ಒಮ್ಮೆ ಯಡಿಯೂರಪ್ಪನವರನ್ನು 45 ನಿಮಿಷಗಳ ಕಾಲ ತರಾಟೆಗೆ ತೆಗೆದುಕೊಂಡಿದ್ದೆ: ಬಸನಗೌಡ ಪಾಟೀಲ್ ಯತ್ನಾಳ್
ಕಳೆದ ಬೆಳಗಾವಿ ಅಧಿವೇಶನದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾಗಿ ಹೇಳಿದ ಯತ್ನಾಳ್ ಅವರು ಯಾರ ಮುಲಾಜೂ ತಮಗಿಲ್ಲ ಎಂದು ಹೇಳಿದರು. ತಾವು ಹಾಗೆ ಮಾತಾಡಿದ ಬಳಿಕ ಕೆಲವು ಸುಧಾರಣೆ ಮತ್ತು ಬದಲಾವಣೆಳಾಗಿವೆ, ಅದರ ಶ್ರೇಯಸ್ಸು ಖಂಡಿತ ತನಗೆ ಸಲ್ಲಬೇಕು ಎಂದು ಯತ್ನಾಳ್ ಹೇಳಿದರು.
Kalaburagi: ಕಲಬುರಗಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತಾಡಿದ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಅವರು ತಮ್ಮ ಕುರಿತಾದ ಒಂದು ಮೂಲಭೂತ ಪ್ರಶ್ನೆಗೆ ಸಮಾಧಾನ ನೀಡಿದರು. ಯತ್ನಾಳ್ ಅವರು ತಮ್ಮ ಪಕ್ಷದ ನಾಯಕರ ವಿರುದ್ಧ ಮಾಧ್ಯಮಗಳ ಎದುರೇ ಯಾಕೆ ರೇಗಾಡುತ್ತಾರೆ, ಪಕ್ಷದ ವೇದಿಕೆಯಲ್ಲಿ ಅಥವಾ ಹೈಕಮಾಂಡ್ (high command) ಮುಂದೆ ಆ ವಿಷಯಗಳನ್ನು ಯಾಕೆ ಚರ್ಚಿಸುವುದಿಲ್ಲ ಅಂತ ಮಾಧ್ಯಮದವರು ಕೇಳಿದಾಗ ಶಾಸಕರು; ಪಕ್ಷದ ವೇದಿಕೆಯಲ್ಲಿ ತನಗೆ ಮಾತಾಡುವ ಅವಕಾಶ ಸಿಗೋದಿಲ್ಲ, ವೇದಿಕೆ ಮೇಲೆ ಕೂತವರು ಮಾತ್ರ ಮಾತಾಡಿ ಇಳಿದುಹೋಗುತ್ತಾರೆ ಎಂದರು. ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿ ಎಸ್ ಯಡಿಯೂರಪ್ಪನವರನ್ನು (BS Yediyurappa) ಸುಮಾರು 45 ನಿಮಿಷಗಳ ಕಾಲ ತರಾಟೆಗೆ ತೆಗೆದುಕೊಂಡಿದ್ದೇನೆ, ಅವರು ನನ್ನನ್ನು ದಬಾಯಿಸುವ ಪ್ರಯತ್ನ ಮಾಡಿದರು. ಆದರೆ ಅದೆಲ್ಲ ನಡೆಯೋದಿಲ್ಲ, ನೀವು ಮುಖ್ಯಮಂತ್ರಿಯಾಗಿದ್ದೀರಿ ನಾನು ಶಾಸಕ, ಹಾಗಾಗಿ ನಾನು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಅಂತ ಅವರಿಗೆ ಹೇಳಿದೆ ಎಂದು ಯತ್ನಾಳ್ ಹೇಳಿದರು.
ಕಳೆದ ಬೆಳಗಾವಿ ಅಧಿವೇಶನದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾಗಿ ಹೇಳಿದ ಯತ್ನಾಳ್ ಅವರು ಯಾರ ಮುಲಾಜೂ ತಮಗಿಲ್ಲ ಎಂದು ಹೇಳಿದರು. ತಾವು ಹಾಗೆ ಮಾತಾಡಿದ ಬಳಿಕ ಕೆಲವು ಸುಧಾರಣೆ ಮತ್ತು ಬದಲಾವಣೆಳಾಗಿವೆ, ಅದರ ಶ್ರೇಯಸ್ಸು ಖಂಡಿತ ತನಗೆ ಸಲ್ಲಬೇಕು ಎಂದು ಯತ್ನಾಳ್ ಹೇಳಿದರು.
ತಾವು ಪಕ್ಷದವರ ಹುಳುಕುಗಳನ್ನು ಬಹಿರಂಗಪಡಿಸುವುದರಿಂದ ಹೈಕಮಾಂಡ್ ಶೋಕಾಸ್ ನೋಟೀಸ್ ಜಾರಿಯಾಗುತ್ತವೆ. ಪ್ರವಾಹ ಪೀಡಿತರಿಗೆ ಪರಿಹಾರ ಧನ ಸರಿಯಾಗಿ ವಿತರಣೆಯಾಗದ ಹಿನ್ನೆಲೆಯಲ್ಲಿ ಧ್ವನಿಯೆತ್ತಿದ್ದರಿಂದ ತಮಗೆ ಶೋಕಾಸ್ ನೋಟೀಸ್ ನೀಡಲಾಗಿತ್ತು. ಆಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ 11 ಪುಟಗಳ ಉತ್ತರ ಬರೆದಿದ್ದೆ ಎಂದು ಯತ್ನಾಳ್ ಹೇಳಿದರು.
ಇತ್ತೀಚಿಗೆ ತಾವು ಪಕ್ಷದ ಕೆಲ ನಾಯಕರ ವಿರುದ್ಧ ಮಾಡಿರುವ ಆರೋಪಗಳಿಂದಾಗಿ ಮತ್ತೊಂದು ಶೋಕಾಸ್ ನೋಟೀಸ್ ಜಾರಿಯಾಗುತ್ತದೆ ಅಂತ ಮಾಧ್ಯಮಗಳಲ್ಲಿ ವದಂತಿ ಹರಿದಾಡುತ್ತಿದೆ ಎಂದು ಹೇಳಿದ ಯತ್ನಾಳ್, ತನಗೆ ಇನ್ನು ಮುಂದೆ ಬರೋದು ನೋಟೀಸಲ್ಲ, ಪ್ರಮೋಶನ್! ಎಂದರು.
ಇದನ್ನೂ ಓದಿ: ಬಿಕೆ ಹರಿಪ್ರಸಾದ್ ಬೆಂಗಳೂರಿನ ಗೂಂಡಾ ಆಗಿದ್ದ, ಅವನು ದೇಶದ ಆಂತರಿಕ ಭಯೋತ್ಪಾದಕ: ಬಸನಗೌಡ ಪಾಟೀಲ ಯತ್ನಾಳ್