- Kannada News Sports Cricket news World Social Media Day: ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಕೆಟಿಗರು ಇವರೆ ನೋಡಿ
World Social Media Day: ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಕೆಟಿಗರು ಇವರೆ ನೋಡಿ
World Social Media Day: ಪ್ರಸ್ತುತ, ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ 131 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರನ್ನು ಟ್ವಿಟರ್‌ನಲ್ಲಿ 42.6 ಮಿಲಿಯನ್ ನೆಟಿಜನ್‌ಗಳು ಅನುಸರಿಸುತ್ತಿದ್ದಾರೆ.
Updated on: Jun 30, 2021 | 9:22 PM

ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ ಫಾಲೋಯಿಂಗ್ ಬಗ್ಗೆ ಮಾತನಾಡಿದರೆ, ಮೊದಲು ಬರುವ ಹೆಸರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ವಿರಾಟ್ ಮತ್ತು ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ತಮ್ಮ ಜೀವನದ ಹಲವು ಪ್ರಮುಖ ಕ್ಷಣಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಪ್ರಸ್ತುತ, ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ 131 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರನ್ನು ಟ್ವಿಟರ್‌ನಲ್ಲಿ 42.6 ಮಿಲಿಯನ್ ನೆಟಿಜನ್‌ಗಳು ಅನುಸರಿಸುತ್ತಿದ್ದಾರೆ. ಕೊಹ್ಲಿಗೆ ಫೇಸ್‌ಬುಕ್‌ನಲ್ಲಿ 46 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ವಿರಾಟ್ ನಂತರ ಉಪನಾಯಕ ರೋಹಿತ್ ಶರ್ಮಾ ಇದ್ದಾರೆ. ವಿರಾಟ್ ಅವರಂತೆ ರೋಹಿತ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ನಿರಂತರ ಚರ್ಚೆಯಲ್ಲಿರುತ್ತಾರೆ. ರೋಹಿತ್ ಇನ್ಸ್ಟಾಗ್ರಾಮ್ನಲ್ಲಿ ವಿಶೇಷವಾಗಿ ಸಕ್ರಿಯರಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ರೋಹಿತ್ 19.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ರೋಹಿತ್‌ಗೆ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ 19 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ವಿರಾಟ್ ಮತ್ತು ರೋಹಿತ್ ನಂತರ ಯುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇದ್ದಾರೆ. ಹಾರ್ದಿಕ್ ಅವರ ಪತ್ನಿ ನತಾಶಾ ಮತ್ತು ಮಗ ಅಗಸ್ತ್ಯ ಅವರ ಅನೇಕ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಅಭಿಮಾನಿಗಳಿಂದ ಸಾಕಷ್ಟು ಲೈಕ್ಗಳನ್ನು ಪಡೆಯುತ್ತಾರೆ. ಪಾಂಡಾ ಇನ್‌ಸ್ಟಾಗ್ರಾಮ್‌ನಲ್ಲಿ 18.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಪಾಂಡ್ಯರನ್ನು ಟ್ವಿಟ್ಟರ್ನಲ್ಲಿ 6.8 ಮಿಲಿಯನ್ ಜನರು ಅನುಸರಿಸುತ್ತಾರೆ.

ಹಾರ್ದಿಕ್ರಂತೆಯೆ, ಯುವ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. ಚಹಲ್ ಅವರ ಪತ್ನಿ ಧನಶ್ರೀ ವರ್ಮಾ ಅವರ ಫೋಟೋಗಳು ಮತ್ತು ನೃತ್ಯದ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಜನಪ್ರಿಯವಾಗಿವೆ. ಚಾಹಲ್ ಇನ್‌ಸ್ಟಾಗ್ರಾಮ್‌ನಲ್ಲಿ 6.6 ಮಿಲಿಯನ್ ಮತ್ತು ಟ್ವಿಟರ್‌ನಲ್ಲಿ 2.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಕ್ರಿಕೆಟ್ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಚಿರಪರಿಚಿತರು. ಸಚಿನ್ ಟ್ವಿಟರ್‌ನಲ್ಲಿ 35.6 ಮಿಲಿಯನ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ 29.6 ಮಿಲಿಯನ್ ನೆಟಿಜನ್‌ಗಳನ್ನು ಹೊಂದಿದ್ದಾರೆ. ಸಚಿನ್ ಅವರು ಫೇಸ್‌ಬುಕ್‌ನಲ್ಲಿ 27 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಸಚಿನ್ ಜೊತೆಗೆ ಅವರ ಆನ್-ಫೀಲ್ಡ್ ಪಾಲುದಾರ ವೀರೇಂದ್ರ ಸೆಹ್ವಾಗ್ ಅವರ ಟ್ವೀಟ್‌ಗಳು ಮತ್ತು ಫೇಸ್‌ಬುಕ್ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಅವರ ಅಭಿಮಾನಿಗಳ ಸಂಖ್ಯೆ ಕೂಡ ದೊಡ್ಡದಾಗಿದೆ. ಸೆಹ್ವಾಗ್ ಟ್ವಿಟ್ಟರ್ನಲ್ಲಿ 21.9 ಮಿಲಿಯನ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ 6.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಜಾಫರ್ ತನ್ನ ವಿಶಿಷ್ಠ ಒಗಟು ಟ್ವೀಟ್‌ಗಳಿಂದ ಅಭಿಮಾನಿಗಳನ್ನು ಚೆನ್ನಾಗಿ ರಂಜಿಸುತ್ತಾರೆ. ಜಾಫರ್ ಟ್ವಿಟ್ಟರ್ನಲ್ಲಿ 416.7 ಕೆ ಫಾಲೋವರ್ಸ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ 64.9 ಕೆ ಫಾಲೋವರ್ಸ್ ಹೊಂದಿದ್ದಾರೆ.









