ಜಾನ್ವಿ ಕಪೂರ್ ಜತೆ ಕಾಣಿಸಿಕೊಂಡ ಮಿಸ್ಟರಿ ಮ್ಯಾನ್​; ಫ್ಯಾನ್ಸ್​ ಮನಸ್ಸಲ್ಲಿರುವ ಪ್ರಶ್ನೆ ಏನು?

ಜಾನ್ವಿ ಕಪೂರ್ ಜತೆ ಕಾಣಿಸಿಕೊಂಡ ಮಿಸ್ಟರಿ ಮ್ಯಾನ್​; ಫ್ಯಾನ್ಸ್​ ಮನಸ್ಸಲ್ಲಿರುವ ಪ್ರಶ್ನೆ ಏನು?
ಮಿಸ್ಟರಿ ಮ್ಯಾನ್ ಜತೆ ಜಾನ್ವಿ

ಒರ್ಹಾನ್ ಅವರು ಜಾನ್ವಿ ಕಪೂರ್ ಅವರ ಕ್ಲೋಸ್ ಫ್ರೆಂಡ್. ಅನೇಕ ಕಡೆಗಳಲ್ಲಿ ಜಾನ್ವಿ ಹಾಗೂ ಒರ್ಹಾನ್ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಇಬ್ಬರೂ ಬೆಸ್ಟ್​ ಫ್ರೆಂಡ್ಸ್​ ಎಂದು ಬಾಲಿವುಡ್ ಮಂದಿ ಹೇಳುತ್ತಾರೆ.

TV9kannada Web Team

| Edited By: Rajesh Duggumane

May 10, 2022 | 11:25 AM

ಜಾನ್ವಿ ಕಪೂರ್ ಅವರು (Janhvi Kapoor) ಇತ್ತೀಚೆಗೆ ಬಾಲಿವುಡ್​ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರಿಗೆ ಒಳ್ಳೆಯ ಆಫರ್​ಗಳು ಸಿಗುತ್ತಿವೆ. ಹೀಗಾಗಿ, ಜಾನ್ವಿ ಹಾಯಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ. ವಿದೇಶಗಳಿಗೆ ಟ್ರಿಪ್ ತೆರಳೋದು, ಫ್ರೆಂಡ್ಸ್ ಜತೆ ಸಮಯ ಕಳೆಯುವುದಕ್ಕೆ ಅವರು ಎಂದಿಗೂ ರಾಜಿ ಮಾಡಿಕೊಂಡವರಲ್ಲ. ವರ್ಷಕ್ಕೆ ಹಲವು ಬಾರಿ ಅವರು ವೆಕೇಶನ್ ತೆರಳುತ್ತಾರೆ. ವೀಕೆಂಡ್​ನಲ್ಲಿ ಮೋಜು-ಮಸ್ತಿ ಮಾಡುತ್ತಾರೆ. ಇತ್ತೀಚೆಗೆ ಜಾನ್ವಿ ಪಾರ್ಟಿ ಒಂದರಲ್ಲಿ ಪಾಲ್ಗೊಂಡಿದ್ದರು. ಈ ಪಾರ್ಟಿಯಲ್ಲಿ ಅವರ ಕಸಿನ್ ಶಯಾನಾ ಕಪೂರ್ (Shayana Kapoor) ಹಾಗೂ ಗೆಳೆಯರು ಭಾಗಿಯಾಗಿದ್ದರು. ಈ ಫೋಟೋ ಈಗ ಸಖತ್ ವೈರಲ್ ಆಗುತ್ತಿದೆ. ಈ ಫೋಟೋಗೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. ಜಾನ್ವಿ ಜತೆ ಕಾಣಿಸಿಕೊಂಡ ವ್ಯಕ್ತಿ ಯಾರು ಎನ್ನುವ ಪ್ರಶ್ನೆಯೂ ಮೂಡಿದೆ.

ಗೆಳೆಯರ ಜತೆ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಜಾನ್ವಿ ಸೆರೆಹಿಡಿದಿದ್ದಾರೆ. ಈ ಫೋಟೋಗಳನ್ನು ಜಾನ್ವಿ ಕಪೂರ್ ಅವರು ಶೇರ್ ಮಾಡಿಕೊಂಡಿದ್ದಾರೆ. ಅವರು ಹಳದಿ ಉಡುಗೆ ತೊಟ್ಟಿದ್ದಾರೆ. ಜಾನ್ವಿ ಸುತ್ತಲೂ ಫ್ರೆಂಡ್ಸ್​ ಇದ್ದಾರೆ. ಈ ಫೋಟೋದಲ್ಲಿ ಒರ್ಹಾನ್ ಅವತ್ರಮಣಿ ಅವರು ಹೈಲೈಟ್ ಆಗಿದ್ದಾರೆ.

ಒರ್ಹಾನ್ ಅವರು ಜಾನ್ವಿ ಕಪೂರ್ ಅವರ ಕ್ಲೋಸ್ ಫ್ರೆಂಡ್. ಅನೇಕ ಕಡೆಗಳಲ್ಲಿ ಜಾನ್ವಿ ಹಾಗೂ ಒರ್ಹಾನ್ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಇಬ್ಬರೂ ಬೆಸ್ಟ್​ ಫ್ರೆಂಡ್ಸ್​ ಎಂದು ಬಾಲಿವುಡ್ ಮಂದಿ ಹೇಳುತ್ತಾರೆ. ಒರ್ಹಾನ್ ಅವರು ಕಳೆದ ವಾರ ಅಜಯ್​ ದೇವಗನ್ ಮಗಳು ನೈಸಾ ದೇವಗನ್​ ಜತೆ ಸುತ್ತಾಟ ನಡೆಸಿದ್ದರು. ಕಳೆದ ತಿಂಗಳು ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ಊಟಿಗೆ ತೆರಳಿದ್ದರು. ಈ ವೇಳೆ ಒರ್ಹಾನ್​ ಕೂಡ ಇದ್ದರು.

ಜಾನ್ವಿ ಕಪೂರ್ ಜತೆ ಒರ್ಹಾನ್​ ಅವರನ್ನು ನೋಡಿ ಕೆಲವರು ಹೊಟ್ಟೆಕಿಚ್ಚು ಮಾಡಿಕೊಂಡಿದ್ದಾರೆ.  ‘ಒರ್ಹಾನ್​ ಹಾಗೂ ಜಾನ್ವಿ ಕಪೂರ್ ಕಪಲ್ಸ್​?’ ಎಂದು ಅಭಿಮಾನಿಯೋರ್ವ ಪ್ರಶ್ನೆ ಮಾಡಿದ್ದಾನೆ. ಇನ್ನೂ ಕೆಲವರು ಇವರು ರಿಲೇಶನ್​ಶಿಪ್​ನಲ್ಲಿ ಇದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.  ಜಾನ್ವಿ ಈ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಜಾನ್ವಿ ಬಳಿ ಹಲವು ಸಿನಿಮಾಗಳಿವೆ. ‘ಗುಡ್​ ಲಕ್​ ಜೆರ್ರಿ’, ‘ಮಿಲಿ’, ‘ಬವಾಲ್​’ ಮತ್ತು ‘ಮಿಸ್ಟರ್​ ಆ್ಯಂಡ್ ಮಿಸ್ಟರೆಸ್​ ಮಾಹಿ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಮಿಸ್ಟರ್​ ಆ್ಯಂಡ್ ಮಿಸ್ಟರೆಸ್​ ಮಾಹಿ’ ಸಿನಿಮಾ ಈ ವರ್ಷ ಅಕ್ಟೋಬರ್ 7ರಂದು ತೆರೆಗೆ ಬರುತ್ತಿದೆ. ‘ಬವಾಲ್’ 2023ರ ಏಪ್ರಿಲ್ 7ರಂದು ಬಿಡುಗಡೆ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada