ಅಜಾನ್ ವಿವಾದ: ಶ್ರೀರಾಮ ಸೇನೆಯನ್ನು ತಡೆಯಲು ಕಲಬುರಗಿ ಮಸೀದಿಯೊಂದಕ್ಕೆ ದಲಿತ ಸೇನೆ ಕಾರ್ಯಕರ್ತರ ಕಾವಲು!

ಅಜಾನ್ ವಿವಾದ: ಶ್ರೀರಾಮ ಸೇನೆಯನ್ನು ತಡೆಯಲು ಕಲಬುರಗಿ ಮಸೀದಿಯೊಂದಕ್ಕೆ ದಲಿತ ಸೇನೆ ಕಾರ್ಯಕರ್ತರ ಕಾವಲು!

TV9 Web
| Updated By: Digi Tech Desk

Updated on:May 10, 2022 | 10:33 AM

ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ರಾಜ್ಯದ ಹಲವಾರು ಭಾಗಗಳಲ್ಲಿ ಮಸೀದಿಗಳ ಮೇಲಿಂದ ದ್ವನಿವರ್ಧಕಗಳನ್ನು ತೆಗೆಸಲಾಗಿದೆ. ಆ ಕೆಲಸವಿನ್ನೂ ಪೂರ್ಣಗೊಂಡಿಲ್ಲ. ಮೇ 9 ರವರೆಗೆ ಗಡುವು ನೀಡಿದ್ದರೂ ಲೌಡ್ ಸ್ಪೀಕರ್ ಗಳನ್ನು ತೆಗೆದಿಲ್ಲ ಎಂದು ಶ್ರೀರಾಮ ಸೇನೆ ಪ್ರತಿಭಟನೆ ಆರಂಭಿಸಿದೆ

Kalaburagi: ಅಜಾನ್ ಗೆ ಸಂಬಂಧಿಸಿದ ವಿವಾದ ಬೇರೆ ಬೇರೆ ರೂಪಗಳನ್ನು ತಳೆಯುತ್ತಿದೆ ಮತ್ತು ಇದು ರಾಜ್ಯದ ಜನತೆಗೆ ಸರಿ ಅನಿಸುತ್ತಿಲ್ಲ. ಕಲಬುರಗಿಯಲ್ಲಿ (Kalaburagi) ಸೋಮವಾರ ನಡೆದ ಘಟನೆಯನ್ನು ಈ ವಿಡಿಯೋನಲ್ಲಿ ಗಮನಿಸಿ. ನಗರದ ಹೃದಯಭಾಗವಾಗಿರುವ ಸೂಪರ್ ಮಾರ್ಕೆಟ್ ನಲ್ಲಿರುವ (Super Market) ಮೆಹಬಾಸ್ ಮಸೀದಿ (Mehabas Mosque) ಮುಂದೆ ದಲಿತ ಸೇನೆಯ ಸದಸ್ಯರು ಸಾಲಾಗಿ ನಿಂತು ಮಾನವ ಸರಪಳಿಯನ್ನು ನಿರ್ಮಿಸುತ್ತಿದ್ದಾರೆ. ಯಾಕೆ ಅಂಥ ನೀವು ಈಗಾಗಲೇ ಊಹಿಸಿರಬಹುದು. ಹೌದು ಮಾರಾಯ್ರೇ, ಶ್ರೀರಾಮ ಸೇನೆಯ ಸದಸ್ಯರು ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಅಜಾನ್ ನೀಡುತ್ತಿರುವುದರ ವಿರುದ್ಧ ಅಭಿಯಾನವನ್ನು ಸೋಮವಾರದಿಂದ ರಾಜ್ಯಾದ್ಯಂತ ಆರಂಭಿಸಿದ್ದಾರೆ. ಅದರ ಅಂಗವಾಗಿ ಸೇನೆಯ ಕಾರ್ಯಕರ್ತರು ಕಲಬುರಗಿಯ ಮೆಹಬಾಸ್ ಮಸೀದಿಯ ಮುಂದೆ ಹನುಮಾನ್ ಚಾಲೀಸಾ ಪಠಿಸಲು ನಿರ್ಧರಿಸಿದ್ದರು. ಅವರು ಮಸೀದಿ ಬಳಿ ಬರುವ ಮೊದಲೇ ದಲಿತ ಸೇನೆಯ ಕಾರ್ಯಕರ್ತರು ಬಂದು ಮಾನವ ಸರಪಳಿ ನಿರ್ಮಿಸಿದ್ದಾರೆ.

ಅವರ ಉದ್ದೇಶ ಶ್ರೀರಾಮ ಸೇನೆಯ ಸದಸ್ಯರಿಗೆ ಮಸೀದಿ ಎದುರುಗಡೆ ಹನುಮಾನ್ ಚಾಲೀಸಾ ಪಠಿಸದಂತೆ ತಡೆಯುವುದು ಆಗಿತ್ತು. ಕಲಬುರಗಿಯಲ್ಲಿ ಶ್ರೀರಾಮ ಸೇನೆಯ ಪ್ರಭಾವ ಹೇಗಿದೆ ಅಂತ ನಮ್ಮಲ್ಲಿ ಮಾಹಿತಿ ಇಲ್ಲ ಮಾರಾಯ್ರೇ. ಆದರೆ ಈ ಭಾಗಗದಲ್ಲಿ ದಲಿತ ಸಂಘರ್ಷ ಸಮಿತಿ, ದಲಿತ ಸೇನೆ ಬಹಳ ಪ್ರಬಲವಾಗಿರುವುದರಲ್ಲಿ ಅನುಮಾನವೇ ಇಲ್ಲ.

ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ರಾಜ್ಯದ ಹಲವಾರು ಭಾಗಗಳಲ್ಲಿ ಮಸೀದಿಗಳ ಮೇಲಿಂದ ದ್ವನಿವರ್ಧಕಗಳನ್ನು ತೆಗೆಸಲಾಗಿದೆ. ಆ ಕೆಲಸವಿನ್ನೂ ಪೂರ್ಣಗೊಂಡಿಲ್ಲ. ಮೇ 9 ರವರೆಗೆ ಗಡುವು ನೀಡಿದ್ದರೂ ಲೌಡ್ ಸ್ಪೀಕರ್ ಗಳನ್ನು ತೆಗೆದಿಲ್ಲ ಎಂದು ಶ್ರೀರಾಮ ಸೇನೆ ಪ್ರತಿಭಟನೆ ಆರಂಭಿಸಿದೆ ಮತ್ತು ಮುಂಬರುವ ದಿನಗಳಲ್ಲಿ ಇದನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಅದರ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದ್ದಾರೆ.

ಇದನ್ನೂ ಓದಿ:  ಅಜಾನ್ ಶತಮಾನಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ, ರೇಣುಕಾಚಾರ್ಯ ಒಬ್ಬ ಮತಾಂಧ: ಸಿದ್ದರಾಮಯ್ಯ

Published on: May 09, 2022 08:34 PM