ಅವಕಾಶ ಇಲ್ಲದಾಗ 2 ಸಾವಿರ ರೂ. ಕೊಟ್ಟು ಸುಳ್ಳು ಸುದ್ದಿ ಮಾಡಿಸಿದ್ದ ಸಲ್ಮಾನ್​ ಖಾನ್​; ಒಪ್ಪಿಕೊಂಡು ಕಣ್ಣೀರಿಟ್ಟ ನಟ

Salman Khan | IIFA 2022: ಒಂದು ಜೊತೆ ಬಟ್ಟೆ ಕೊಂಡುಕೊಳ್ಳಲು ಕೂಡ ಸಲ್ಮಾನ್​ ಖಾನ್​ ಬಳಿ ಹಣ ಇರಲಿಲ್ಲ. ಆಗ ಸುನೀಲ್​ ಶೆಟ್ಟಿ ಮಾಡಿದ್ದ ಸಹಾಯವನ್ನು ಈಗ ಸಲ್ಲು ನೆನಪಿಸಿಕೊಂಡಿದ್ದಾರೆ.

ಅವಕಾಶ ಇಲ್ಲದಾಗ 2 ಸಾವಿರ ರೂ. ಕೊಟ್ಟು ಸುಳ್ಳು ಸುದ್ದಿ ಮಾಡಿಸಿದ್ದ ಸಲ್ಮಾನ್​ ಖಾನ್​; ಒಪ್ಪಿಕೊಂಡು ಕಣ್ಣೀರಿಟ್ಟ ನಟ
ಸಲ್ಮಾನ್ ಖಾನ್
Follow us
| Updated By: ಮದನ್​ ಕುಮಾರ್​

Updated on: Jun 06, 2022 | 1:28 PM

ಬಾಲಿವುಡ್​ನ ಸ್ಟಾರ್​ ಕಲಾವಿದ ಸಲ್ಮಾನ್​ ಖಾನ್​ (Salman Khan) ಅವರು ಇಂದು ಬಹುಬೇಡಿಕೆಯ ನಟನಾಗಿ ಬೆಳೆದಿದ್ದಾರೆ. ಆದರೆ ಜೀವನದಲ್ಲಿ ಅವರು ಕೂಡ ಏಳು-ಬೀಳುಗಳನ್ನು ಕಂಡಿದ್ದಾರೆ. ಅವಕಾಶ ಇಲ್ಲದೇ ಕೊರಗಿದ್ದಾರೆ. ಕೈಯಲ್ಲಿ ದುಡ್ಡು ಇಲ್ಲದೇ ಕಷ್ಟಪಟ್ಟಿದ್ದಾರೆ. ಸಿನಿಮಾದಲ್ಲಿ ಚಾನ್ಸ್​ ಪಡೆಯಲು ಏನೇನೋ ಸರ್ಕಸ್​ ಮಾಡಿದ್ದಾರೆ. ಆ ಎಲ್ಲ ವಿಚಾರಗಳನ್ನು ಸಲ್ಮಾನ್​ ಖಾನ್​ ಅವರು ಈಗ ಬಾಯಿ ಬಿಟ್ಟಿದ್ದಾರೆ. ಅಬುಧಾಬಿಯಲ್ಲಿ ಐಫಾ ಪ್ರಶಸ್ತಿ ಪ್ರದಾನ (IIFA Awards) ಸಮಾರಂಭ ಅದ್ದೂರಿಯಾಗಿ ನಡೆದಿದೆ. ಈ ಸಮಾರಂಭದಲ್ಲಿ ಸಲ್ಲು ಮಾತನಾಡಿದ್ದಾರೆ. ತಮ್ಮ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡಿರುವ ಅವರು ಕಣ್ಣೀರು ಹಾಕಿದ್ದಾರೆ. ತಮ್ಮ ಜೀವನದಲ್ಲಿ ಸಹಾಯ ಮಾಡಿದ ಎಲ್ಲರನ್ನೂ ಅವರು ಸ್ಮರಿಸಿಕೊಂಡಿದ್ದಾರೆ. ‘ಐಫಾ 2022’ (IIFA 2022) ಕಾರ್ಯಕ್ರಮದ ಈ ವಿಡಿಯೋ ತುಣುಕು ಸಲ್ಮಾನ್​ ಖಾನ್​ ಫ್ಯಾನ್ಸ್​ ಪೇಜ್​ಗಳಲ್ಲಿ ವೈರಲ್​ ಆಗಿದೆ.

1989ರಲ್ಲಿ ‘ಮೈನೇ ಪ್ಯಾರ್​ ಕಿಯಾ’ ಸಿನಿಮಾ ಮೂಲಕ ಸಲ್ಮಾನ್​ ಖಾನ್​ ಹೀರೋ ಆದರು. ಆ ಚಿತ್ರದಲ್ಲಿ ನಟಿ ಭಾಗ್ಯಶ್ರೀ ಅವರು ನಾಯಕಿ ಆಗಿದ್ದರು. ಚಿತ್ರ ಸೂಪರ್​ ಹಿಟ್​ ಆದಾಗ ಅದರ ಎಲ್ಲ ಕ್ರೆಡಿಟ್​ ಭಾಗ್ಯಶ್ರೀಗೆ ನೀಡಲಾಯಿತು. ಆದರೆ ಅವರು ಮದುವೆ ಆಗುವ ಸಲುವಾಗಿ ಚಿತ್ರರಂಗಕ್ಕೆ ವಿದಾಯ ಹೇಳಿದರು. ಆ ಬಳಿಕ 6 ತಿಂಗಳ ಕಾಲ ಸಲ್ಮಾನ್​ ಖಾನ್​ಗೆ ಯಾವುದೇ ಆಫರ್ ಬಂದಿರಲಿಲ್ಲ. ಆ ವಿಚಾರವನ್ನು ಐಫಾ ಸಮಾರಂಭದಲ್ಲಿ ಅವರು ಬಾಯಿ ಬಿಟ್ಟಿದ್ದಾರೆ.

ಇದನ್ನೂ ಓದಿ
Image
‘ನಿಮ್ಮನ್ನೂ ಸಿಧು ಮೂಸೆವಾಲಾ ರೀತಿ ಕೊಲ್ಲುತ್ತೇವೆ’; ಸಲ್ಮಾನ್​ ಖಾನ್ ತಂದೆಗೆ ಕೊಲೆ ಬೆದರಿಕೆ
Image
ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?
Image
‘ಇನ್ಮುಂದೆ ನಾನು ಒಂಟಿ ಅಲ್ಲ’ ಎಂದು ಸಲ್ಮಾನ್​ ಖಾನ್​ ಕಡೆ ಕೈ ತೋರಿಸಿ ಹೇಳಿದ ಕಂಗನಾ; ಫ್ಯಾನ್ಸ್​ ಫುಲ್​ ಖುಷ್​​
Image
ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಇದನ್ನೂ ಓದಿ: ಪಾರ್ಟಿಯಲ್ಲಿ ಸಲ್ಮಾನ್​ ಖಾನ್​ ಕಂಡು ಗಂಡನಿಂದಲೇ ಅಂತರ ಕಾಯ್ದುಕೊಂಡ ಐಶ್ವರ್ಯಾ ರೈ?

‘ಆ ಕಷ್ಟದ ಸಂದರ್ಭದಲ್ಲಿ ನಮ್ಮ ತಂದೆಯವರು ನಿರ್ಮಾಪಕ ಜಿ.ಪಿ. ಸಿಪ್ಪಿ ಅವರಿಗೆ 2 ಸಾವಿರ ರೂಪಾಯಿ ನೀಡಿ, ನನ್ನನ್ನು ಒಂದು ಸಿನಿಮಾಗೆ ಆಯ್ಕೆ ಮಾಡಿಕೊಂಡಿರುವುದಾಗಿ ಮ್ಯಾಗಜಿನ್​ನಲ್ಲಿ ಅನೌನ್ಸ್​ ಮಾಡುವಂತೆ ಹೇಳಿದರು. ಜಿ.ಪಿ. ಸಿಪ್ಪಿ ಅವರು ಅನೌನ್ಸ್​ ಮಾಡಿದರು. ಆದರೆ ಸಿನಿಮಾ ಇರಲಿಲ್ಲ. ನಂತರ ರಮೇಶ್​ ತೌರಾನಿ ಅವರು ಸಿಪ್ಪಿಯವರ ಕಚೇರಿಗೆ ಬಂದು 5 ಲಕ್ಷ ರೂಪಾಯಿ ನೀಡಿದರು. ಆ ಹಣದಿಂದ ನನಗೆ ‘ಪತ್ತರ್​ ಕೆ ಫೂಲ್​’ ಸಿನಿಮಾದ ಅವಕಾಶ ಸಿಕ್ಕಿತು’ ಎಂದು ಸಲ್ಮಾನ್​ ಖಾನ್ ಹೇಳಿದ್ದಾರೆ.

ಒಂದು ಜೊತೆ ಬಟ್ಟೆ ಕೊಂಡುಕೊಳ್ಳಲು ಕೂಡ ಸಲ್ಮಾನ್​ ಖಾನ್​ ಬಳಿ ಹಣ ಇರಲಿಲ್ಲ. ಆಗ ಸಹಾಯ ಮಾಡಿದ್ದು ಸುನೀಲ್​ ಶೆಟ್ಟಿ. ಆ ಘಟನೆಯನ್ನು ಕೂಡ ನೆನಪು ಮಾಡಿಕೊಂಡು ಸಲ್ಲು ಎಮೋಷನಲ್​ ಆಗಿದ್ದಾರೆ. ನಂತರ ಸ್ಟಾರ್​ ನಟನಾಗಿ ಬೆಳೆದರೂ ಕೂಡ ಮತ್ತೆ ವೃತ್ತಿಜೀವನ ಇಳಿಮುಖ ಆಗಿತ್ತು. ಆಗ ನಿರ್ಮಾಪಕ ಬೋನಿ ಕಪೂರ್​ ಅವರು ಅವಕಾಶ ನೀಡಿದರು ಎಂಬುದನ್ನು ಕೂಡ ಸಲ್ಮಾನ್​ ಖಾನ್​ ನೆನಪಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.