ಭಾರತೀಯ ಆಟಗಾರರು ಕ್ರಿಕೆಟ್​ನ ಶ್ರೇಷ್ಠ ರಾಯಭಾರಿಗಳು! ಟೀಂ ಇಂಡಿಯಾವನ್ನು ಶ್ಲಾಘಿಸಿದ ಕೇನ್ ವಿಲಿಯಮ್ಸನ್

ಭಾರತೀಯ ಆಟಗಾರರನ್ನು ಆಟದ ಶ್ರೇಷ್ಠ ರಾಯಭಾರಿಗಳೆಂದು ಹೇಳಿರುವ ವಿಲಿಯಮ್ಸನ್, ಅಷ್ಟೇ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ತಂಡ ಹೊಂದಿದೆ ಎಂದಿದ್ದಾರೆ.

ಭಾರತೀಯ ಆಟಗಾರರು ಕ್ರಿಕೆಟ್​ನ ಶ್ರೇಷ್ಠ ರಾಯಭಾರಿಗಳು! ಟೀಂ ಇಂಡಿಯಾವನ್ನು ಶ್ಲಾಘಿಸಿದ ಕೇನ್ ವಿಲಿಯಮ್ಸನ್
ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್
Follow us
ಪೃಥ್ವಿಶಂಕರ
|

Updated on: Jun 30, 2021 | 6:53 PM

ಭಾರತೀಯ ಕ್ರಿಕೆಟ್ ತಂಡವು ಇತ್ತೀಚಿನ ದಿನಗಳಲ್ಲಿ ಅನೇಕ ಯಶಸ್ಸನ್ನು ಗಳಿಸಿದೆ. ಈ ಸಮಯದಲ್ಲಿ ಇದು ಪ್ರಬಲ ತಂಡಗಳಲ್ಲಿ ಒಂದಾಗಿದೆ. ಯಾವುದೇ ಮೈದಾನದಲ್ಲಿ ಯಾವುದೇ ವಿಕೆಟ್‌ನಲ್ಲಿ ತನ್ನ ಶಕ್ತಿಯನ್ನು ಎಲ್ಲಿಯಾದರೂ ತೋರಿಸಬಲ್ಲ ಮತ್ತು ಎದುರಾಳಿ ತಂಡವನ್ನು ಸೋಲಿಸಬಲ್ಲ ತಂಡ. ಭಾರತವು ತನ್ನ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಐಸಿಸಿ ಡಬ್ಲ್ಯೂಟಿಸಿ ಫೈನಲ್) ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದೆ. ಈ ಪಂದ್ಯದ ನಂತರ ಭಾರತ ತಂಡವನ್ನೂ ಟೀಕಿಸಲಾಯಿತು. ಈ ಅದ್ಭುತ ವಿಜಯದ ನಂತರ, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಭಾರತ ತಂಡವನ್ನು ಶ್ಲಾಘಿಸಿದ್ದಾರೆ ಮತ್ತು ಭಾರತೀಯ ಆಟಗಾರರು ಆಟದ ಶ್ರೇಷ್ಠ ರಾಯಭಾರಿಗಳು ಎಂದು ಹೇಳಿದ್ದಾರೆ.

ಮಳೆ ಪೀಡಿತ ಡಬ್ಲ್ಯುಟಿಸಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ಟೀಂ ಇಂಡಿಯಾವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಸೌತಾಂಪ್ಟನ್‌ನಲ್ಲಿ ಆಡಿದ ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ವಿಲಿಯಮ್ಸನ್ ಅವರ ಅಜೇಯ ಅರ್ಧಶತಕದ ನೆರವಿನಿಂದಾಗಿ ತಂಡವು 139 ರನ್‌ಗಳ ಗುರಿಯನ್ನು ಸುಲಭವಾಗಿ ಸಾಧಿಸಿತು.

ಭಾರತೀಯ ಆಟಗಾರರು ಶ್ರೇಷ್ಠ ಮೆಸೆಂಜರ್ ಭಾರತೀಯ ಆಟಗಾರರನ್ನು ಆಟದ ಶ್ರೇಷ್ಠ ರಾಯಭಾರಿಗಳೆಂದು ಹೇಳಿರುವ ವಿಲಿಯಮ್ಸನ್, ಅಷ್ಟೇ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ತಂಡ ಹೊಂದಿದೆ. ಒಂದು ದೇಶವು ಕ್ರೀಡೆಗಾಗಿ ತರುವ ಭಾವನೆ, ನಾವೆಲ್ಲರೂ ಭಾರತ ಹೊಂದಿರುವುದನ್ನು ಪ್ರಶಂಸಿಸಬಹುದು ಎಂದರು.

ಕೊಹ್ಲಿ, ಪೂಜಾರ ವಿಕೆಟ್ ಹೆಚ್ಚು ಅನುಕೂಲವಾಯಿತು ಕೊಹ್ಲಿ ಮತ್ತು ಚೇತೇಶ್ವರ ಪೂಜಾರಾರನ್ನು ಬೇಗ ಔಟ್ ಮಾಡಿದ್ದು ನಮಗೆ ಉತ್ತಮ ಅವಕಾಶ ನೀಡಿತು ಎಂದು ವಿಲಿಯಮ್ಸನ್ ಒಪ್ಪಿಕೊಂಡರು. ಕೊನೆಯ ದಿನದ ಆರಂಭದಲ್ಲಿ ವಿಕೆಟ್ ತೆಗೆದುಕೊಳ್ಳುವುದು ಅದ್ಭುತವಾಗಿತ್ತು. ಅದು ಆ ದಿನ ಹೆಚ್ಚಿನ ಫಲಿತಾಂಶವನ್ನು ನೀಡಿತು. ಟೀಂ ಇಂಡಿಯಾ ಬೌಲರ್​ಗಳು ಸಹ ಉತ್ತಮವಾಗಿ ಕಾರ್ಯನಿರ್ವಹಿಸಿದರು ಎಂದು ಕೇನ್ ಹೇಳಿದ್ದಾರೆ.

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ