AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IIFA Awards 2022: ‘ವಿಕ್ಕಿ ಕೌಶಲ್, ಕೃತಿ ಸನೋನ್…’; ಪ್ರತಿಷ್ಠಿತ ಐಐಎಫ್​ಎ ಪ್ರಶಸ್ತಿ ವಿಜೇತರು ಯಾರೆಲ್ಲಾ? ವಿವರ ಇಲ್ಲಿದೆ

IIFA Awards Winner List: ಪ್ರತಿಷ್ಠಿತ IIFA 2022ರ ಪ್ರಶಸ್ತಿ ವಿಜೇತರನ್ನು ಶನಿವಾರ ಘೋಷಿಸಲಾಗಿದೆ. ‘ಶೇರ್​​ಷಾ’ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದರೆ, ವಿಕ್ಕಿ ಕೌಶಲ್ ಅತ್ಯುತ್ತಮ ನಟ ಹಾಗೂ ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದಾರೆ. ವಿಜೇತರ ಪಟ್ಟಿ ಇಲ್ಲಿದೆ.

IIFA Awards 2022: ‘ವಿಕ್ಕಿ ಕೌಶಲ್, ಕೃತಿ ಸನೋನ್...’; ಪ್ರತಿಷ್ಠಿತ ಐಐಎಫ್​ಎ ಪ್ರಶಸ್ತಿ ವಿಜೇತರು ಯಾರೆಲ್ಲಾ? ವಿವರ ಇಲ್ಲಿದೆ
IIFA 2022 ವಿಜೇತರು
TV9 Web
| Edited By: |

Updated on: Jun 05, 2022 | 3:25 PM

Share

ಹಿಂದಿ ಚಿತ್ರಗಳಿಗೆ ನೀಡಲಾಗುವ ಪ್ರತಿಷ್ಠಿತ ಇಂಟರ್​ನ್ಯಾಷನಲ್​ ಇಂಡಿಯನ್ ಫಿಲ್ಮ್ ಅಕಾಡೆಮಿಯ 22 ನೇ ವರ್ಷದ ಪ್ರಶಸ್ತಿಗಳನ್ನು (IIFA Awards 2022) ಘೋಷಿಸಲಾಗಿದೆ. ಶುಕ್ರವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ತಾಂತ್ರಿಕ ವಿಭಾಗದ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ಶನಿವಾರ ರಾತ್ರಿ ಇತರ ವಿಭಾಗಗಳ ವಿಜೇತರನ್ನು ಘೋಷಿಸಲಾಗಿದೆ. ಅಬುಧಾಬಿಯಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್​ನ ಪ್ರತಿಷ್ಠಿತ ತಾರೆಗಳು ಭಾಗವಹಿಸಿದ್ದರು. ಕೊವಿಡ್ ಕಾರಣದಿಂದ ಕಳೆದ ಎರಡು ವರ್ಷ ಸಮಾರಂಭ ನಡೆದಿರಲಿಲ್ಲ. ಈ ವರ್ಷ ಮೇ 19-21ರವರೆಗೆ ಸಮಾರಂಭ ನಡೆಯಬೇಕಿತ್ತು. ಆದರೆ ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್​ ಜಯೇದ್ ಅಲ್​ ನ್ಹ್ಯಾನ್​ ನಿಧನ ಹೊಂದಿದ್ದರಿಂದ ಕಾರ್ಯಕ್ರಮ ಮುಂದೂಡಲಾಗಿತ್ತು. ಪ್ರಸ್ತುತ ನಡೆದ ಸಮಾರಂಭದಲ್ಲಿ ಸಲ್ಮಾನ್ ಖಾನ್, ವಿಕ್ಕಿ ಕೌಶಲ್, ಶಾಹಿದ್ ಕಪೂರ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್, ಕೃತಿ ಸನೋನ್, ಅನನ್ಯಾ ಪಾಂಡೆ, ಎಆರ್ ರೆಹಮಾನ್, ಸಾರಾ ಅಲಿ ಖಾನ್, ಟೈಗರ್ ಶ್ರಾಫ್​, ಯೋ ಯೋ ಹನಿ ಸಿಂಗ್ ಮೊದಲಾದವರು ಭಾಗವಹಿಸಿದ್ದರು. ಸಲ್ಮಾನ್ ಖಾನ್, ಮನೀಷ್ ಪೌಲ್ ಹಾಗೂ ರಿತೇಶ್ ದೇಶ್​ಮುಖ್​ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಪ್ರಶಸ್ತಿ ವಿಜೇತರು ಯಾರೆಲ್ಲಾ?:

ಕ್ಯಾಪ್ಟನ್ ವಿಕ್ರಮ್​ ಬಾತ್ರಾರ ಜೀವನ ಆಧರಿಸಿದ ‘ಶೇರ್​ಷಾ’ ಚಿತ್ರ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಗೆದ್ದುಕೊಂಡಿತು. ಈ ಚಿತ್ರಕ್ಕಾಗಿ ವಿಷ್ಣು ವರ್ಧನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗೆದ್ದರು. ವಿಕ್ಕಿ ಕೌಶಲ್ ‘ಸರ್ದಾರ್ ಉಧಮ್ ಸಿಂಗ್’ ಚಿತ್ರಕ್ಕಾಗಿ ಪ್ರಶಸ್ತಿ ಗೆದ್ದರೆ, ‘ಮಿಮಿ’ ಚಿತ್ರಕ್ಕಾಗಿ ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.

ಇತರ ಪ್ರಶಸ್ತಿಗಳ ವಿಜೇತರ ವಿವರ ಇಲ್ಲಿದೆ:

– ಅತ್ಯುತ್ತಮ ಪೋಷಕ ಪಾತ್ರ (ಮಹಿಳೆ): ಸಾಯಿ ತಮ್ಹಂಕರ್ (ಮಿಮಿ)

– ಅತ್ಯುತ್ತಮ ಪೋಷಕ ಪಾತ್ರ (ಪುರುಷ): ಪಂಕಜ್ ತ್ರಿಪಾಠಿ (ಲುಡೋ)

– ಸಂಗೀತ ನಿರ್ದೇಶನ: ‘ಅತರಂಗಿ ರೇ’ ಚಿತ್ರಕ್ಕಾಗಿ ಎ.ಆರ್. ರೆಹಮಾನ್ ಹಾಗೂ ‘ಶೇರ್​ಷಾ’ ಚಿತ್ರಕ್ಕಾಗಿ ತನಿಷ್ಕ್ ಬಾಗ್ಚಿ, ಜಸ್ಲೀನ್ ರಾಯಲ್, ಜಾವೇದ್-ಮೊಹ್ಸಿನ್, ವಿಕ್ರಮ್ ಮಾಂಟ್ರೋಸ್, ಬಿ ಪ್ರಾಕ್, ಜಾನಿ ಪ್ರಶಸ್ತಿ ಹಂಚಿಕೊಂಡಿದ್ದಾರೆ.

– ಹಿನ್ನೆಲೆ ಗಾಯಕಿ (ಮಹಿಳೆ): ಅಸೀಸ್ ಕೌರ್; ‘ಶೇರ್​ಷಾ’ದ ರಾತನ್ ಲಂಬಿಯಾನ್ ಹಾಡಿಗಾಗಿ

– ಹಿನ್ನೆಲೆ ಗಾಯಕ (ಪುರುಷ): ಜುಬಿನ್ ನೌಟಿಯಲ್; ‘ಶೇರ್​ಷಾ’ದ ರಾತನ್ ಲಂಬಿಯಾನ್ ಹಾಡಿಗಾಗಿ

– ಅತ್ಯುತ್ತಮ ಕಥೆ (ಮೂಲ): ಅನುರಾಗ್ ಬಸು (ಲುಡೋ)

– ಅತ್ಯುತ್ತಮ ಕಥೆ (ಅಳವಡಿಕೆ): ಕಬೀರ್ ಖಾನ್, ಸಂಜಯ್ ಪುರಾನ್ ಸಿಂಗ್ ಚೌಹಾಣ್ (83 ಚಿತ್ರ)

– ಸಾಹಿತ್ಯ: ಲೆಹ್ರಾ ದೋಗಾಗಿ ಕೌಸರ್ ಮುನೀರ್ (83)

– ಸಾಹಿತ್ಯ: 83 ಚಿತ್ರದ ‘ಲೆಹ್ರಾ ದೋ’ಗಾಗಿ ಕೌಸರ್ ಮುನೀರ್

– ಪದಾರ್ಪಣೆ ಚಿತ್ರದಲ್ಲಿ ಅತ್ಯುತ್ತಮ ಅಭಿನಯ (ಮಹಿಳೆ): ಶಾರ್ವರಿ ವಾಘ್ (ಬಂಟಿ ಔರ್ ಬಬ್ಲಿ 2)

– ಪದಾರ್ಪಣೆ ಚಿತ್ರದಲ್ಲಿ ಅತ್ಯುತ್ತಮ ಅಭಿನಯ (ಪುರುಷ): ಅಹಾನ್ ಶೆಟ್ಟಿ (ತಡಪ್ 2)

ಮತ್ತಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More