AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭೋಲಾ’ ರಿಲೀಸ್​ ಡೇಟ್​ ಅನೌನ್ಸ್​; ಇದು ಸೌತ್​ ಚಿತ್ರದ ರಿಮೇಕ್​ ಅಂತ ಹೆಮ್ಮೆಯಿಂದ ಹೇಳಿದ ಅಜಯ್​ ದೇವಗನ್​

Ajay Devgn | Bholaa Movie: ‘ಭೋಲಾ’ ಚಿತ್ರದಲ್ಲಿ ಅಜಯ್​ ದೇವಗನ್​ ಜತೆ ಟಬು ಕೂಡ ನಟಿಸುತ್ತಿದ್ದಾರೆ. ಧರ್ಮೇಂದ್ರ ಶರ್ಮಾ ಅವರು ನಿರ್ದೇಶನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

‘ಭೋಲಾ’ ರಿಲೀಸ್​ ಡೇಟ್​ ಅನೌನ್ಸ್​; ಇದು ಸೌತ್​ ಚಿತ್ರದ ರಿಮೇಕ್​ ಅಂತ ಹೆಮ್ಮೆಯಿಂದ ಹೇಳಿದ ಅಜಯ್​ ದೇವಗನ್​
ಅಜಯ್ ದೇವಗನ್​
TV9 Web
| Edited By: |

Updated on: Apr 20, 2022 | 11:42 AM

Share

ಬಾಲಿವುಡ್​ನಲ್ಲಿ ಅಜಯ್​ ದೇವಗನ್​ (Ajay Devgn) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ದಕ್ಷಿಣ ಭಾರತದ ಜೊತೆಯೂ ಅವರಿಗೆ ಉತ್ತಮ ನಂಟು ಇದೆ. ಅಜಯ್​ ದೇವಗನ್​ ನಟಿಸಿರುವ ‘ರನ್​ ವೇ 34’ ಸಿನಿಮಾ ಏಪ್ರಿಲ್​ 29ರಂದು ಬಿಡುಗಡೆ ಆಗಲಿದೆ. ಹಲವು ಪ್ರಾಜೆಕ್ಟ್​ಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ತೆರೆಕಂಡ ತೆಲುಗಿನ ‘ಆರ್​ಆರ್​ಆರ್​’ ಸಿನಿಮಾದಲ್ಲಿ ಅವರು ಒಂದು ಮುಖ್ಯ ಪಾತ್ರ ಮಾಡಿದ್ದರು. ರಾಮ್​ ಚರಣ್​ಗೆ ತಂದೆಯಾಗಿ ಕಾಣಿಸಿಕೊಂಡ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಕಥೆಗೆ ತಿರುವು ನೀಡುವಂತಹ ಪಾತ್ರವನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಈಗ ಅವರ ಮುಂಬರುವ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ಕೌತುಕ ಮೂಡಿದೆ. ಅಜಯ್​ ದೇವಗನ್​ ನಟನೆಯ ‘ಭೋಲಾ’ (Bholaa Movie)  ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಇದೆ. ಹಾಗಂತ ಈ ಸಿನಿಮಾ ಸದ್ಯದಲ್ಲೇನೂ ರಿಲೀಸ್​ ಆಗುತ್ತಿಲ್ಲ. ಈ ಸಿನಿಮಾ ತೆರೆಕಾಣಲು ಇನ್ನೂ ಒಂದು ವರ್ಷ ಕಾಯಬೇಕು. ಆದರೆ ಈಗಲೇ ಬಿಡುಗಡೆ ದಿನಾಂಕವನ್ನು ಅಜಯ್​ ದೇವಗನ್​ ಘೋಷಿಸಿದ್ದಾರೆ. ಅವರಿಗೆ ಎಲ್ಲರೂ ಶುಭ ಹಾರೈಸಿದ್ದಾರೆ. 2023ರ ಮಾ.30ರಂದು ‘ಬೋಲಾ’ ಸಿನಿಮಾ ರಿಲೀಸ್​ ಆಗಲಿದೆ. ಅಂದಹಾಗೆ, ಒಂದೊಂದು ರಿಮೇಕ್​ (Remake) ಸಿನಿಮಾ.

ಸಾಮಾನ್ಯವಾಗಿ ರಿಮೇಕ್​ ಸಿನಿಮಾ ಮಾಡಿದಾಗ ಮೂಲ ಚಿತ್ರಕ್ಕೆ ಎಲ್ಲರೂ ಹೆಚ್ಚು ಹೊಗಳಿಕೆ ನೀಡುತ್ತಾರೆ. ಹಾಗಾಗಿ ರಿಮೇಕ್​ ಎಂಬ ವಿಚಾರವನ್ನು ಹೆಚ್ಚು ಹೈಲೈಟ್​ ಮಾಡಲೂ ಚಿತ್ರತಂಡದವರು ಇಷ್ಟಪಡುವುದಿಲ್ಲ. ಆದರೆ ಅಜಯ್​ ದೇವಗನ್​ ಅವರು ಈ ವಿಚಾರದಲ್ಲಿ ಭಿನ್ನ. ‘ಭೋಲಾ’ ಸಿನಿಮಾದ ರಿಲೀಸ್​ ಡೇಟ್​ ಘೋಷಣೆ ಮಾಡಲು ಅವರು ಒಂದು ಪೋಸ್ಟ್​ ಹಂಚಿಕೊಂಡಿದ್ದಾರೆ. ಅದರಲ್ಲಿ ‘ಇದು ತಮಿಳಿನ ಸೂಪರ್​ ಹಿಟ್​ ‘ಖೈದಿ’ ಸಿನಿಮಾದ ಅಧಿಕೃತ ರಿಮೇಕ್​’ ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.

ದಕ್ಷಿಣ ಭಾರತದ ಸಿನಿಮಾಗಳು ಈಗ ದೇಶಾದ್ಯಂತ ಸದ್ದು ಮಾಡುತ್ತಿವೆ. ಸೌತ್​ ಸಿನಿಮಾ ಇಂಡಸ್ಟ್ರಿಯ ಪ್ರತಿಭೆಗಳಿಗೆ ಬಾಲಿವುಡ್​ ಸಲಾಂ ಎನ್ನುತ್ತಿದೆ. ಕನ್ನಡ, ತೆಲುಗು, ತಮಿಳು ಭಾಷೆಗಳಿಂದ ಹಿಂದಿಗೆ ಡಬ್​ ಆದ ಸಿನಿಮಾಗಳು ಸೂಪರ್ ಹಿಟ್​ ಆಗುತ್ತಿವೆ. ಅದೇ ರೀತಿ, ಕೆಲವು ಸಿನಿಮಾಗಳು ಹಿಂದಿಯಲ್ಲಿ ರಿಮೇಕ್​ ಆಗಿ ಉತ್ತಮ ಕಮಾಯಿ ಮಾಡುತ್ತಿವೆ. ಈ ಎಲ್ಲ ಕಾರಣಗಳಿಂದಾಗಿ ದಕ್ಷಿಣ ಭಾರತದ ಚಿತ್ರರಂಗ ಸಖತ್​ ಶೈನ್​ ಆಗುತ್ತಿದೆ. ತಮಿಳುನಲ್ಲಿ ಕಾರ್ತಿ ನಟಿಸಿದ್ದ ‘ಖೈದಿ’ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿತ್ತು. ಈಗ ಆ ಸಿನಿಮಾವನ್ನು ಅಜಯ್​ ದೇವಗನ್​ ಹಿಂದಿಯಲ್ಲಿ ರಿಮೇಕ್​ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಅಜಯ್​ ದೇವಗನ್​ ಜೊತೆ ನಟಿ ಟಬು ಕೂಡ ಅಭಿನಯಿಸುತ್ತಿದ್ದಾರೆ. ಧರ್ಮೇಂದ್ರ ಶರ್ಮಾ ಅವರು ನಿರ್ದೇಶನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಅಜಯ್​ ದೇವಗನ್​ ಫಿಲ್ಮ್ಸ್​, ಟಿ-ಸಿರೀಸ್​ ಫಿಲ್ಮ್ಸ್​, ರಿಲಯನ್ಸ್​ ಎಂಟರ್​ಟೇನ್​ಮೆಂಟ್ಸ್​, ಡ್ರೀಮ್​ ವಾರಿಯರ್ಸ್​ ಪಿಕ್ಚರ್ಸ್​ ಜೊತೆಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿವೆ. ಹಲವು ಕಾರಣಗಳಿಗಾಗಿ ಈ ‘ಭೋಲಾ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಅಜಯ್​ ದೇವಗನ್​ ಅವರಿಗೆ ರಿಮೇಕ್​ ಸಿನಿಮಾ ಏನೂ ಹೊಸದಲ್ಲ. ಈಗಾಗಲೇ ಅವರು ‘ದೃಶ್ಯಂ’, ಸಿಂಘಂ’, ‘ಮರ್ಯಾದಾ ರಾಮಣ್ಣ’ ಮುಂತಾದ ಸಿನಿಮಾಗಳನ್ನು ಹಿಂದಿಯಲ್ಲಿ ರಿಮೇಕ್​ ಮಾಡಿ ಗೆಲುವಿನ ರುಚಿ ಕಂಡಿದ್ದಾರೆ.

ಇದನ್ನೂ ಓದಿ:

‘ಗಂಗೂಬಾಯಿ..’ ಚಿತ್ರಕ್ಕೆ 20 ಕೋಟಿ ರೂ. ಸಂಬಳ ಪಡೆದ ಆಲಿಯಾ ಭಟ್; ಅಜಯ್​ ದೇವಗನ್​ಗೆ ಸಿಕ್ಕಿದ್ದೆಷ್ಟು?

‘ಶಾರುಖ್​ ಮಗನ ಸಮಸ್ಯೆಗೆ ನಾನೇನು ಮಾಡಲಿ?’: ಮುಖಕ್ಕೆ ಹೊಡೆದಂತೆ ಮಾತಾಡಿದ್ರಾ ಅಜಯ್​ ದೇವಗನ್​?

Follow Us
Web contact
Web contact

TV9 Kannada

Read More
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು
ಡಿಕೆಶಿ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ನೊಣವಿನಕೆರೆ ಶ್ರೀಗಳು ಹೇಳಿದ್ದಿಷ್ಟು