KGF 2 Collection: ಯಶ್​ ಅಬ್ಬರಕ್ಕೆ ಹಿಂದಿ ಮಾರ್ಕೆಟ್​ ಕಂಗಾಲು; 4 ದಿನಕ್ಕೆ ಬಾಲಿವುಡ್​ನಲ್ಲಿ 193 ಕೋಟಿ ರೂ. ಗಳಿಸಿದ ‘ಕೆಜಿಎಫ್​ 2’

KGF Chapter 2 Hindi Box Office Collection: ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾವನ್ನು ಪ್ರೇಕ್ಷಕರು ಭಾನುವಾರ (ಏ.17) ಮುಗಿಬಿದ್ದು ನೋಡಿದ್ದಾರೆ. 4ನೇ ದಿನ ಹಿಂದಿ ವರ್ಷನ್​ನಿಂದ 50 ಕೋಟಿ ರೂ. ಸಂಗ್ರಹ ಆಗಿದೆ.

KGF 2 Collection: ಯಶ್​ ಅಬ್ಬರಕ್ಕೆ ಹಿಂದಿ ಮಾರ್ಕೆಟ್​ ಕಂಗಾಲು; 4 ದಿನಕ್ಕೆ ಬಾಲಿವುಡ್​ನಲ್ಲಿ 193 ಕೋಟಿ ರೂ. ಗಳಿಸಿದ ‘ಕೆಜಿಎಫ್​ 2’
ಯಶ್
Follow us
TV9 Web
| Updated By: ಮದನ್​ ಕುಮಾರ್​

Updated on:Apr 18, 2022 | 1:00 PM

‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಸೂಪರ್​ ಹಿಟ್​ ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ ಸುನಾಮಿಯ ರೀತಿಯಲ್ಲಿ ಬಾಕ್ಸ್​ ಆಫೀಸ್​ ಮೇಲೆ ದಾಳಿ ಮಾಡಲಿದೆ ಎಂದು ಹಿಂದಿ ಚಿತ್ರರಂಗದ ಅನೇಕರು ಊಹಿಸಿರಲಿಕ್ಕಿಲ್ಲ. ಅಂಥ ಆರ್ಭಟವನ್ನೇ ಮಾಡುತ್ತಿದೆ ‘ಕೆಜಿಎಫ್​ 2’ (KGF 2 )ಸಿನಿಮಾ. ಗುರುವಾರ (ಏ.14) ಬಿಡುಗಡೆ ಆದ ಈ ಸಿನಿಮಾ ಹಿಂದಿ ಮಾರುಕಟ್ಟೆಯಲ್ಲಿ ಸತತ ನಾಲ್ಕು ದಿನ ಧೂಳೆಬ್ಬಿಸಿದೆ. ಅದರ ಪರಿಣಾಮವಾಗಿ ಬರೋಬ್ಬರಿ 193.99 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಮೂಲ ಹಿಂದಿ ಸಿನಿಮಾಗಳೇ ಇಂಥ ರೆಕಾರ್ಡ್​ ಮಾಡಲು ಒಡ್ಡಾಡುತ್ತಿರುವಾಗ ಒಂದು ಡಬ್ಬಿಂಗ್​ ಸಿನಿಮಾ ಈ ರೀತಿ ಭೋರ್ಗರೆಯುತ್ತಿರುವುದು ಬಾಲಿವುಡ್​ ಮಂದಿಯನ್ನು ಕಂಗಾಲಾಗಿಸಿದೆ. ಹಿಂದಿ ಚಿತ್ರರಂಗದ ಸ್ಟಾರ್​ ನಟರು ‘ಕೆಜಿಎಫ್​ 2’ ಚಿತ್ರದ ಈ ಗಲ್ಲಾಪೆಟ್ಟಿಗೆ (KGF 2 Hindi Box Office Collection) ಸಾಧನೆಯನ್ನು ಕಣ್ಣರಳಿಸಿ ನೋಡುತ್ತಿದ್ದಾರೆ. ಯಶ್​ ಅಭಿಮಾನಿಗಳು ಹಿರಿಹಿರಿ ಹಿಗ್ಗುತ್ತಿದ್ದಾರೆ.

‘ಕೆಜಿಎಫ್​ 2’ ಸಿನಿಮಾದ ಬಾಲಿವುಡ್​ ಬಿಸ್ನೆಸ್​ ಬಗ್ಗೆ ಟ್ರೇಡ್​ ಅನಲಿಸ್ಟ್​ ತರಣ್​ ಆದರ್ಶ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಹಿಂದಿ ಬಾಕ್ಸ್​ ಆಫೀಸ್​ನಲ್ಲಿ ಮೊದಲ ದಿನ 53.95 ಕೋಟಿ ರೂಪಾಯಿ, ಎರಡನೇ ದಿನ 46.79 ಕೋಟಿ ರೂಪಾಯಿ, ಮೂರನೇ ದಿನ 42.90 ಕೋಟಿ ರೂಪಾಯಿ ಹಾಗೂ ನಾಲ್ಕನೇ ದಿನ 50.35 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ ಎಂದು ಅವರು ಲೆಕ್ಕ ನೀಡಿದ್ದಾರೆ. ‘ಕೆಜಿಎಫ್​ 2 ಸಿನಿಮಾ ಮತ್ತೆ ಮತ್ತೆ ದಾಖಲೆಗಳನ್ನು ಮಾಡುತ್ತಿದೆ. ರೆಕಾರ್ಡ್​ ಪುಸ್ತಕವನ್ನು ಹೊಸದಾಗಿ ಬರೆಯುತ್ತಿದೆ’ ಎಂದು ಅವರು ಟ್ವೀಟ್​ ಮಾಡಿದ್ದಾರೆ.

ನಾಲ್ಕು ದಿನ ಕಳೆದ ಬಳಿಕವೂ ‘ಕೆಜಿಎಫ್​: ಚಾಪ್ಟರ್​ 2’ ಹವಾ ಕಿಂಚಿತ್ತೂ ಕಡಿಮೆ ಆಗಿಲ್ಲ. ಸೋಮವಾರ ಕೂಡ ಬಹುತೇಕ ಎಲ್ಲ ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಚಿತ್ರದ ಮೇಲಿನ ಕ್ರೇಜ್​ ಹೆಚ್ಚುತ್ತಿದೆ. ಫ್ಯಾಮಿಲಿ ಆಡಿಯನ್ಸ್​ ಕೂಡ ಮುಗಿಬಿದ್ದು ಈ ಚಿತ್ರ ನೋಡುತ್ತಿದ್ದಾರೆ. ಸಿನಿಮಾದಲ್ಲಿನ ಅನೇಕ ಅಂಶಗಳು ಜನರಿಗೆ ಇಷ್ಟ ಆಗಿವೆ. ಅದ್ದೂರಿ ಮೇಕಿಂಗ್​, ಮೈನವಿರೇಳಿಸುವ ಆ್ಯಕ್ಷನ್, ತಾಯಿ ಸೆಂಟಿಮೆಂಟ್​ ದೃಶ್ಯ, ಮಾಸ್ ಡೈಲಾಗ್​, ಯಶ್​ ಅವರ ನಟನೆ, ಹಿನ್ನೆಲೆ ಸಂಗೀತ ಸೇರಿದಂತೆ ಹಲವು ಅಂಶಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಹಿಂದಿ ಮಾರುಕಟ್ಟೆಯಲ್ಲಿ ‘ಕೆಜಿಎಫ್​ 2’ ಚಿತ್ರದ ಕಲೆಕ್ಷನ್​ ಸೋಮವಾರ (ಏ.18) ಮುಂಜಾನೆಗೆ 200 ಕೋಟಿ ರೂಪಾಯಿ ಗಡಿ ಮುಟ್ಟಿದೆ. ಸೋಮವಾರದ ಪೂರ್ತಿ ಕಲೆಕ್ಷನ್​ ಸೇರಿಸಿದರೆ 238ರಿಂದ 240 ಕೋಟಿ ರೂಪಾಯಿ ಆಗುವ ಸಾಧ್ಯತೆ ಇದೆ. ಆ ಬಗ್ಗೆ ಮಂಗಳವಾರ (ಏ.19) ಪಕ್ಕಾ ಲೆಕ್ಕ ಹೊರಬರಲಿದೆ. ವಿಶ್ವಾದ್ಯಂತ ಎಲ್ಲ ಭಾಷೆಯ ಕಲೆಕ್ಷನ್​ 4 ದಿನಕ್ಕೆ 551 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ:

KGF Chapter 2 Collection: ವಿಶ್ವಾದ್ಯಂತ 4 ದಿನಕ್ಕೆ 551 ಕೋಟಿ ರೂ. ಬಾಚಿದ ‘ಕೆಜಿಎಫ್​ 2’; ಹೆಚ್ಚುತ್ತಲೇ ಇದೆ ಯಶ್​ ಟೆರಿಟರಿ

‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

Published On - 12:36 pm, Mon, 18 April 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ