‘ಪೋಷಕರಾಗುವ ಬಗ್ಗೆ ಯೋಚಿಸುತ್ತಿದ್ದೀರಾ?’; ವೈಯಕ್ತಿಕ ಜೀವನದ ಕುರಿತ ಪ್ರಶ್ನೆಗೆ ರಣವೀರ್ ಉತ್ತರ ಏನಿತ್ತು?

Deepika Padukone | Ranveer Singh: ಪ್ರಸ್ತುತ ರಣವೀರ್ ಸಿಂಗ್ ‘ಜಯೇಶ್​ಭಾಯ್ ಜೋರದಾರ್’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಅವರಿಗೆ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಅವರು ನೀಡಿದ ಉತ್ತರ ಈಗ ಸಖತ್ ಸುದ್ದಿಯಾಗುತ್ತಿದೆ.

‘ಪೋಷಕರಾಗುವ ಬಗ್ಗೆ ಯೋಚಿಸುತ್ತಿದ್ದೀರಾ?’; ವೈಯಕ್ತಿಕ ಜೀವನದ ಕುರಿತ ಪ್ರಶ್ನೆಗೆ ರಣವೀರ್ ಉತ್ತರ ಏನಿತ್ತು?
ರಣವೀರ್ ಸಿಂಗ್, ದೀಪಿಕಾ ಪಡುಕೋಣೆ
Follow us
TV9 Web
| Updated By: shivaprasad.hs

Updated on:May 10, 2022 | 7:50 PM

ಬಾಲಿವುಡ್​ನ ತಾರಾ ಜೋಡಿಗಳಲ್ಲಿ ರಣವೀರ್ ಸಿಂಗ್ (Ranveer Singh) ಹಾಗೂ ದೀಪಿಕಾ ಪಡುಕೋಣೆ (Deepika Padukone) ಎಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಸಾರ್ವಜನಿಕವಾಗಿ ಸದಾ ಒಟ್ಟಿಗೆ ಕಾಣಿಸಿಕೊಳ್ಳುವ ದೀಪಿಕಾ- ರಣವೀರ್ ಸಾಮಾಜಿಕ ಜಾಲತಾಣಗಳಲ್ಲೂ ಚಿತ್ರಗಳನ್ನು ಹಂಚಿಕೊಳ್ಳುತ್ತಾ ಫ್ಯಾನ್ಸ್ ಜತೆ ಸಂಪರ್ಕದಲ್ಲಿರುತ್ತಾರೆ. ಇದಲ್ಲದೇ ವೇದಿಕೆಗಳಲ್ಲಿ ದಾಂಪತ್ಯದ ಬಗ್ಗೆ, ಪರಸ್ಪರರ ಬಗ್ಗೆ ಹೊಗಳುತ್ತಾ ತಮ್ಮ ನಡುವಿನ ಪ್ರೀತಿಯ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಯಾವುದೇ ಗೊಂದಲ, ವಿವಾದಗಳಿಗೆ ಸಿಲುಕದೇ ತಮ್ಮ ಕೆಲಸಗಳಲ್ಲಿ ನಿರತರಾಗಿರುವ ಈ ತಾರಾ ಜೋಡಿಯನ್ನು ನೋಡಿ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿರುತ್ತಾರೆ. ಪ್ರಸ್ತುತ ರಣವೀರ್ ‘ಜಯೇಶ್​ಭಾಯ್ ಜೋರದಾರ್’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಅವರಿಗೆ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಅವರು ನೀಡಿದ ಉತ್ತರ ಈಗ ಸಖತ್ ಸುದ್ದಿಯಾಗುತ್ತಿದೆ.

ರಣವೀರ್​ಗೆ ಕೇಳಿದ ಪ್ರಶ್ನೆ ಏನು? ನಟ ನೀಡಿದ ಉತ್ತರವೇನು?

ಇಂಡಿಯಾ ಟುಡೆ ಜತೆ ರಣವೀರ್ ಸಿಂಗ್ ಮಾತುಕತೆ ನಡೆಸಿದ್ದರು. ಈ ವೇಳೆ ರಣವೀರ್​ಗೆ ‘ನೀವು ಸದ್ಯದಲ್ಲೇ ಪೋಷಕರಾಗುವ ಯೋಚನೆ ಹೊಂದಿದ್ದೀರಾ?’ ಎಂದ ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ನಟ ‘ಆ ಬಗ್ಗೆ ಮಾತುಕತೆ ನಡೆದಿದೆ’ ಎಂದಿದ್ದಾರೆ. ‘‘ನನ್ನ ವಿವಾಹವು ಜೀವನದ ಸರಿಯಾದ ಸಮಯಕ್ಕೆ ಆಗಿದೆ ಎಂದು ಭಾವಿಸುತ್ತೇನೆ. ನಾನು ಮತ್ತು ದೀಪಿಕಾ ಜೀವನದ ಬಗ್ಗೆ, ಮುಂದಿನ ಭವಿಷ್ಯದ ಬಗ್ಗೆ ಯಾವಾಗಲೂ ಮಾತನಾಡುತ್ತಿರುತ್ತೇವೆ’’ ಎಂದು ಹೇಳಿದ್ದಾರೆ ರಣವೀರ್.

ಇದನ್ನೂ ಓದಿ
Image
Emma Chamberlain: ಭಾರತದ ರಾಜರಿಗೆ ಸೇರಿದ ನೆಕ್ಲೇಸ್ ಧರಿಸಿ ಹೆಜ್ಜೆ ಹಾಕಿದ್ರಾ ಖ್ಯಾತ ತಾರೆ? ಏನಿದರ ಇತಿಹಾಸ?
Image
Thrivikrama Release Date: ವಿಕ್ರಮ್ ರವಿಚಂದ್ರನ್ ನಟನೆಯ ‘ತ್ರಿವಿಕ್ರಮ’ ರಿಲೀಸ್ ಡೇಟ್ ಅನೌನ್ಸ್
Image
Alia Bhatt: ಜನಸಾಮಾನ್ಯರ ಹಾದಿ ತಪ್ಪಿಸುತ್ತಿದ್ದಾರಾ ಆಲಿಯಾ ಭಟ್? ಸಾಕ್ಷಿ ಸಮೇತ ವಿವರಿಸಿದ ನೆಟ್ಟಿಗರು
Image
RC 15: ರಾಮ್​ಚರಣ್- ಶಂಕರ್ ಕಾಂಬಿನೇಷೇನ್​ನಲ್ಲಿ ಹೊಸ ಚಿತ್ರ; ಸಮಾರಂಭಕ್ಕೆ ಉಪ್ಪಿ ಸ್ಟೈಲ್​ನಲ್ಲಿ ಬಂದ ರಣವೀರ್ ಸಿಂಗ್

ಮುಂದುವರೆದು ಮಾತನಾಡಿದ ನಟ, ‘‘ಮದುವೆಯಾಗಿ ಮೂರೂವರೆ ವರ್ಷಗಳಾಗಿವೆ. ಮುಂದಿನ ಜೀವನದ ಬಗ್ಗೆ ಯೋಚಿಸುತ್ತಿದ್ದೇವೆ’’ ಎಂದಿದ್ದಾರೆ. ದೀಪಿಕಾ ಹಾಗೂ ರಣವೀರ್ 2018ರ ನವೆಂಬರ್ 14ರಂದು ಇಟಲಿಯಲ್ಲಿ ಆಪ್ತರ ಸಮ್ಮುಖದಲ್ಲಿ =ವಿವಾಹವಾಗಿದ್ದರು.

ದೀಪಿಕಾ ಬಗ್ಗೆ ಮೆಚ್ಚುಗೆ ಮಾತನ್ನಾಡಿದ ರಣವೀರ್:

ದೀಪಿಕಾ ಬಗ್ಗೆ ಸಾಧ್ಯವಾದಷ್ಟು ಎಲ್ಲಾ ವೇದಿಕೆಗಳಲ್ಲೂ ರಣವೀರ್ ಹೊಗಳಿಕೆಯ ಮಾತುಗಳನ್ನಾಡುತ್ತಾರೆ. ಖಾಸಗಿ ಮಾಧ್ಯಮದೊಂದಿಗಿನ ಇತ್ತೀಚಿನ ಸಂದರ್ಶನದಲ್ಲೂ ಅವರು ದೀಪಿಕಾ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘‘ದೀಪಿಕಾ ಎಲ್ಲಾ ರೀತಿಯಿಂದಲೂ ಪ್ರತಿಭಾವಂತೆ. ಆಕೆಯ ವೃತ್ತಿಪರ ಜೀವನದ ಬಗ್ಗೆ ನನಗೆ ಅಪಾರ ಖುಷಿ ಹಾಗೂ ಗೌರವವಿದೆ. ಹಾಗೆಯೇ ವೈಯಕ್ತಿಕವಾಗಿಯೂ ನಾವು ಬಹಳ ಆಪ್ತರಾಗಿದ್ದೇವೆ. ಪ್ರತಿ ಬಾರಿಯೂ ಆಕೆ ನನ್ನನ್ನು ಬೆರಗುಗೊಳಿಸುತ್ತಾಳೆ’’ ಎಂದಿದ್ದಾರೆ ರಣವೀರ್.

ರಣವೀರ್ ಸಿಂಗ್ ನಟನೆಯ ‘ಜಯೇಶ್​ಭಾಯ್ ಜೋರ್ದಾರ್’ ಮೇ 13ರಂದು ರಿಲೀಸ್ ಆಗುತ್ತಿದೆ. ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆಗಳು ಮೂಡಿವೆ.

ರಣವೀರ್ ಸಿಂಗ್ ಮುಂದಿನ ಚಿತ್ರಗಳ ಕೆಲಸಗಳೂ ನಡೆಯುತ್ತಿವೆ. ‘ಸರ್ಕಸ್’ ಚಿತ್ರದಲ್ಲಿ ನಟ ಬಣ್ಣಹಚ್ಚುತ್ತಿದ್ದಾರೆ. ಇದರೊಂದಿಗೆ ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಚಿತ್ರದಲ್ಲೂ ಅವರು ಬಣ್ಣಹಚ್ಚುತ್ತಿದ್ದಾರೆ. ಕರಣ್ ಜೋಹರ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಅಲಿಯಾ ಭಟ್ ನಾಯಕಿಯಾಗಿದ್ದಾರೆ. ಧರ್ಮೇಂದ್ರ, ಜಉಯಾ ಬಚ್ಚನ್, ಶಬಾನಾ ಅಜ್ಮಿ ಮೊದಲಾದ ಖ್ಯಾತ ತಾರೆಯರು ಈ ಚಿತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:46 pm, Tue, 10 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ