AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sai Pallavi: ಮೈ ಕಾಣುವಂತೆ ಬಟ್ಟೆ ಧರಿಸಬಾರದು ಅಂತ ಸಾಯಿ ಪಲ್ಲವಿ ನಿರ್ಧಾರ ಮಾಡಿದ್ದು ಯಾಕೆ? ಸತ್ಯ ಬಾಯ್ಬಿಟ್ಟ ನಟಿ

Sai Pallavi Family: ‘ಇನ್ಮುಂದೆ ನಾನು ಚಿಕ್ಕ ಬಟ್ಟೆ ಧರಿಸಬಾರದು ಅಂತ ಆ ದಿನವೇ ನಿರ್ಧಾರ ಮಾಡಿದೆ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ಆ ಘಟನೆ ಯಾವುದು? ಇಲ್ಲಿದೆ ವಿವರ..

Sai Pallavi: ಮೈ ಕಾಣುವಂತೆ ಬಟ್ಟೆ ಧರಿಸಬಾರದು ಅಂತ ಸಾಯಿ ಪಲ್ಲವಿ ನಿರ್ಧಾರ ಮಾಡಿದ್ದು ಯಾಕೆ? ಸತ್ಯ ಬಾಯ್ಬಿಟ್ಟ ನಟಿ
ಸಾಯಿ ಪಲ್ಲವಿ
TV9 Web
| Updated By: ಮದನ್​ ಕುಮಾರ್​|

Updated on: Jun 14, 2022 | 7:30 AM

Share

ನಟಿ ಸಾಯಿ ಪಲ್ಲವಿ (Sai Pallavi) ಅವರು ಹಲವು ಕಾರಣಗಳಿಂದಾಗಿ ಡಿಫರೆಂಟ್​ ಎನಿಸಿಕೊಳ್ಳುತ್ತಾರೆ. ಬೇರೆ ನಟಿಯರಿಗೂ ಸಾಯಿ ಪಲ್ಲವಿಗೂ ತುಂಬ ವ್ಯತ್ಯಾಸ ಇದೆ. ಹಾಗಾಗಿ ಅವರನ್ನು ಅಭಿಮಾನಿಗಳು ಹೆಚ್ಚು ಇಷ್ಟಪಡುತ್ತಾರೆ ಎನ್ನಬಹುದು. ಸಾಯಿ ಪಲ್ಲವಿ ಸಿನಿಮಾಗಳು (Sai Pallavi Movies) ದೇಶಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತದೆ. ಆದರೆ ಯಾವುದೇ ಸಿನಿಮಾದಲ್ಲಿ ಅವರು ಮೈ ಕಾಣುವಂತೆ ಬಟ್ಟೆ ಧರಿಸುವುದಿಲ್ಲ. ಪ್ರತಿ ಚಿತ್ರಗಳಲ್ಲಿಯೂ ಅವರು ಈ ನಿಯಮವನ್ನು ಪಾಲಿಸುತ್ತಾರೆ. ಕೊಂಚ ಗ್ಲಾಮರಸ್​ ಆಗಿ ಕಾಣಿಸಿಕೊಂಡರೂ ಕೂಡ ಅವರು ಆ ಬಗ್ಗೆ ಹೆಚ್ಚು ಜಾಗರೂಕತೆ ವಹಿಸುತ್ತಾರೆ. ಅಷ್ಟಕ್ಕೂ ಸಾಯಿ ಪಲ್ಲವಿ ಈ ರೀತಿ ಗಟ್ಟಿ ನಿರ್ಧಾರ ಮಾಡಿದ್ದು ಯಾಕೆ? ಈ ವಿಷಯದ ಬಗ್ಗೆ ಅವರು ಬಾಯಿ ಬಿಟ್ಟಿದ್ದಾರೆ. ತಮ್ಮ ಬದುಕಿನ ಬಲವಾದ ತೀರ್ಮಾನಕ್ಕೆ ಕಾರಣವಾದ ಒಂದು ಸಂಗತಿಯನ್ನು ಅವರು ವಿವರಿಸಿದ್ದಾರೆ.

ಸಾಯಿ ಪಲ್ಲವಿ ಅವರು ರಾಣಾ ದಗ್ಗುಬಾಟಿ ಜೊತೆ ‘ವಿರಾಟ ಪರ್ವಂ’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರ ಜೂನ್​ 17ರಂದು ತೆರೆಕಾಣುತ್ತಿದೆ. ಈ ಸಲುವಾಗಿ ಅನೇಕ ಕಡೆಗಳಲ್ಲಿ ಸಾಯಿ ಪಲ್ಲವಿ ಸಂದರ್ಶನ ನೀಡುತ್ತಿದ್ದಾರೆ. ಇತ್ತೀಚಿನ ಒಂದು ಸಂದರ್ಶನದಲ್ಲಿ ಅವರು ಈ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸಾಯಿ ಪಲ್ಲವಿ ಅವರದ್ದು ಸಂಪ್ರದಾಯಸ್ಥ ಕುಟುಂಬ. ತಂಗಿಯ ಜೊತೆ ಸೇರಿ ಬ್ಯಾಡ್ಮಿಂಟನ್​ ಆಡುವಾಗ ಅವರು ಕಂಫರ್ಟ್​ ಆಗುವಂತಹ ಬಟ್ಟೆಗಳನ್ನೇ ಧರಿಸುತ್ತಾರೆ. ಆದರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಆ ರೀತಿ ಇರಲು ಅವರು ಬಯಸುವುದಿಲ್ಲ.

ಇದನ್ನೂ ಓದಿ: ಎರಡು ಶೇಡ್​ ಪಾತ್ರದಲ್ಲಿ ಸಾಯಿ ಪಲ್ಲವಿ; ನಿರೀಕ್ಷೆ ಮೂಡಿಸಿದ ‘ವಿರಾಟ ಪರ್ವಂ’ ಸಿನಿಮಾ

ಇದನ್ನೂ ಓದಿ
Image
Sai Pallavi: ಮುಖ ಮುಚ್ಕೊಂಡು ಥಿಯೇಟರ್​ಗೆ ಬಂದ ಸಾಯಿ ಪಲ್ಲವಿ; ನೋಡಿ ಎಂಜಾಯ್​ ಮಾಡಿದ್ದು ಯಾವ ಸಿನಿಮಾ?
Image
Sai Pallavi: ಬಾಲಿವುಡ್​ಗೆ ಕಾಲಿಡೋ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸಾಯಿ ಪಲ್ಲವಿ
Image
ವೇದಿಕೆ ಮೇಲೆ ಗಳಗಳನೆ ಅತ್ತ ಸಾಯಿ ಪಲ್ಲವಿ; ಕಣ್ಣೀರು ಹಾಕಿದ್ದಕ್ಕೆ ಕಾರಣ ವಿವರಿಸಿದ ನಟಿ
Image
ಚಿತ್ರರಂಗಕ್ಕೆ ಕಾಲಿಟ್ಟ ಸಾಯಿ ಪಲ್ಲವಿ ತಂಗಿ ಪೂಜಾ; ಅಕ್ಕನಂತೆ ಮಿಂಚಲು ಸಾಧ್ಯವೇ?

‘ವಿದ್ಯಾಭ್ಯಾಸಕ್ಕಾಗಿ ನಾನು ಜಾರ್ಜಿಯಾಗೆ ತೆರಳಿದ್ದೆ. ಅಲ್ಲಿ ಟ್ಯಾಂಗೋ ಡ್ಯಾನ್ಸ್​ ಕಲಿತೆ. ಆ ಡ್ಯಾನ್ಸ್​ ಕಲಿಯಲು ನಾವು ವಿಶೇಷವಾದ ಬಟ್ಟೆ ಧರಿಸಬೇಕು. ಪೋಷಕರ ಅನುಮತಿ ಪಡೆದುಕೊಂಡು, ಆ ಬಟ್ಟೆ ಧರಿಸಿ ನಾನು ಟ್ಯಾಂಗೋ ಡ್ಯಾನ್ಸ್​ ಕಲಿತೆ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ಆದರೆ ಆ ಬಳಿಕ ನಡೆದ ಒಂದು ಸಂಗತಿ ಅವರಿಗೆ ಬೇಸರ ಮೂಡಿಸಿತು.

ಇದನ್ನೂ ಓದಿ: ಟ್ರಾಕ್ಟರ್ ಓಡಿಸುತ್ತಿರುವ ಸಾಯಿ ಪಲ್ಲವಿ; ಹಳೆಯ ವಿಡಿಯೋ ವೈರಲ್​

‘ಕೆಲವು ದಿನಗಳ ನಂತರ ನನಗೆ ‘ಪ್ರೇಮಂ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆ ಸಿನಿಮಾ ರಿಲೀಸ್​ ಆದ ಬಳಿಕ ನಾನು ಈ ಹಿಂದೆ ಮಾಡಿದ್ದ ಟ್ಯಾಂಗೋ ಡ್ಯಾನ್ಸ್​ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯಿತು. ಅದಕ್ಕೆ ಜನರು ಮಾಡಿದ್ದ ಕಮೆಂಟ್​ಗಳು ನನ್ನನ್ನು ಕಸಿವಿಸಿಗೊಳಿಸಿದವು. ಇನ್ಮುಂದೆ ನಾನು ಚಿಕ್ಕ ಬಟ್ಟೆ ಧರಿಸಬಾರದು ಅಂತ ಆ ದಿನವೇ ನಿರ್ಧಾರ ಮಾಡಿದೆ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

ಇದನ್ನೂ ಓದಿ: Sai Pallavi: ನಕ್ಸಲ್​ ವೇಷದಲ್ಲಿ ಬಂದ ಸಾಯಿ ಪಲ್ಲವಿ; ರಾಣಾ ನಟನೆಯ ‘ವಿರಾಟ ಪರ್ವಂ’ ಟ್ರೇಲರ್​ ಹೇಗಿದೆ?

ಸಾಯಿ ಪಲ್ಲವಿ ಅವರು ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅವರು ನಟಿಸಲಿರುವ ‘ಗಾರ್ಗಿ’ ಚಿತ್ರ ಕನ್ನಡದಲ್ಲೂ ಮೂಡಿಬರಲಿದೆ ಎಂಬುದು ವಿಶೇಷ. ಅದಕ್ಕಾಗಿ ಸ್ವತಃ ಸಾಯಿ ಪಲ್ಲವಿ ಅವರು ಕನ್ನಡದಲ್ಲಿ ಡಬ್​ ಮಾಡುತ್ತಿದ್ದಾರೆ. ಅದರ ವಿಡಿಯೋ ಕೆಲ ದಿನಗಳ ಹಿಂದೆ ವೈರಲ್​ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ