‘ರಾಜಮಾರ್ತಾಂಡ’ ಚಿತ್ರದಲ್ಲಿ ಚಿರು ಪಾತ್ರಕ್ಕೆ ಧ್ವನಿ ನೀಡಿದ ಧ್ರುವ ಸರ್ಜಾ
ಧ್ರುವ ಸರ್ಜಾಅವರು ಚಿರಂಜೀವಿ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ‘ರಾಜಾಮಾರ್ತಾಂಡ’ ಎಂದು ಹೇಳಿರುವ ಧ್ರುವ ಅವರು ಥಮ್ಸ್ಅಪ್ ತೋರಿದ್ದಾರೆ.
ಚಿರಂಜೀವಿ ಸರ್ಜಾ (Chiranjeevi Sarja) ನಮ್ಮನ್ನು ಅಗಲಿ ಎರಡು ವರ್ಷ ಕಳೆಯುತ್ತಾ ಬಂದಿದೆ. ಅವರ ನಟನೆಯ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ಸಿನಿಮಾ (Rajamarthanda Movie) ಕೆಲಸಗಳು ಕಾರಣಾಂತರಗಳಿಂದ ವಿಳಂಬ ಆದವು. ಈಗ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರಕ್ಕೆ ಚಿರಂಜೀವಿ ಸರ್ಜಾ ಅವರು ಡಬ್ಬಿಂಗ್ ಕೆಲಸ ಮಾಡಿರಲಿಲ್ಲ. ಧ್ರುವ ಸರ್ಜಾ (Dhruva Sarja) ಅವರು ಚಿರಂಜೀವಿ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ‘ರಾಜಾಮಾರ್ತಾಂಡ’ ಎಂದು ಹೇಳಿರುವ ಧ್ರುವ ಅವರು ಥಮ್ಸ್ಅಪ್ ತೋರಿದ್ದಾರೆ. ಚಿರಂಜೀವಿ ಸರ್ಜಾ ಅವರು ಮೃತಪಟ್ಟು ಕೆಲವು ತಿಂಗಳು ಕಳೆದ ನಂತರದಲ್ಲಿ ರಾಯನ್ ಜನಿಸಿದ. ಈ ಸಿನಿಮಾದಲ್ಲಿ ರಾಯನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ರಾಮ್ ನಾರಾಯಣ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸದ್ಯ ಪ್ರಮೋಷನ್ ಕಾರ್ಯಗಳಿಗೆ ಚಿತ್ರತಂಡ ಚಾಲನೆ ನೀಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos