ಹಾಲಿನ ಬೆಲೆಯನ್ನು ರೂ. 4 ಹೆಚ್ಚಿಸಿ ಅದನ್ನು ರೈತನಿಗೆ ನೀಡಲು ಸರ್ಕಾರಕ್ಕೆ ಏನು ಧಾಡಿ? ಡಿ ಕೆ ಶಿವಕುಮಾರ

ಹಾಲಿನ ಬೆಲೆಯನ್ನು ರೂ. 4 ಹೆಚ್ಚಿಸಿ ಅದನ್ನು ರೈತನಿಗೆ ನೀಡಲು ಸರ್ಕಾರಕ್ಕೆ ಏನು ಧಾಡಿ? ಡಿ ಕೆ ಶಿವಕುಮಾರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 10, 2022 | 7:53 PM

ನಮ್ಮ ದೇಶದಲ್ಲಿ ಅಶಾಂತಿ ಮೂಡಿಸುತ್ತಿರುವವರು ಯಾರು? ಒಂದು ಕಡೆ ಅವರೇ ಶಾಂತಿ ಕದಡುವ ಕೆಲಸ ಮಾಡಿಸುತ್ತಾರೆ, ಬಳಿಕ ಅದನ್ನು ಚಿವುಟಿ ಹಾಕುವ ಪ್ರಯತ್ನ ಮಾಡುತ್ತಾರೆ. ಸೂಕ್ತ ಕಾನೂನು ಸೂಕ್ತ ಕ್ರಮ ತೆಗೆದುಕೊಂಡರೆ ಇಂಥದೆಲ್ಲ ಆಗುತ್ತಾ ಆಗುತ್ತಾ ಎಂದು ಶಿವಕುಮಾರ ಹೇಳಿದರು.

Bengaluru: ಉನ್ನತ ಶಿಕ್ಷಣ ಸಚಿವ ಸಿ ಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರು ಕಾಂಗ್ರೆಸ್ ಶಾಸಕ ಎಮ್ ಬಿ ಪಾಟೀಲ (MB Patil) ಅವರನ್ನು ಭೇಟಿಯಾಗಿದ್ದು ರಾಜಕೀಯ ಕ್ಷೇತ್ರದಲ್ಲಿ ಬಹಳ ಕುತೂಹಲ ಸೃಷ್ಟಿಸಿದೆ. ಮಂಗಳವಾರದಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರಿಗೆ ಇದೇ ಪ್ರಶ್ನೆಯನ್ನು ಕೇಳಲಾಯಿತು. ಅವರಿಗೆ ಈಗ ರಕ್ಷಣೆ ಬೇಕಾಗಿದೆ, ಕಾಂಗ್ರೆಸ್ ಪಕ್ಷದ ದಾಳಿ ಹೆಚ್ಚಾಗಿರುವ ಕಾರಣ ಅದರಿಂದ ತಪ್ಪಿಸಿಕೊಳ್ಳಲು ಒಂದು ದಾರಿ ಬೇಕಾಗಿದೆ. ಯಾಕೆ ಭೇಟಿಯಾಗಿದ್ದು ಅಂತ ಕೇಳಿದರೆ ಅವರ ಶಿಕ್ಷಣ ಸಂಸ್ಥೆಗಳಿರುವುದರಿಂದ ಸಲಹೆ ಪಡೆಯಲು ಹೋಗಿದ್ದೆ, ಇದೊಂದು ಖಾಸಗಿ ಭೇಟಿಯಾಗಿತ್ತು ಅನ್ನುತ್ತಾರೆ ಎಂದ ಶಿವಕುಮಾರ ಅವರು ಈ ಪ್ರಶ್ನೆಯನ್ನು ಸಚಿವರಿಗೆ ಕೇಳುವುದೇ ಒಳಿತು ಅಂದರು.

ಮತ್ತೊಬ್ಬ ಕಾಂಗ್ರೆಸ್ ನಾಯಕ ಹಾಗೂ ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಬಿಕೆ ಹರಿಪ್ರಸಾದ್ ಅವರು ಭಯೋತ್ಪಾದಕ ಪದ ಬಳಸಿರುವುದನ್ನು ಅವರ ಗಮನಕ್ಕೆ ತಂದಾಗ, ಅವರು ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಅವರು ಹೇಳಿರುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ನಮ್ಮ ದೇಶದಲ್ಲಿ ಅಶಾಂತಿ ಮೂಡಿಸುತ್ತಿರುವವರು ಯಾರು? ಒಂದು ಕಡೆ ಅವರೇ ಶಾಂತಿ ಕದಡುವ ಕೆಲಸ ಮಾಡಿಸುತ್ತಾರೆ, ಬಳಿಕ ಅದನ್ನು ಚಿವುಟಿ ಹಾಕುವ ಪ್ರಯತ್ನ ಮಾಡುತ್ತಾರೆ. ಸೂಕ್ತ ಕಾನೂನು ಸೂಕ್ತ ಕ್ರಮ ತೆಗೆದುಕೊಂಡರೆ ಇಂಥದೆಲ್ಲ ಆಗುತ್ತಾ ಆಗುತ್ತಾ ಎಂದು ಶಿವಕುಮಾರ ಹೇಳಿದರು.

ಸರ್ಕಾರ ಕೇವಲ ಮುಂದಿನ ಚುನಾವಣೆ ಮೇಲೆ ಗಮನ ಕೇಂದ್ರೀಕರಿಸಿದೆ. ನಮ್ಮ ಇತಿಹಾಸ, ನಿರುದ್ಯೋಗ, ರೈತ ಕೊಳ್ಳುವ ಗೊಬ್ಬರ, ಗ್ರಾಮೀಣ ಭಾಗಗಳಲ್ಲಿ ಜನರಿಗೆ ನೀಡಲಾಗುವ ಮಾಶಾಸನ ಮೊದಲಾದವುಗಳ ಬಗ್ಗೆ ಅದಕ್ಕೆ ಯೋಚನೆಯೇ ಇಲ್ಲ. ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಮೊದಲಾದುವುಗಳ ಬೆಲೆ ಸಿಕ್ಕಾಪಟ್ಟೆ ಏರಿಸಿರುವ ಸರ್ಕಾರ ಹಾಲಿನ ಬೆಲೆ 4 ರೂ. ಹೆಚ್ಚಿಸಿ ಅದನ್ನು ಯಾಕೆ ರೈತನಿಗೆ ಕೊಡಬಾರದು? ಹೈನುಗಾರಿಕೆ ಎಷ್ಟು ಜನರಿಗೆ ಉದ್ಯೋಗ ಕಲ್ಪಿಸುತ್ತದೆ ಅಂತ ಇವರಿಗೆ ಗೊತ್ತಿದೆಯೇ? ಅಂತ ಶಿವಕುಮಾರ ಕೇಳಿದರು.

ಬಿತ್ತನೆ ಬೀಜಗಳ ಬೆಲೆ ರೂ. 600 ರಿಂದ ರೂ. 1200ಕ್ಕೆ ಏರಿದೆ. ರೈತ ಬದುಕುವುದಾದರೂ ಹೇಗೆ? ಇದನ್ನೆಲ್ಲ ಯೋಚಿಸುವ ಶಕ್ತಿ ಸರ್ಕಾರಕ್ಕೆ ಇಲ್ಲವೇ? ಎಂದು ಶಿವಕುಮಾರ ಹೇಳಿದರು.

ಇದನ್ನೂ ಓದಿ:    ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಮಹಿಳೆಗೆ ಸಹಾಯ ಮಾಡಲು ನಿಯಮವನ್ನೇ ಬದಲಾವಣೆ ಮಾಡಿದ್ದಾರೆ; ಡಿಕೆ ಶಿವಕುಮಾರ್ ಗಂಭೀರ ಆರೋಪ