ಶಾರುಖ್ ಖಾನ್​ಗೆ ಇದೆ ವಿಚಿತ್ರ ಹವ್ಯಾಸ; ಇದಕ್ಕಾಗಿ ಅವರು ಖರ್ಚು ಮಾಡಿದ್ದು 40 ಲಕ್ಷ ರೂಪಾಯಿ

ಶಾರುಖ್ ಖಾನ್ ಮನೆ ತುಂಬಾನೇ ದೊಡ್ಡದಿದೆ. ಅವರ ಮನೆಯಲ್ಲಿ ಹಲವು ಬೆಡ್​​ರೂಂಗಳು ಇವೆ. ಎಲ್ಲಾ ಬೆಡ್​ರೂಂನಲ್ಲೂ ಶಾರುಖ್​ ಖಾನ್ ಒಂದು ಟಿವಿ ಇಟ್ಟಿದ್ದಾರೆ.

ಶಾರುಖ್ ಖಾನ್​ಗೆ ಇದೆ ವಿಚಿತ್ರ ಹವ್ಯಾಸ; ಇದಕ್ಕಾಗಿ ಅವರು ಖರ್ಚು ಮಾಡಿದ್ದು 40 ಲಕ್ಷ ರೂಪಾಯಿ
ಶಾರುಖ್ ಖಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 26, 2022 | 6:34 PM

ಶಾರುಖ್ ಖಾನ್ ಅವರು (Shah Rukh Khan) ನಟನೆಯಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಆದಾಗ್ಯೂ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ. ಸದ್ಯ ಮೂರು ಸಿನಿಮಾ ಕೆಲಸಗಳಲ್ಲಿ ಶಾರುಖ್ ಖಾನ್ ಬ್ಯುಸಿ ಆಗಿದ್ದಾರೆ. ಶಾರುಖ್ ಖಾನ್ ಅವರು ಅತ್ಯಂತ ಶ್ರೀಮಂತ ಸೆಲೆಬ್ರಿಟಿ ಕೂಡ ಹೌದು. ಅವರ ಮನೆಯಲ್ಲಿ ಏನೆಲ್ಲ ಇದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಫ್ಯಾನ್ಸ್​ಗೆ (Fans) ಇರುತ್ತದೆ. ಶಾರುಖ್ ಖಾನ್ ಅವರು ಇತ್ತೀಚೆಗೆ ಒಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಹುಬ್ಬೇರಿಸಿದ್ದಾರೆ.

ಶಾರುಖ್ ಖಾನ್ ಮನೆ ತುಂಬಾನೇ ದೊಡ್ಡದಿದೆ. ಅವರ ಮನೆಯಲ್ಲಿ ಹಲವು ಬೆಡ್​​ರೂಂಗಳು ಇವೆ. ಎಲ್ಲಾ ಬೆಡ್​ರೂಂನಲ್ಲೂ ಶಾರುಖ್​ ಖಾನ್ ಒಂದು ಟಿವಿ ಇಟ್ಟಿದ್ದಾರೆ. ಅವರಿಗೆ ಟಿವಿ ನೋಡುವ ಹವ್ಯಾಸ ಹೆಚ್ಚಿದೆ. ಇದಕ್ಕಾಗಿ ಅವರು ಖರ್ಚು ಮಾಡಿದ್ದು ಬರೋಬ್ಬರಿ 40 ಲಕ್ಷ ರೂಪಾಯಿ!

ಇದನ್ನೂ ಓದಿ
Image
‘ಡಂಕಿ’ ಸಿನಿಮಾದ ಫೋಟೋ ಲೀಕ್; 40ರ ಹರೆಯದವರಂತೆ ಕಂಡ ಶಾರುಖ್ ಖಾನ್
Image
‘ಆಚಾರ್ಯ’ ಸಿನಿಮಾದಿಂದ ವಿತರಕರಿಗೆ ನಷ್ಟ; ಮಹತ್ವದ ನಿರ್ಧಾರ ತೆಗೆದುಕೊಂಡ ಚಿರು
Image
ಮುಂಬೈ: ಶಾರುಖ್ ಖಾನ್ ಬಂಗಲೆ ಮನ್ನತ್ ಸಮೀಪದ ಕಟ್ಟಡದಲ್ಲಿ ಬೆಂಕಿ; ಯಾವುದೇ ಅಪಾಯ ಇಲ್ಲ
Image
ನಿರ್ದೇಶಕನ ಎದುರು ತಮ್ಮ ಹೊಸ ಸಿನಿಮಾ ಟೈಟಲ್ ತಪ್ಪಾಗಿ ಓದಿದ ಶಾರುಖ್; ಮುಂದೇನಾಯ್ತು ನೋಡಿ

ಹೌದು, ಇತ್ತೀಚೆಗೆ ಟಿವಿ ಕಂಪನಿಯೊಂದರ ಕಾರ್ಯಕ್ರಮದಲ್ಲಿ ಶಾರುಖ್ ಪಾಲ್ಗೊಂಡಿದ್ದರು. ಈ ವೇಳೆ ಅವರು ಮನೆಯಲ್ಲಿರುವ ಟಿವಿಯ ಬಗ್ಗೆ ಮಾತನಾಡಿದ್ದಾರೆ. ‘ನನ್ನ ಮಲಗುವ ಕೋಣೆಯಲ್ಲಿ ಒಂದು ಟಿವಿ ಇದೆ. ನನ್ನ ಲಿವಿಂಗ್ ರೂಂನಲ್ಲಿ ಒಂದು ಟಿವಿ ಇದೆ, ಮಗ ಅಬ್ರಾಮ್‌ನ ಕೋಣೆಯಲ್ಲಿ, ನನ್ನ ರೂಂನಲ್ಲಿ, ಆರ್ಯನ್‌ನ ಕೋಣೆಯಲ್ಲಿ, ನನ್ನ ಮಗಳ ಕೋಣೆಯಲ್ಲಿ, ಜಿಮ್‌ನಲ್ಲಿ ಟಿವಿ ಇದೆ’ ಎಂದಿದ್ದಾರೆ ಶಾರುಖ್ ಖಾನ್.

‘ಪ್ರತಿ ಟಿವಿಯ ವೆಚ್ಚ ಸುಮಾರು ಒಂದರಿಂದ ಒಂದೂವರೆ ಲಕ್ಷ ರೂಪಾಯಿ. ಆ ಲೆಕ್ಕಾಚಾರದ ಪ್ರಕಾರ, ನಾನು ಟಿವಿಗೆ ಸುಮಾರು 30-40 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ’ ಎಂದಿದ್ದಾರೆ ಶಾರುಖ್ ಖಾನ್. ಈ ವಿಚಾರ ಕೇಳಿ ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಲೀಕ್ ಆಗಿತ್ತು ‘ಡಂಕಿ’ ಸಿನಿಮಾ ಫೋಟೋ

ರಾಜ್​ಕುಮಾರ್ ಹಿರಾನಿ ಜತೆ ಶಾರುಖ್ ಖಾನ್ ಇದೇ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಸಂಜಯ್ ದತ್, ಆಮಿರ್ ಖಾನ್ ಜತೆಗೆ ಈ ಮೊದಲು ಹಿರಾನಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಒಂದು ಪ್ರೋಮೋ ವಿಡಿಯೋ ಹಂಚಿಕೊಳ್ಳುವ ಮೂಲಕ ಈ ಬಗ್ಗೆ ಘೋಷಣೆ ಮಾಡಲಾಗಿತ್ತು. ಈ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಅಭಿಮಾನಿಗಳಲ್ಲಿದೆ. ರಾಜ್​ಕುಮಾರ್ ಹಿರಾನಿ ಬಾಲಿವುಡ್​ನ ಯಶಸ್ವಿ ನಿರ್ದೇಶಕ. ‘ಮುನ್ನಾ ಭಾಯ್​ ಎಂಬಿಬಿಎಸ್​’, ‘ಪಿಕೆ’,‘ಸಂಜು’ ರೀತಿಯ ಹಿಟ್​ ಚಿತ್ರಗಳನ್ನು ಅವರು ನೀಡಿದ್ದಾರೆ. 2018ರಲ್ಲಿ ಬಂದ ‘ಸಂಜು’ ಬಳಿಕ ಅವರು ನಿರ್ದೇಶಿಸುತ್ತಿರುವ ಮುಂದಿನ ಸಿನಿಮಾ ಇದಾಗಿದೆ. ಇತ್ತೀಚೆಗೆ ಫೋಟೋ ವೈರಲ್ ಆಗಿತ್ತು. ಶಾರುಖ್ ಖಾನ್ ಅವರು ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದರು. ಅವರ ವಯಸ್ಸಿನ ಬಗ್ಗೆ ಎಲ್ಲರೂ ಅಚ್ಚರಿ ಹೊರ ಹಾಕಿದ್ದರು. ಶಾರುಖ್ ವಯಸ್ಸು ಈಗ 56. ಅವರು ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಬಗ್ಗೆ ಫ್ಯಾನ್ಸ್ ಮಾತನಾಡಿದ್ದರು. ‘ಶಾರುಖ್ ಖಾನ್ ಇನ್ನೂ 40 ಹರೆಯದವರಂತೆ ಕಾಣುತ್ತಾರೆ’ ಎಂದು ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ