ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಮಹಿಳೆಗೆ ಸಹಾಯ ಮಾಡಲು ನಿಯಮವನ್ನೇ ಬದಲಾವಣೆ ಮಾಡಿದ್ದಾರೆ; ಡಿಕೆ ಶಿವಕುಮಾರ್ ಗಂಭೀರ ಆರೋಪ

ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಮಹಿಳೆಗೆ ಸಹಾಯ ಮಾಡಲು ನಿಯಮವನ್ನೇ ಬದಲಾವಣೆ ಮಾಡಿದ್ದಾರೆ; ಡಿಕೆ ಶಿವಕುಮಾರ್ ಗಂಭೀರ ಆರೋಪ
ಡಿಕೆ ಶಿವಕುಮಾರ್ (ಸಂಗ್ರಹ ಚಿತ್ರ)

ಹಣ ನೀಡದೇ ಈ ಸರ್ಕಾರದಲ್ಲಿ ಏನೂ ನಡೆಯುವುದಿಲ್ಲ. ಮುಂದಿನ ದಿನಗಳಲ್ಲಿ ಹಗರಣಗಳ ಪಟ್ಟಿ ಬಿಡುಗಡೆ ಮಾಡುತ್ತವೆ ಎಂದು ಮಾತನಾಡಿದ ಡಿಕೆಶಿ, ಎಂ.ಬಿ.ಪಾಟೀಲ್, ಅಶ್ವತ್ಥ್ ನಾರಾಯಣ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದರು.

TV9kannada Web Team

| Edited By: sandhya thejappa

May 10, 2022 | 4:11 PM

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ (Guest Lecture) ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಗಂಭೀರ ಆರೋಪ ಮಾಡಿದ್ದಾರೆ. ಮಲ್ಲೇಶ್ವರದ ಒಬ್ಬ ಮಹಿಳೆಗೆ ಸಹಾಯ ಮಾಡಲು ನಿಯಮವನ್ನೇ ಬದಲಾವಣೆ ಮಾಡಿದ್ದಾರೆ. ಜೊತೆಗೆ ಎರಡೆರಡು ಆದೇಶ ಹೊರಡಿಸಿದ್ದಾರೆ ಎಂದು ಶಿವಕುಮಾರ್ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಕೆಪಿಎಸ್ಸಿಯಲ್ಲಿ ಒಂದೇ ಅಲ್ಲ, ಏನೇನೋ ನಡೆದಿದೆ. ನಾನು ಸೋಮಶೇಖರ್​ರಿಗೆ ಒಮ್ಮೆ ಫೋನ್ ಮಾಡಿದ್ದೆ. ಪಿಡಬ್ಲ್ಯೂಡಿ, ಕೆಪಿಎಸ್ಸಿ ಎಲ್ಲದರಲ್ಲೂ ಹಗರಣ ನಡೆದಿದೆ. ಯಾವ ಹುದ್ದೆಗೆ ಎಷ್ಟು ಹಣ ಎಂದು ಬೋರ್ಡ್ ಹಾಕಿದ್ದಾರೆ ಎಂದು ಹೇಳಿದರು.

ಹಣ ನೀಡದೇ ಈ ಸರ್ಕಾರದಲ್ಲಿ ಏನೂ ನಡೆಯುವುದಿಲ್ಲ. ಮುಂದಿನ ದಿನಗಳಲ್ಲಿ ಹಗರಣಗಳ ಪಟ್ಟಿ ಬಿಡುಗಡೆ ಮಾಡುತ್ತವೆ ಎಂದು ಮಾತನಾಡಿದ ಡಿಕೆಶಿ, ಎಂ.ಬಿ.ಪಾಟೀಲ್, ಅಶ್ವತ್ಥ್ ನಾರಾಯಣ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅವರ ರಕ್ಷಣೆಗೆ ಎಂಬಿ ಪಾಟೀಲ್ ಭೇಟಿ ಮಾಡಿದ್ದಾರೆ. ಕಾಂಗ್ರೆಸ್ಸಿಗರು ಏನು ಮಾಡಬಾರದೆಂದು ಭೇಟಿಯಾಗಿದ್ದಾರೆ. ಕೇಳಿದರೆ ನಾವು ಶಿಕ್ಷಣ ಸಂಸ್ಥೆ ಇಟ್ಕೊಂಡಿದ್ದೇವೆ ಅಂತಾರೆ. ಕೇಳಿದ್ರೆ ಖಾಸಗಿ ಭೇಟಿ ಅಂತಾರೆ ಎಂದರು.

ಹಿಂದೂ ಭಯೋತ್ಪಾದಕರು ಎಂಬ ಬಿಕೆ ಹರಿಪ್ರಸಾದ್ ಹೇಳಿಕೆ ಬಗ್ಗೆ ಮಾತನಾಡಿದ ಶಿವಕುಮಾರ್, ಬಿಕೆ ಹರಿಪ್ರಸಾದ್ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ಭಯೋತ್ಪಾದಕರು ಅಂದರೆ ಅಶಾಂತಿ ಮೂಡಿಸುವವರು ಯಾರು? ಒಂದು ಜಾತಿಗೂ ಮತ್ತೊಂದು ಜಾತಿಗೂ ಅಶಾಂತಿ ಮಾಡುವವರು ಯಾರು? ಇದು ಸರ್ಕಾರದ ಜವಾಬ್ದಾರಿ 15 ದಿನಗಳಲ್ಲಿ ಹೊಸ ನೀತಿ ತರುತ್ತೇವೆ ಅಂತ ಈಗ ಹೇಳಿದ್ದಾರೆ. ಇಲ್ಲದಿರುವುದನ್ನು ಸರ್ಕಾರ ಸೃಷ್ಟಿಸುತ್ತಿದೆ. ಒಂದು ಕಡೆ ಬೇಡ ಅನ್ನೋದು, ಮತ್ತೊಂದು ಕಡೆ ಜಿಗುಟುವ ಕೆಲಸ ಸರ್ಕಾರ ಮಾಡುತ್ತಿದೆ. ಕಾನೂನು ಕ್ರಮ ತೆಗೆದುಕೊಂಡಿದ್ದರೆ ಯಾಕೆ ಹೀಗೆ ಆಗುತ್ತಿತ್ತು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ: ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆಗೆ ಆಗ್ರಹಿಸಿ ಶಿವಮೊಗ್ಗದಲ್ಲಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ. ಜ್ಞಾನೇಂದ್ರ ಅವರ ಹುಟ್ಟೂರು ಗುಡ್ಡೆಕೊಪ್ಪದಿಂದ ಮೇ 6 ರಿಂದ ಪಾದಯಾತ್ರೆ ಆರಂಭವಾಗಿದೆ. ಪಾದಯಾತ್ರೆಯಲ್ಲಿ ಭಾಗಿಯಾಗಲು ಡಿಕೆ ಶಿವಕುಮಾರ್ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ

ಹಿಂದಿ ಚಿತ್ರರಂಗದ ಎಂಟ್ರಿ ಬಗ್ಗೆ ಮಹೇಶ್​ ಬಾಬುಗೆ ಪದೇಪದೇ ಪ್ರಶ್ನೆ; ಅವರು ಕೊಟ್ಟ ಖಡಕ್ ಉತ್ತರ ಹೇಗಿತ್ತು ನೋಡಿ

IPL 2022 Points Table: ಆರೆಂಜ್, ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಯಾರಿದ್ದಾರೆ?: ಪಾಯಿಂಟ್ ಟೇಬಲ್ ಹೇಗಿದೆ?

Follow us on

Related Stories

Most Read Stories

Click on your DTH Provider to Add TV9 Kannada