ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?

Ayush Sharma | Salman Khan: ಸಲ್ಮಾನ್​ ಖಾನ್​ ಮತ್ತು ಆಯುಷ್​​ ಶರ್ಮಾ ನಡುವೆ ಉತ್ತಮ ಬಾಂಧವ್ಯ ಇತ್ತು. ಆದರೆ ಈಗ ಕಿರಿಕ್​ ಶುರುವಾಗಿದೆ ಎಂದು ವರದಿ ಆಗಿದೆ.

ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?
ಸಲ್ಮಾನ್​ ಖಾನ್​. ಅರ್ಪಿತಾ ಖಾನ್​, ಆಯುಶ್​ ಶರ್ಮಾ
Follow us
TV9 Web
| Updated By: ಮದನ್​ ಕುಮಾರ್​

Updated on: May 22, 2022 | 9:09 AM

ಇತ್ತೀಚಿನ ವರ್ಷಗಳಲ್ಲಿ ಸಲ್ಮಾನ್​ ಖಾನ್​ (Salman Khan) ಅವರ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ. ಹಾಗಾಗಿ ಅವರಿಗೆ ತುರ್ತಾಗಿ ಒಂದು ಗೆಲುವು ಬೇಕಾಗಿದೆ. ಸಲ್ಮಾನ್​ ಖಾನ್​ ನಟಿಸುತ್ತಿರುವ ‘ಕಭಿ ಈದ್​ ಕಭಿ ದಿವಾಲಿ’ ಸಿನಿಮಾದ ಮೇಲೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಲವು ಕಾರಣಗಳಿಂದಾಗಿ ಈ ಚಿತ್ರ ಸುದ್ದಿ ಆಗುತ್ತಿದೆ. ಕೆಲವೇ ದಿನಗಳ ಹಿಂದೆ ನಟಿ ಪೂಜಾ ಹೆಗ್ಡೆ ಅವರು ‘ಕಭಿ ಈದ್​ ಕಭಿ ದಿವಾಲಿ’ (Kabhi Eid Kabhi Diwali) ಸಿನಿಮಾದ ಶೂಟಿಂಗ್ ಆರಂಭಿಸಿದರು. ಇದೇ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ತಂಗಿ ಅರ್ಪಿತಾ ಖಾನ್​ ಅವರ ಗಂಡ ಆಯುಷ್​​ ಶರ್ಮಾ ಕೂಡ ನಟಿಸುತ್ತಿದ್ದಾರೆ. ಆದರೆ ಈಗ ಈ ಸಿನಿಮಾದ ಬಗ್ಗೆ ಕೆಲವು ಅಚ್ಚರಿಯ ಮಾಹಿತಿ ಕೇಳಿಬರುತ್ತಿವೆ. ಚಿತ್ರತಂಡದ ಜೊತೆ ಕಿರಿಕ್​ ಆಗಿದ್ದರಿಂದ ಆಯುಷ್​​ ಶರ್ಮಾ (Ayush Sharma) ಅವರು ‘ಕಭಿ ಈದ್​ ಕಭಿ ದಿವಾಲಿ’ ಸಿನಿಮಾ ತಂಡದಿಂದ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಈ ಬೆಳವಣಿಗೆ ಬಗ್ಗೆ ಮೂಲಗಳು ತಿಳಿಸಿವೆ ಎಂದು ‘ಬಾಲಿವುಡ್​ ಹಂಗಾಮ’ ವರದಿ ಮಾಡಿದೆ.

ಸಹೋದರಿ ಅರ್ಪಿತಾ ಖಾನ್​ ಅವರ ಗಂಡ ಆಯುಷ್​ ಶರ್ಮಾ ಜೊತೆಗೆ ಸಲ್ಮಾನ್​ ಖಾನ್​ ಅವರಿಗೆ ಉತ್ತಮ ಬಾಂಧವ್ಯ ಇದೆ. ಈ ಹಿಂದೆ ಆಯುಷ್​​ ಶರ್ಮಾ ನಟಿಸಿದ್ದ ಮೊದಲ ಚಿತ್ರ ‘ಲವ್​ ಯಾತ್ರಿ’ ನಿರ್ಮಾಣ ಆಗಿದ್ದೇ ಸಲ್ಮಾನ್​ ಖಾನ್​ ಅವರ ಬ್ಯಾನರ್​ ಮೂಲಕ. ಆಯುಷ್​​ ಶರ್ಮಾ ಅವರ ಎರಡನೇ ಸಿನಿಮಾ ‘ಅಂತಿಮ್​’ ಕೂಡ ಸಲ್ಲು ನಿರ್ಮಾಣದಲ್ಲಿ ಮೂಡಿಬಂತು. ಆ ಚಿತ್ರದಲ್ಲಿ ಬಾಮೈದನ ಜೊತೆ ಸಲ್ಮಾನ್​ ಖಾನ್​ ಕೂಡ ನಟಿಸಿದರು. ಈಗ ‘ಕಭಿ ಈದ್​ ಕಭಿ ದಿವಾಲಿ’ ಸಿನಿಮಾದಲ್ಲಿ ಆಯುಷ್​ ಶರ್ಮಾ ಮತ್ತು ಸಲ್ಮಾನ್​ ಖಾನ್​ ಒಟ್ಟಾಗಿ ನಟಿಸುತ್ತಿದ್ದರು. ಆದರೆ ಸಿನಿಮಾ ತಂಡದಿಂದಲೇ ಆಯುಷ್​​ ಶರ್ಮಾ ಹೊರನಡೆದಿದ್ದಾರೆ ಎಂಬ ಸುದ್ದಿ ಈಗ ಹರಡಿದೆ.

ಇದನ್ನೂ ಓದಿ: ‘ಇನ್ಮುಂದೆ ನಾನು ಒಂಟಿ ಅಲ್ಲ’ ಎಂದು ಸಲ್ಮಾನ್​ ಖಾನ್​ ಕಡೆ ಕೈ ತೋರಿಸಿ ಹೇಳಿದ ಕಂಗನಾ; ಫ್ಯಾನ್ಸ್​ ಫುಲ್​ ಖುಷ್​​

ಇದನ್ನೂ ಓದಿ
Image
ಎಲ್ಲರ ಎದುರು ಸಲ್ಮಾನ್​ ಖಾನ್​ಗೆ ಕಿಸ್​ ಮಾಡಿದ ಸಿದ್ದಾರ್ಥ್​ ಶುಕ್ಲಾ ಪ್ರೇಯಸಿ ಶೆಹನಾಜ್ ಗಿಲ್​; ವಿಡಿಯೋ ವೈರಲ್​
Image
ಸೌದಿ ಮಿನಿಸ್ಟರ್​ ಜೊತೆ ಶಾರುಖ್​, ಸಲ್ಮಾನ್​​, ಅಕ್ಷಯ್​ ಕುಮಾರ್​ ಪೋಸ್; ಏನಿದು ಸಮಾಚಾರ?
Image
ಅವರಂತೆ ಸಿನಿಮಾ ಮಾಡೋಕೆ ನಮ್ಮ ಬಳಿ ಸಾಧ್ಯವಾಗುತ್ತಿಲ್ಲ ಎಂದು ಒಪ್ಪಿಕೊಂಡ ಸಲ್ಮಾನ್​ ಖಾನ್
Image
‘ಸಲ್ಮಾನ್​ ಖಾನ್​ಗೆ ತಂಗಿ ಆಗಲು ಯಾರಿಗೂ ಇಷ್ಟವಿಲ್ಲ’; ತೆರೆ ಹಿಂದಿನ ಸತ್ಯ ತೆರೆದಿಟ್ಟ ನಟಿ ಸ್ವರಾ ಭಾಸ್ಕರ್​

‘ಕ್ರಿಯೇಟಿವ್​ ವಿಚಾರಕ್ಕೆ ಆಯುಷ್​​ ಶರ್ಮಾ ಮತ್ತು ‘ಸಲ್ಮಾನ್​ ಖಾನ್​ ಫಿಲ್ಮ್ಸ್​’ ಬ್ಯಾನರ್​ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗಿದೆ. ಈ ಮೊದಲು ಸಾಜಿದ್​ ನಾಡಿಯದ್ವಾಲ ಅವರು ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು. ಆದರೆ ಈಗ ಅವರು ಕೂಡ ಹಿಂದೆ ಸರಿದಿದ್ದಾರೆ ಎಂಬ ಮಾತು ಕೇಳಿಬಂದಿದೆ. ಹಾಗಾಗಿ ಸಲ್ಮಾನ್​ ಖಾನ್​ ಒಬ್ಬರೇ ಈ ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿದ್ದಾರೆ ಎನ್ನಲಾಗುತ್ತಿದೆ. ಚಿತ್ರತಂಡವೇ ಈ ಬಗ್ಗೆ ಸ್ಪಷ್ಟನೆ ನೀಡುವವರೆಗೂ ಸತ್ಯ ಏನೆಂಬುದು ಅಭಿಮಾನಿಗಳಿಗೆ ತಿಳಿಯುವುದು ಕಷ್ಟ. ಹಾಗಾಗಿ ಸಲ್ಮಾನ್​ ಖಾನ್​ ಅಥವಾ ಆಯುಷ್​​ ಶರ್ಮಾ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಲಿ ಎಂದು ಫ್ಯಾನ್ಸ್​ ನಿರೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ: ಕಿಚ್ಚನಿಗೆ ಸಲ್ಲು ಸಾಥ್​; ಹಿಂದಿಯಲ್ಲಿ ‘ವಿಕ್ರಾಂತ್​ ರೋಣ’ ರಿಲೀಸ್ ಮಾಡುವ ಜವಾಬ್ದಾರಿ ಹೊತ್ತ ಸಲ್ಮಾನ್ ಖಾನ್

2022ರ ಡಿಸೆಂಬರ್​ಗೆ ರಿಲೀಸ್​ ಆಗಬೇಕು ಎಂಬ ಗುರಿ ಇಟ್ಟುಕೊಂಡು ‘ಕಭಿ ಈದ್​ ಕಭಿ ದಿವಾಲಿ’ ಸಿನಿಮಾದ ಶೂಟಿಂಗ್​ ಮಾಡಲಾಗುತ್ತಿತ್ತು. ಆದರೆ ಈಗ ಆಯುಷ್​​ ಶರ್ಮಾ ಚಿತ್ರತಂಡದಿಂದ ಹೊರನಡೆದಿರುವುದು ನಿಜವೇ ಹೌದಾದರೆ ರಿಲೀಸ್​ ದಿನಾಂಕ ಮುಂದೂಡಲ್ಪಡುವ ಸಾಧ್ಯತೆ ಹೆಚ್ಚಿದೆ. ಆಯುಷ್​​ ಶರ್ಮಾ ಬದಲಿಗೆ ಬೇರೆ ಯಾವ ನಟನಿಗೆ ಮಣೆ ಹಾಕಲಾಗುತ್ತದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಆ ಪಾತ್ರಕ್ಕೆ ಹೊಸದಾಗಿ ಶೂಟಿಂಗ್​ ಮಾಡಬೇಕಾದ ಅನಿವಾರ್ಯತೆ ಕೂಡ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ