AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮನ್ನೂ ಸಿಧು ಮೂಸೆವಾಲಾ ರೀತಿ ಕೊಲ್ಲುತ್ತೇವೆ’; ಸಲ್ಮಾನ್​ ಖಾನ್ ತಂದೆಗೆ ಕೊಲೆ ಬೆದರಿಕೆ

‘ಮೂಸೆವಾಲ ರೀತಿಯೇ ನಿಮ್ಮ ಪ್ರಾಣ ಹೋಗಲಿದೆ’ ಎಂದು ಪತ್ರದಲ್ಲಿ ಬೆದರಿಕೆವೊಡ್ಡಲಾಗಿದೆ. ಪಂಜಾಬಿ ಗಾಯಕ, ರಾಜಕಾರಣಿ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

‘ನಿಮ್ಮನ್ನೂ ಸಿಧು ಮೂಸೆವಾಲಾ ರೀತಿ ಕೊಲ್ಲುತ್ತೇವೆ’; ಸಲ್ಮಾನ್​ ಖಾನ್ ತಂದೆಗೆ ಕೊಲೆ ಬೆದರಿಕೆ
TV9 Web
| Edited By: |

Updated on:Jun 05, 2022 | 8:41 PM

Share

ಸಲ್ಮಾನ್ ಖಾನ್ ಅವರು (Salman Khan) ಬಾಲಿವುಡ್​ನ ಬೇಡಿಕೆಯ ನಟ. ಅವರ ಸಿನಿಮಾಗಳು ಕೋಟಿಕೋಟಿ ಬಿಸ್ನೆಸ್ ಮಾಡುತ್ತವೆ. ಇತ್ತೀಚೆಗೆ ಅವರ ಯಾವುದೇ ಸಿನಿಮಾಗಳು ಹಿಟ್ ಆಗಿಲ್ಲ. ಆದಾಗ್ಯೂ, ಅವರ ಬೇಡಿಕೆ ಕಿಂಚಿತ್ತೂ ಕಡಿಮೆ ಆಗಿಲ್ಲ. ದೊಡ್ಡ ದೊಡ್ಡ ನಿರ್ಮಾಪಕರು ಅವರ ಕಾಲ್​ಶೀಟ್ ಪಡೆಯೋಕೆ ಕಾದು ನಿಂತಿದ್ದಾರೆ. ಸ್ಟಾರ್ ಹೀರೊ ಎಂದರೆ ಅವರ ಕುಟುಂಬದವರ ಬಗ್ಗೆಯೂ ಎಲ್ಲರ ದೃಷ್ಟಿ ಇರುತ್ತದೆ. ಈಗ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್​ಗೆ (Salim Khan) ಕೊಲೆ ಬೆದರಿಕೆ ಎದುರಾಗಿದೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

ಮುಂಬೈನ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್ ಬಳಿ ಸಲೀಮ್ ನಿತ್ಯ  ವಾಯುವಿಹಾರಕ್ಕೆ ತೆರಳುತ್ತಾರೆ. ಅವರು ವಿಶ್ರಾಂತಿ ಪಡೆಯುವ ಪ್ರದೇಶದಲ್ಲಿ ಪತ್ರ ಒಂದು ಸಿಕ್ಕಿದೆ. ಇದು ಸಲ್ಮಾನ್ ಖಾನ್ ಹಾಗೂ ತಂದೆ ಸಲೀಮ್ ಖಾನ್​ಗೆ ಬರೆಯಲಾದ ಪತ್ರ. ‘ಮೂಸೆವಾಲ ರೀತಿಯೇ ನಿಮ್ಮ ಪ್ರಾಣ ಹೋಗಲಿದೆ’ ಎಂದು ಪತ್ರದಲ್ಲಿ ಬೆದರಿಕೆವೊಡ್ಡಲಾಗಿದೆ. ಪಂಜಾಬಿ ಗಾಯಕ, ರಾಜಕಾರಣಿ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಸಂಚಲನ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಸಲೀಮ್ ಖಾನ್​ಗೆ ಈ ರೀತಿ ಪತ್ರ ಬಂದಿರುವುದು ಆತಂಕ ಮೂಡಿಸಿದೆ.

ಇದನ್ನೂ ಓದಿ
Image
Janhvi Kapoor: ಪ್ರಕೃತಿಯ ಮಡಿಲಿನಲ್ಲಿ ಜಾನ್ವಿ ಕಪೂರ್ ವಿಹಾರ; ಫೋಟೋಗಳಿಗೆ ಮಸ್ತ್​ ಪೋಸ್​​
Image
Stranger Things 4: ‘ಸ್ಟ್ರೇಂಜರ್​ ಥಿಂಗ್ಸ್​ 4’ನಲ್ಲಿ ಗಾಂಧಿ ಹೆಸರು ಉಲ್ಲೇಖ; ಮುಂದಿನ ಸೀಸನ್​ ಬಗ್ಗೆ ಹೆಚ್ಚಾಯ್ತು ನಿರೀಕ್ಷೆ
Image
3 Idiots: ‘3 ಈಡಿಯಟ್ಸ್​’ ಚಿತ್ರೀಕರಣಗೊಂಡ ಬೆಂಗಳೂರಿನ ಐಐಎಂ ಕ್ಯಾಂಪಸ್​ ಈಗ ಹೇಗಿದೆ? ಇಲ್ಲಿದೆ ನೋಡಿ
Image
World No-Tobacco Day: ವಿಶ್ವ ತಂಬಾಕು ರಹಿತ ದಿನ; ಧೂಮಪಾನ ತ್ಯಜಿಸಿದ ಬಾಲಿವುಡ್​ ತಾರೆಯರು ಇವರೇ ನೋಡಿ

ಈ ಪತ್ರ ಸಲೀಮ್ ಖಾನ್ ಭದ್ರತಾ ಸಿಬ್ಬಂದಿ ಅವರ ಗಮನಕ್ಕೆ ಬಂದಿದೆ. ಅವರು ಇದನ್ನು ತೆಗೆದು ಓದಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಪೊಲೀಸರು  ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್​ಐರ್​ ದಾಖಲು ಮಾಡಿಕೊಂಡಿದ್ದಾರೆ. ಈ ಪತ್ರ ಬರೆದವರು ಯಾರು, ಯಾವ ಉದ್ದೇಶದಿಂದ ಈ ರೀತಿ ಬೆದರಿಕೆ ಒಡ್ಡಲಾಗಿದೆ ಎಂಬುದು ತನಿಖೆ ನಂತರ ತಿಳಿದು ಬರಬೇಕಿದೆ.

ಇದನ್ನೂ ಓದಿ:  ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್​ ಭದ್ರತೆ ಹೆಚ್ಚಳ

ಸಲೀಮ್ ಖಾನ್ ಬಾಲಿವುಡ್​ನಲ್ಲಿ ನಟ, ನಿರ್ಮಾಪಕ, ಚಿತ್ರಕಥೆಗಾರರಾಗಿ ಗುರುತಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್​ಗೆ ಬಾಲಿವುಡ್​ನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ನೆಲೆ ಸಿಗಲು ಸಲೀಮ್ ಅವರ ಪಾತ್ರವೂ ದೊಡ್ಡದಿದೆ ಎಂದರೆ ತಪ್ಪಾಗಲಾರದು. ಈಗ ಸಲೀಮ್​ಗೆ ಕೊಲೆ ಬೆದರಿಕೆ ಬಂದಿರುವುದು ಸಲ್ಲು ಫ್ಯಾನ್ಸ್​​ಗೆ ಆತಂಕ ಮೂಡಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:10 pm, Sun, 5 June 22

ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!