AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Siddhanth Kapoor: ಬೆಂಗಳೂರು ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶ್ರದ್ಧಾ ಕಪೂರ್​ ಅಣ್ಣ ಸಿದ್ಧಾಂತ್​ ಕಪೂರ್​ ಹಿನ್ನೆಲೆ ಏನು?

Shraddha Kapoor brother Siddhanth Kapoor: ಸಿದ್ಧಾಂತ್​ ಕಪೂರ್ ಅವರಿಗೆ ಸಂಕಷ್ಟ ಎದುರಾಗಿದೆ. ಹಲವು ಸಿನಿಮಾಗಳಲ್ಲಿ ನಟಿಸಿದರೂ ಹೆಚ್ಚು ಸುದ್ದಿಯಾಗದ ಅವರು ಈಗ ಡ್ರಗ್ಸ್​ ಕೇಸ್​ ವಿಚಾರದಲ್ಲಿ ಕುಖ್ಯಾತಿ ಪಡೆಯುವಂತಾಗಿದೆ.

Siddhanth Kapoor: ಬೆಂಗಳೂರು ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶ್ರದ್ಧಾ ಕಪೂರ್​ ಅಣ್ಣ ಸಿದ್ಧಾಂತ್​ ಕಪೂರ್​ ಹಿನ್ನೆಲೆ ಏನು?
ಸಿದ್ಧಾಂತ್ ಕಪೂರ್, ಶ್ರದ್ಧಾ ಕಪೂರ್
TV9 Web
| Edited By: |

Updated on: Jun 13, 2022 | 11:29 AM

Share

ಚಿತ್ರರಂಗಕ್ಕೆ ಡ್ರಗ್ಸ್​ ಎಂಬುದು ಕಪ್ಪುಚುಕ್ಕೆ ಆಗಿದೆ. ಪ್ರತಿ ಬಾರಿ ರೇವ್​ ಪಾರ್ಟಿ ಮೇಲೆ ದಾಳಿ ನಡೆದಾಗ ಯಾರಾದರೊಬ್ಬರು ಸೆಲೆಬ್ರಿಟಿಗಳು ಸಿಕ್ಕಿ ಬೀಳುತ್ತಾರೆ. ಈಗ ಬಾಲಿವುಡ್​ನ ಖ್ಯಾತ ನಟಿ ಶ್ರದ್ಧಾ ಕಪೂರ್ (Shraddha Kapoor)​ ಅವರ ಸಹೋದರ ಸಿದ್ಧಾಂತ್​ ಕಪೂರ್​ ಅವರು ಈ ಕೇಸ್​ನಲ್ಲಿ ಸಿಲುಕಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಡ್ರಗ್ಸ್​ ಪಾರ್ಟಿ (Bengaluru Drugs Bust) ಬಯಲಿಗೆ ಬಂದಿದ್ದು, ಅನೇಕರನ್ನು ವಶಕ್ಕೆ ಪಡೆಯಲಾಗಿದೆ. ಸ್ಟಾರ್​ ಹೋಟೆಲ್​ವೊಂದರಲ್ಲಿ ಪಾರ್ಟಿ ನಡೆಯುತ್ತಿದ್ದಾಗ ಪೊಲೀಸರು ದಾಳಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಸಿದ್ಧಾಂತ್​ ಕಪೂರ್ ಇರುವುದು ತಿಳಿದುಬಂದಿದೆ. ಅವರನ್ನು ಕೂಡ ವಶಕ್ಕೆ ಪಡೆಯಲಾಗಿದ್ದು, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಈ ವಿಚಾರ ಕೇಳಿ ಶ್ರದ್ಧಾ ಕಪೂರ್​ ಫ್ಯಾನ್ಸ್​ ಅಚ್ಚರಿಪಟ್ಟಿದ್ದಾರೆ. ಸಿದ್ಧಾಂತ್​ ಕಪೂರ್​ ಡ್ರಗ್ಸ್​ ಕೇಸ್ (Siddhanth Kapoor Drugs Case)​ ಯಾವ ಮಟ್ಟಕ್ಕೆ ಹೋಗಲಿದೆ ಎಂಬ ಕೌತುಕ ಮೂಡಿದೆ.

ಬೆಂಗಳೂರು ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದಿರುವ ಸಿದ್ಧಾಂತ್​ ಕಪೂರ್​ ಅವರದ್ದು ಫಿಲ್ಮಿ ಹಿನ್ನೆಲೆಯ ಕುಟುಂಬ. ಅವರ ತಂದೆ ಶಕ್ತಿ ಕಪೂರ್​ ಅವರು ಬಾಲಿವುಡ್​ನಲ್ಲಿ ಜನಪ್ರಿಯ ನಟ. ಚಿತ್ರರಂಗದಲ್ಲಿ ಶಕ್ತಿ ಕಪೂರ್​ ಅವರ ಅನುಭವ ಅಪಾರ. ಸಿದ್ಧಾಂತ್​ ಅವರ ಸಹೋದರಿ ಶ್ರದ್ಧಾ ಕಪೂರ್​ ಅವರು ಈಗಾಗಲೇ ಹಿಂದಿ ಚಿತ್ರರಂಗದಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಣ್ಣದ ಲೋಕದಲ್ಲಿ ಸಿದ್ಧಾಂತ್​ ಕಪೂರ್​ ಕೂಡ ಸಕ್ರಿಯರಾಗಿದ್ದಾರೆ. ಅದರ ನಡುವೆ ಅವರು ಡ್ರಗ್ಸ್​ ಸಹವಾಸ ಮಾಡಿರುವುದರಿಂದ ಸಂಕಷ್ಟ ಎದುರಾಗಿದೆ.

ನಟನೆ ಮತ್ತು ನಿರ್ದೇಶನದಲ್ಲಿ ಸಿದ್ಧಾಂತ್​ ಕಪೂರ್​ಗೆ ಆಸಕ್ತಿ:

ಇದನ್ನೂ ಓದಿ
Image
Drug Case: ಡ್ರಗ್ಸ್ ಪಾರ್ಟಿ ಆಯೋಜನೆ ಆರೋಪ: ಬಾಲಿವುಡ್‌ ನಟ ಸಿದ್ಧಾಂತ್​ ಕಪೂರ್ ಪೊಲೀಸರ ವಶಕ್ಕೆ
Image
Aryan Khan: ಡ್ರಗ್ಸ್​ ಪ್ರಕರಣದಿಂದ ಮುಕ್ತಿ ಸಿಕ್ಕ ಬೆನ್ನಲ್ಲೇ ಅಮೇರಿಕಾಗೆ ತೆರಳಲಿದ್ದಾರಾ ಆರ್ಯನ್ ಖಾನ್?
Image
ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗನ ಜತೆ ಹೆಮ್ಮೆಯಿಂದ ಪೋಸ್​ ಕೊಟ್ಟ ತಂದೆ; ನಗೆಪಾಟಲಿನ ವಿಡಿಯೋ ವೈರಲ್​
Image
ಬಾಲಿವುಡ್​ Drugs ದಂಧೆ ಆರೋಪ ಪ್ರಕರಣ: ಮೂವರು ನಟಿಯರಿಗೆ NCB ಸಮನ್ಸ್

ಶಕ್ತಿ ಕಪೂರ್​ ಅವರ ಮಗ ಎಂಬ ಕಾರಣಕ್ಕೆ ಸಿದ್ಧಾಂತ್ ಕಪೂರ್​ ಅವರಿಗೆ ಬಣ್ಣದ ಲೋಕದಲ್ಲಿ ಸುಲಭವಾಗಿ ಅವಕಾಶ ಸಿಕ್ಕಿತು. ಆದರೆ ನಟನೆಗಿಂತಲೂ ಮೊದಲು ಅವರು ಆಯ್ಕೆ ಮಾಡಿಕೊಂಡಿದ್ದು ನಿರ್ದೇಶನದ ವಿಭಾಗವನ್ನು. 2006ರಲ್ಲಿ ಬಂದ ‘ಭಾಗಂ ಭಾಗ್​’ ಚಿತ್ರಕ್ಕೆ ಅವರು ಸಹಾಯಕ ನಿರ್ದೇಶಕನಾಗಿದ್ದರು. ‘ಚುಪ್​ ಚುಪ್​ಕೇ’, ‘ಭೂಲ್​ ಭುಲಯ್ಯ’, ‘ಡೋಲ್​’ ಮುಂತಾದ ಸಿನಿಮಾಗಳಿಗೂ ಅವರು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು.

ನಟನಾಗಿಯೂ ಸಿದ್ಧಾಂತ್​ ಕಪೂರ್​ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ದೊಡ್ಡ ಮಟ್ಟದಲ್ಲಿ ಅವರಿಗೆ ಜನಪ್ರಿಯತೆ ಸಿಕ್ಕಿಲ್ಲ. ‘ಹೆಲೋ ಚಾರ್ಲಿ’, ‘ಅಗ್ಲಿ’, ‘ಜಝ್ಬಾ’, ‘ಹಸೀನಾ ಪಾರ್ಕರ್​’ ಸೇರಿ ಹಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ವೆಬ್​ ಸಿರೀಸ್​ ಹಾಗೂ ಮ್ಯೂಸಿಕ್​ ವಿಡಿಯೋದಲ್ಲೂ ಕಾಣಿಸಿಕೊಂಡ ಅನುಭವ ಅವರಿಗೆ ಇದೆ. ಆಗೆಲ್ಲ ಹೆಚ್ಚು ಸುದ್ದಿಯಾಗದ ಅವರು ಈಗ ಡ್ರಗ್ಸ್​ ಕೇಸ್​ ವಿಚಾರದಲ್ಲಿ ಕುಖ್ಯಾತಿ ಪಡೆಯುವಂತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ