AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sai Pallavi: ನಕ್ಸಲ್​ ವೇಷದಲ್ಲಿ ಬಂದ ಸಾಯಿ ಪಲ್ಲವಿ; ರಾಣಾ ನಟನೆಯ ‘ವಿರಾಟ ಪರ್ವಂ’ ಟ್ರೇಲರ್​ ಹೇಗಿದೆ?

Virata Parvam Trailer: ನಕ್ಸಲ್​ ಕಮಾಂಡರ್​ ಮೇಲೆ ಪ್ರೀತಿ ಚಿಗುರಿದ ಬಳಿಕ ಹಳ್ಳಿ ಹುಡುಗಿಯೊಬ್ಬಳು ಕೂಡ ನಕ್ಸಲೈಟ್​ ಆಗುತ್ತಾಳೆ. ಸಾಯಿ ಪಲ್ಲವಿ ನಟನೆಯ ‘ವಿರಾಟ ಪರ್ವಂ’ ಚಿತ್ರದ ಒನ್​ ಲೈನ್​ ಸ್ಟೋರಿ ಇದು.

Sai Pallavi: ನಕ್ಸಲ್​ ವೇಷದಲ್ಲಿ ಬಂದ ಸಾಯಿ ಪಲ್ಲವಿ; ರಾಣಾ ನಟನೆಯ ‘ವಿರಾಟ ಪರ್ವಂ’ ಟ್ರೇಲರ್​ ಹೇಗಿದೆ?
ಸಾಯಿ ಪಲ್ಲವಿ
TV9 Web
| Edited By: |

Updated on: Jun 06, 2022 | 9:55 AM

Share

ಮನಸೆಳೆಯುವ ನಟನೆ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ನಟಿ ಸಾಯಿ ಪಲ್ಲವಿ (Sai Pallavi) ಅವರು ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಪಾತ್ರಕ್ಕಾಗಿ ನೂರಕ್ಕೆ ನೂರರಷ್ಟು ಶ್ರಮ ಹಾಕುವ ಅವರು ಎಲ್ಲ ನಿರ್ದೇಶಕರಿಗೂ ಅಚ್ಚುಮೆಚ್ಚು. ಈಗ ಸಾಯಿ ಪಲ್ಲವಿ ಅಭಿನಯದ ಹೊಸ ಸಿನಿಮಾ ‘ವಿರಾಟ ಪರ್ವಂ’ ಟ್ರೇಲರ್​ ರಿಲೀಸ್​ ಆಗಿದೆ. ಈ ಸಿನಿಮಾದಲ್ಲಿ ಅವರು ನಕ್ಸಲೈಟ್​​ ಹುಡುಗಿಯ ಪಾತ್ರ ಮಾಡಿದ್ದಾರೆ. ರಾಣಾ ದಗ್ಗುಬಾಟಿ (Rana Daggubati) ಹೀರೋ ಆಗಿದ್ದರೂ ಕೂಡ ಈ ಚಿತ್ರದಲ್ಲಿ ಸಾಯಿ ಪಲ್ಲವಿ ಪಾತ್ರವೂ ಹೆಚ್ಚು ಹೈಲೈಟ್​ ಆಗಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ‘ವಿರಾಟ ಪರ್ವಂ’ (Virata Parvam) ನೋಡಲು ಅಭಿಮಾನಿಗಳು ಕಾದಿದ್ದಾರೆ. ಫ್ಯಾನ್ಸ್​ ಮನದಲ್ಲಿನ ನಿರೀಕ್ಷೆ ಹೆಚ್ಚಿಸುವಲ್ಲಿ ಈ ಟ್ರೇಲರ್​ ಯಶಸ್ವಿ ಆಗಿದೆ. ಜೂನ್​ 17ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಪ್ರತಿ ಸಿನಿಮಾದಲ್ಲಿಯೂ ಒಂದಕ್ಕಿಂತ ಒಂದು ಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಯಿ ಪಲ್ಲವಿ ಅವರು ‘ವಿರಾಟ ಪರ್ವಂ’ ಚಿತ್ರದಲ್ಲಿ ನಕ್ಸಲೈಟ್​​ ಅವತಾರ ತಾಳಿದ್ದಾರೆ. ನಕ್ಸಲ್​ ಗುಂಪಿನ ನಾಯಕನ ಪಾತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸಿದ್ದಾರೆ. ನಕ್ಸಲ್​ ಕಮಾಂಡರ್​ ಮೇಲೆ ಪ್ರೀತಿ ಚಿಗುರಿದ ಬಳಿಕ ಸಾಮಾನ್ಯ ಹಳ್ಳಿ ಹುಡುಗಿಯೊಬ್ಬಳು ತಾನೂ ಕೂಡ ನಕ್ಸಲೈಟ್​ ಆಗುತ್ತಾಳೆ ಎಂಬ ಒನ್​ ಲೈನ್​ ಸ್ಟೋರಿಯನ್ನು ಟ್ರೇಲರ್​ನಲ್ಲಿ ಬಿಟ್ಟುಕೊಡಲಾಗಿದೆ. ಅವರ ಬದುಕಿನಲ್ಲಿ ಮುಂದೇನಾಗುತ್ತದೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಇದನ್ನೂ ಓದಿ: ಚಿತ್ರರಂಗಕ್ಕೆ ಕಾಲಿಟ್ಟ ಸಾಯಿ ಪಲ್ಲವಿ ತಂಗಿ ಪೂಜಾ; ಅಕ್ಕನಂತೆ ಮಿಂಚಲು ಸಾಧ್ಯವೇ?

ಇದನ್ನೂ ಓದಿ
Image
Sai Pallavi: ಮುಖ ಮುಚ್ಕೊಂಡು ಥಿಯೇಟರ್​ಗೆ ಬಂದ ಸಾಯಿ ಪಲ್ಲವಿ; ನೋಡಿ ಎಂಜಾಯ್​ ಮಾಡಿದ್ದು ಯಾವ ಸಿನಿಮಾ?
Image
‘777 ಚಾರ್ಲಿ’ ಟ್ರೇಲರ್​ಗಾಗಿ ರಕ್ಷಿತ್ ಶೆಟ್ಟಿಗೆ ಸಾಯಿ ಪಲ್ಲವಿ ಸಾಥ್​; ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾದ ‘ಪ್ರೇಮಂ’ ಬ್ಯೂಟಿ
Image
Sai Pallavi Birthday: ಕನ್ನಡದಲ್ಲಿ ಸಾಯಿ ಪಲ್ಲವಿ ಡೈಲಾಗ್; ಬರ್ತಡೇ ಪ್ರಯುಕ್ತ ಹೊಸ ಚಿತ್ರ ‘ಗಾರ್ಗಿ’ ಮೇಕಿಂಗ್​ ವಿಡಿಯೋ ಬಹಿರಂಗ
Image
Sai Pallavi: ಮದುವೆ ಬಗ್ಗೆ ಗಾಸಿಪ್​ ಹಬ್ಬಿಸಿದವರಿಗೆ ಕಾಲು ತೋರಿಸಿ ಖಡಕ್​ ಉತ್ತರ ನೀಡಿದ ಸಾಯಿ ಪಲ್ಲವಿ

1990ರ ಸಮಯದಲ್ಲಿ ತೆಲಂಗಾಣದಲ್ಲಿ ನಡೆದ ಕೆಲವು ಸತ್ಯ ಘಟನೆಗಳನ್ನು ಆಧರಿಸಿ ‘ವಿರಾಟ ಪರ್ವಂ’ ಸಿನಿಮಾ ಸಿದ್ಧವಾಗಿದೆ. ವೇಣು ಉಡುಗುಲ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ರಾಣಾ ದಗ್ಗುಬಾಟಿ ಅವರ ಹೋಮ್​ ಬ್ಯಾನರ್​ ಮೂಲಕವೇ ಈ ಸಿನಿಮಾ ನಿರ್ಮಾಣ ಆಗಿದೆ. ಪ್ರಿಯಾಮಣಿ, ನಂದಿತಾ ದಾಸ್​, ಈಶ್ವರಿ ರಾವ್​ ಮುಂತಾದ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

(ವಿರಾಟ ಪರ್ವಂ ಟ್ರೇಲರ್​ ಇಲ್ಲಿದೆ)

‘ವಿರಾಟ ಪರ್ವಂ’ ಟ್ರೇಲರ್​ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ 45 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಈ ಸಿನಿಮಾ ಮೇಲೆ ರಾಣಾ ದಗ್ಗುಬಾಟಿ ಮತ್ತು ಸಾಯಿ ಪಲ್ಲವಿ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2021ರಲ್ಲಿ ‘ಲವ್​ ಸ್ಟೋರಿ’ ಮತ್ತು ‘ಶ್ಯಾಮ್​ ಸಿಂಗ ರಾಯ್​’ ಚಿತ್ರದ ಮೂಲಕ ಯಶಸ್ಸು ಕಂಡಿರುವ ಸಾಯಿ ಪಲ್ಲವಿ ಅವರು ‘ವಿರಾಟ ಪರ್ವಂ’ ಮೂಲಕ ಮತ್ತೊಂದು ಯಶಸ್ಸು ಪಡೆಯಲು ಕಾದಿದ್ದಾರೆ. ಇತ್ತೀಚೆಗಷ್ಟೇ ಅವರ ಹೊಸ ಸಿನಿಮಾ ‘ಗಾರ್ಗಿ’ ಅನೌನ್ಸ್​ ಆಗಿದ್ದು, ಆ ಚಿತ್ರ ಕನ್ನಡದಲ್ಲೂ ಮೂಡಿಬರುತ್ತಿರುವುದು ವಿಶೇಷ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ