ಜನಪ್ರಿಯ ಹಿಂದಿ ಹಾಡಿಗೆ ಜಾನ್ವಿ ಕಪೂರ್ ಡ್ಯಾನ್ಸ್; ಶ್ರೀದೇವಿ, ಮಾಧುರಿ ದೀಕ್ಷಿತ್​ಗೆ ಹೋಲಿಸಿದ ಫ್ಯಾನ್ಸ್​

ಏಪ್ರಿಲ್​ 29 ಅಂತಾರಾಷ್ಟ್ರೀಯ ನೃತ್ಯ ದಿನಾಚರಣೆ. ಅಂದು ಜಾನ್ವಿ ಅವರು ಈ ಡ್ಯಾನ್ಸ್ ವಿಡಿಯೋ ಹಂಚಿಕೊಳ್ಳಬೇಕಿತ್ತು. ಆದರೆ, ಎರಡು ದಿನ ವಿಳಂಬವಾಗಿ ಅಂದರೆ, ಮೇ 1ರಂದು ಅವರು ವಿಡಿಯೋ ಹಂಚಿಕೊಂಡಿದ್ದಾರೆ.

ಜನಪ್ರಿಯ ಹಿಂದಿ ಹಾಡಿಗೆ ಜಾನ್ವಿ ಕಪೂರ್ ಡ್ಯಾನ್ಸ್; ಶ್ರೀದೇವಿ, ಮಾಧುರಿ ದೀಕ್ಷಿತ್​ಗೆ ಹೋಲಿಸಿದ ಫ್ಯಾನ್ಸ್​
ಜಾನ್ವಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:May 01, 2022 | 6:16 PM

ಜಾನ್ವಿ ಕಪೂರ್ (Janhvi Kapoor) ಖ್ಯಾತ ನಟಿ ಶ್ರೀದೇವಿ ಅವರ ಮಗಳು. ಈ ಕಾರಣಕ್ಕೆ ಅವರ ಬಗ್ಗೆ ಅನೇಕರಿಗೆ ಹೆಚ್ಚು ಪ್ರೀತಿ ಇದೆ. ಶ್ರೀದೇವಿ ನಿಧನದ ನಂತರ ಅನೇಕರು ಅವರನ್ನು ಜಾನ್ವಿ ಅವರಲ್ಲಿ ಕಾಣುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಜಾನ್ವಿ ಕಪೂರ್​ಗೆ ಪ್ಲಸ್​ ಹಾಗೂ ಮೈನಸ್ ಎರಡೂ ಹೌದು. ಶ್ರೀದೇವಿ (Sridevi) ರೀತಿಯಲ್ಲೇ ಜಾನ್ವಿ ನಟಿಸಬೇಕು ಎಂದು ಅನೇಕರು ಬಯಸುತ್ತಾರೆ. ಆದರೆ, ಜಾನ್ವಿ ಅವರು ನಟನೆಯಲ್ಲಿ ಅಷ್ಟೊಂದು ಪಳಗಿಲ್ಲ. ಅವರು ಡ್ಯಾನ್ಸ್​ಅನ್ನು ಉತ್ತಮವಾಗಿ ಮಾಡುತ್ತಾರೆ. ಈಗ ಅವರು ಒಂದು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಮಂದಿ ಜಾನ್ವಿ ಅವರನ್ನು ಶ್ರೀದೇವಿ ಹಾಗೂ ಮಾಧುರಿ ದೀಕ್ಷಿತ್​ಗೆ (Madhuri Dixit) ಹೋಲಿಕೆ ಮಾಡುತ್ತಿದ್ದಾರೆ.

ಏಪ್ರಿಲ್​ 29 ಅಂತಾರಾಷ್ಟ್ರೀಯ ನೃತ್ಯ ದಿನಾಚರಣೆ. ಅಂದು ಜಾನ್ವಿ ಅವರು ಈ ಡ್ಯಾನ್ಸ್ ವಿಡಿಯೋ ಹಂಚಿಕೊಳ್ಳಬೇಕಿತ್ತು. ಆದರೆ, ಎರಡು ದಿನ ವಿಳಂಬವಾಗಿ ಅಂದರೆ, ಮೇ 1ರಂದು ಅವರು ವಿಡಿಯೋ ಹಂಚಿಕೊಂಡಿದ್ದಾರೆ. ರೇಖಾ ಅವರು ಹೆಜ್ಜೆ ಹಾಕಿದ್ದ ‘ಆಂಕೋ ಕಿ ಮಸ್ತಿ..’ ಹಾಡಿಗೆ ಜಾನ್ವಿ ಡ್ಯಾನ್ಸ್ ಮಾಡಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ದು, ಅದನ್ನು ಈಗ ಹಂಚಿಕೊಂಡಿದ್ದಾರೆ. ಈ ಹಾಡಿಗೆ ಅವರು ಒಂದೊಳ್ಳೆಯ ಕ್ಯಾಪ್ಶನ್ ನೀಡಿದ್ದಾರೆ.

‘ಎರಡು ವರ್ಷಗಳ ಹಿಂದೆ ನಾನು ಮೊದಲ ಬಾರಿ ಪ್ರಯತ್ನಿಸಿದ್ದ ಬೈರಕೀ ಭಾವ. ಎಲ್ಲರಿಗೂ ಅಂತಾರಾಷ್ಟ್ರೀಯ ನೃತ್ಯ ದಿನಾಚರಣೆಯ ಶುಭಾಶಯ. ಎರಡು ದಿನ ತಡವಾಗಿ ಹೇಳುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಅವರು ‘ಆಂಕೋ ಕಿ ಮಸ್ತಿ..’ ಹಾಡಿಗೆ ಕುಳಿತೇ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಮುಗಿಬಿದ್ದು ಲೈಕ್ಸ್ ಒತ್ತಿದ್ದಾರೆ. ಕೆಲವರು ಜಾನ್ವಿ ಅವರನ್ನು ಬೇರೆಯವರಿಗೆ ಹೋಲಿಕೆ ಮಾಡಿದ್ದಾರೆ.

‘ಶ್ರೀದೇವಿ ಅವರ ನೆನಪಾಯಿತು’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಮಾಧುರಿ ದೀಕ್ಷಿತ್ ಅವರ ರೀತಿಯಲ್ಲೇ ಡ್ಯಾನ್ಸ್ ಮಾಡುತ್ತಿದ್ದೀರಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಸಂಜಯ್​ ಲೀಲಾ ಬನ್ಸಾಲಿ ಸಿನಿಮಾಗಳಲ್ಲಿ ಡ್ಯಾನ್ಸ್​ಗೆ ಹೆಚ್ಚು ಆದ್ಯತೆ ಇರುತ್ತದೆ. ಅವರ ಸಿನಿಮಾದಲ್ಲಿ ಬರುವ ನೃತ್ಯ ಶೈಲಿ ಬೇರೆಯದೇ ರೀತಿಯಲ್ಲಿ ಇರುತ್ತದೆ. ಹೀಗಾಗಿ, ‘ಜಾನ್ವಿ ಅವರು ಸಂಜಯ್​ ಲೀಲಾ ಬನ್ಸಾಲಿ ಜತೆ ಕೆಲಸ ಮಾಡಬೇಕು’ ಎನ್ನುವ ಬೇಡಿಕೆ ಇಟ್ಟಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಜಾನ್ವಿ ಬಳಿ ಹಲವು ಸಿನಿಮಾಗಳಿವೆ. ‘ಗುಡ್​ ಲಕ್​ ಜೆರ್ರಿ’, ‘ಮಿಲಿ’, ‘ಬವಾಲ್​’ ಮತ್ತು ‘ಮಿಸ್ಟರ್​ ಆ್ಯಂಡ್ ಮಿಸ್ಟರೆಸ್​ ಮಾಹಿ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಮಿಸ್ಟರ್​ ಆ್ಯಂಡ್ ಮಿಸ್ಟರೆಸ್​ ಮಾಹಿ’ ಸಿನಿಮಾ ಈ ವರ್ಷ ಅಕ್ಟೋಬರ್ 7ರಂದು ತೆರೆಗೆ ಬರುತ್ತಿದೆ. ‘ಬವಾಲ್’ 2023ರ ಏಪ್ರಿಲ್ 7ರಂದು ಬಿಡುಗಡೆ ಆಗುತ್ತಿದೆ.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

ಇದನ್ನೂ ಓದಿ: ಬ್ಯಾಕ್​ಲೆಸ್​ ಡ್ರೆಸ್​ ಧರಿಸಿ ಟ್ರೋಲ್​ ಆದ ಜಾನ್ವಿ ಕಪೂರ್​; ನೆಟ್ಟಿಗರು ಹೋಲಿಕೆ ಮಾಡಿದ್ದು ಯಾರ ಜೊತೆ?

Janhvi Kapoor: ಹೊಸ ಫೋಟೋಶೂಟ್, ಭಿನ್ನ ಗೆಟಪ್; ಮತ್ತೆ ಪಡ್ಡೆಗಳ ನಿದ್ದೆ ಕದ್ದ ಜಾನ್ವಿ ಕಪೂರ್

Published On - 4:15 pm, Sun, 1 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ