AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಫೋಟೋದಲ್ಲಿರುವ ಖ್ಯಾತ ನಟ-ನಟಿ ಯಾರು ಎಂದು ಗುರುತಿಸುತ್ತೀರಾ?

ಸೆಲೆಬ್ರಿಟಿಗಳ ಬಾಲ್ಯದ ಬಗ್ಗೆ ಹಲವರಿಗೆ ಕುತೂಹಲ ಇರುತ್ತದೆ. ಅವರು ಹಂಚಿಕೊಳ್ಳುವ ಬಾಲ್ಯದ ಫೋಟೋಗಳು ಸಖತ್ ವೈರಲ್ ಆಗುತ್ತವೆ. ಈಗ ಬಾಲಿವುಡ್​ನ ಅಣ್ಣ-ತಂಗಿಯ ಫೋಟೋ ವೈರಲ್ ಆಗಿದೆ.

ಈ ಫೋಟೋದಲ್ಲಿರುವ ಖ್ಯಾತ ನಟ-ನಟಿ ಯಾರು ಎಂದು ಗುರುತಿಸುತ್ತೀರಾ?
ಖ್ಯಾತ ನಟ-ನಟಿ ಯಾರು ಎಂದು ಗುರುತಿಸುತ್ತೀರಾ?
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Apr 19, 2022 | 6:34 PM

ಸೆಲೆಬ್ರಿಟಿಗಳು ಕೆಲವೊಮ್ಮೆ ಬಾಲ್ಯದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದನ್ನು ನೋಡೋಕೆ ಅಭಿಮಾನಿಗಳಿಗೂ ಕುತೂಹಲ ಇರುತ್ತದೆ. ಈಗ ಬಾಲಿವುಡ್​ನ ನಟ-ನಟಿಯ ಬಾಲ್ಯದ​ ಫೋಟೋ (Childhood Photo) ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರ ಅಭಿಮಾನಿಗಳ ವಲಯದಲ್ಲಿ ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ಕೆಲ ಫ್ಯಾನ್ಸ್ ‘ಇದು ಯಾರು ಎಂದು ಗುರುತಿಸಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇವರು ಬೇರಾರೂ ಅಲ್ಲ ಅರ್ಜುನ್ ಕಪೂರ್ (Arjun Kapoor) ಹಾಗೂ ಜಾನ್ವಿ ಕಪೂರ್ (Janhvi Kapoor).

ಜಾನ್ವಿ ಕಪೂರ್ ಮತ್ತು ಅರ್ಜುನ್ ಕಪೂರ್ ಇಬ್ಬರೂ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರ ಮಕ್ಕಳು. ಇವರ ನಡುವೆ ಒಳ್ಳೆಯ ಬಾಂಧವ್ಯ ಇದೆ. ಅರ್ಜುನ್ ಕಪೂರ್ ಅವರು ಬೋನಿ ಕಪೂರ್ ಹಾಗೂ ಮೋನಾ ಕಪೂರ್ ಮಗ. ಬೋನಿ ಕಪೂರ್ ಹಾಗೂ ಅವರ ಎರಡನೇ ಪತ್ನಿ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್. ಅರ್ಜುನ್ ಹಾಗೂ ಜಾನ್ವಿ ಇಬ್ಬರೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಾಕಷ್ಟು ಬೇಡಿಕೆ ಸೃಷ್ಟಿ ಮಾಡಿಕೊಂಡಿದ್ದಾರೆ. ಅರ್ಜುನ್ ಹಾಗೂ ಜಾನ್ವಿ ಇಬ್ಬರೂ ನಿಂತಿರುವ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದಾರೆ ಬೋನಿ ಕಪೂರ್.

‘ಖುಷಿ’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಅಮೆರಿಕಕ್ಕೆ ತೆರಳಿದ್ದರು ಜಾನ್ವಿ ಹಾಗೂ ಅರ್ಜುನ್. ಅರ್ಜುನ್ ಅವರು ಜಾನ್ವಿ ಅವರ ಜಡೆಯನ್ನು ಹಿಡಿದುಕೊಂಡು ನಿಂತಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ‘ಫೋಟೋ ತುಂಬಾನೇ ಕ್ಯೂಟ್​ ಆಗಿದೆ’ ಎಂದು ಬರೆದುಕೊಂಡಿದ್ದಾರೆ. ‘ಜಾನ್ವಿ ಜತೆ ಅರ್ಜುನ್ ಕಪೂರ್ ಬಾಲ್ಯವನ್ನು ಇಷ್ಟು ಸುಂದರವಾಗಿ ಕಳೆದಿದ್ದರು ಎಂಬುದು ಗೊತ್ತಿರಲಿಲ್ಲ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಈ ಫೋಟೋಗೆ ಜಾನ್ವಿ ಹಾಗೂ ಅರ್ಜುನ್ ಪ್ರತಿಕ್ರಿಯಿಸಿಲ್ಲ.

ಜಾನ್ವಿ ಕಪೂರ್ ಅವರು ವೆಕೇಶನ್​ ಮೂಡ್​ನಲ್ಲಿದ್ದಾರೆ. ಅವರು ಊಟಿಗೆ ತೆರಳಿದ್ದಾರೆ. ಅಲ್ಲಿ ಟೀ ಪ್ಲ್ಯಾಂಟೇಷನ್​ನಲ್ಲಿ ಅವರು ಸಮಯ ಕಳೆದಿದ್ದಾರೆ. ಸಾಕಷ್ಟು ಅಡ್ವೆಂಚರ್ ಗೇಮ್​ಗಳನ್ನು ಆಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜಾನ್ವಿ ಕಪೂರ್ ಅವರು ಸ್ಟಾರ್ ಕಿಡ್. ಈ ಕಾರಣಕ್ಕೆ ಅವರಿಗೆ ಸುಲಭವಾಗಿ ಬಾಲಿವುಡ್​ಗೆ ಎಂಟ್ರಿ ಸಿಕ್ಕಿದೆ. ಮೊದಲ ಸಿನಿಮಾ ‘ಧಡಕ್’ ಮೂಲಕ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಆದರೆ, ದೊಡ್ಡ ಗೆಲುವನ್ನು ಅವರು ಕಂಡಿಲ್ಲ.

View this post on Instagram

A post shared by Boney.kapoor (@boney.kapoor)

ಅರ್ಜುನ್ ಕಪೂರ್ ಅವರು ಮಲೈಕಾ ಅರೋರಾ ಜತೆ ಸುತ್ತಾಟ ನಡೆಸುತ್ತಿದ್ದಾರೆ. ಮಲೈಕಾ ಅವರಿಗೆ ಇತ್ತೀಚೆಗೆ ಕಾರು ಅಪಘಾತ ಸಂಭವಿಸಿತ್ತು. ಈ ವೇಳೆ ಅವರಿಗೆ ಗಾಯಗಳು ಆಗಿದ್ದವು. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿತ್ತು. ಚಿಕಿತ್ಸೆ ಪಡೆದು ಅವರು ಮನೆಗೆ ಮರಳಿದ್ದರು. ಅವರ ನಿವಾಸದಲ್ಲಿ ಅರ್ಜುನ್ ಕಪೂರ್ ಕಾಣಿಸಿಕೊಂಡಿದ್ದರು.  

ಇದನ್ನೂ ಓದಿ: KGF 2 Collection: ಯಶ್​ ಅಬ್ಬರಕ್ಕೆ ಹಿಂದಿ ಮಾರ್ಕೆಟ್​ ಕಂಗಾಲು; 4 ದಿನಕ್ಕೆ ಬಾಲಿವುಡ್​ನಲ್ಲಿ 193 ಕೋಟಿ ರೂ. ಗಳಿಸಿದ ‘ಕೆಜಿಎಫ್​ 2’

KGF 3: ‘ಕೆಜಿಎಫ್ ಚಾಪ್ಟರ್ 2’ ಕೊನೆಯಲ್ಲಿ ಬಿಗ್ ಸರ್ಪ್ರೈಸ್ ನೋಡಿ ಥ್ರಿಲ್ ಆದ ಅಭಿಮಾನಿಗಳು; ಟ್ರೆಂಡ್ ಆಯ್ತು ‘ಕೆಜಿಎಫ್ 3’

Published On - 6:27 pm, Tue, 19 April 22

ಪಾಕ್ ಎಸೆದಿದ್ದ ಶೆಲ್​ಗಳನ್ನು ವೀಕ್ಷಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್
ಪಾಕ್ ಎಸೆದಿದ್ದ ಶೆಲ್​ಗಳನ್ನು ವೀಕ್ಷಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್
ವಿಜಯ್ ಶಾ ವಿರುದ್ಧ ಎಫ್​ಐಅರ್ ದಾಖಲಿಸಲು ಸೂಚಿಸಲಾಗಿದೆ: ಪರಮೇಶ್ವರ್
ವಿಜಯ್ ಶಾ ವಿರುದ್ಧ ಎಫ್​ಐಅರ್ ದಾಖಲಿಸಲು ಸೂಚಿಸಲಾಗಿದೆ: ಪರಮೇಶ್ವರ್
ಒಂದು ಟಗರನ್ನಿಟ್ಟುಕೊಂಡಿರುವ ರೌಡಿಯೊಬ್ಬ ಹೊಟ್ಟೆಪಾಡಿಗೆ ಕುರಿ ಕಾಯ್ತೀನಿ ಅಂದ
ಒಂದು ಟಗರನ್ನಿಟ್ಟುಕೊಂಡಿರುವ ರೌಡಿಯೊಬ್ಬ ಹೊಟ್ಟೆಪಾಡಿಗೆ ಕುರಿ ಕಾಯ್ತೀನಿ ಅಂದ
ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ
ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ
ಬೆಂಗಳೂರಿನಲ್ಲಿ ಬೆತ್ತಲೆ ಕಳ್ಳನ ಕೈಚಳಕ: ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬೆತ್ತಲೆ ಕಳ್ಳನ ಕೈಚಳಕ: ವಿಡಿಯೋ ನೋಡಿ
ಬಾಳೆಗಿಡ ನೆಲಕಚ್ಚಿದ್ದು ಕಂಡು ಆಘಾತಕ್ಕೊಳಗಾಗಿ ಪ್ರಜ್ಞೆತಪ್ಪಿ ಬಿದ್ದ ರೈತ
ಬಾಳೆಗಿಡ ನೆಲಕಚ್ಚಿದ್ದು ಕಂಡು ಆಘಾತಕ್ಕೊಳಗಾಗಿ ಪ್ರಜ್ಞೆತಪ್ಪಿ ಬಿದ್ದ ರೈತ
ರಾಮನಗರ ಜಿಲ್ಲೆಯ ಹಲವೆಡೆ ಭಾರಿ ಮಳೆ: ಮಾಗಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ರಾಮನಗರ ಜಿಲ್ಲೆಯ ಹಲವೆಡೆ ಭಾರಿ ಮಳೆ: ಮಾಗಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ