್ನಿ ಮಂಜುಳ ಶಂಕರ್ (Manjula Shankar) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೈಸೂರಿನ ವಿಜಯನಗರದ ನಿವಾಸದಲ್ಲಿ ಮಂಜುಳಾ ಶಂಕರ್ ಕೊನೆಯುಸಿರೆಳೆದಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಎಂ.ಪಿ.ಶಂಕರ್ 2008ರಲ್ಲಿ ನಿಧನ ಹೊಂದಿದ್ದರು. ಇದೀಗ ಅವರ ಪತ್ನಿ ಮಂಜುಳಾರೂ ಇಹಲೋಕ ತ್ಯಜಿಸಿದ್ದಾರೆ. ಕೆಲ ದಿನಗಳ ಹಿಂದೆ ಮಂಜುಳಾರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಆಂಜಿಯೋಗ್ರಾಮ್ ಮಾಡಲಾಗಿತ್ತು. ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಂಜುಳಾ ಅವರ ಪತಿ ದಿವಂಗತ ಎಂ.ಪಿ ಶಂಕರ್ ಕನ್ನಡ ಚಿತ್ರರಂಗದಲ್ಲಿ ನಟ ಹಾಗೂ ನಿರ್ಮಾಪಕರಾಗಿ ಸೇವೆಸಲ್ಲಿಸಿದ್ದರು. ‘ಸತ್ಯ ಹರಿಶ್ಚಂದ್ರ’ ಚಿತ್ರದಲ್ಲಿ ಎಂಪಿ ಶಂಕರ್ ಅವರ ‘ವೀರಬಾಹು’ ಪಾತ್ರವನ್ನು ಜನರು ಈಗಲೂ ಸ್ಮರಿಸಿಕೊಳ್ಳುತ್ತಾರೆ. ಡಾ.ರಾಜ್ಕುಮಾರ್ರ ‘ಗಂಧದ ಗುಡಿ’ ಚಿತ್ರವನ್ನು ಎಂಪಿ ಶಂಕರ್ ನಿರ್ಮಾಣ ಮಾಡಿದ್ದರು.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ