- Kannada News Photo gallery Sai Pallavi plays two shade character in Virata Parvam Telugu movie with Rana Daggubati
ಎರಡು ಶೇಡ್ ಪಾತ್ರದಲ್ಲಿ ಸಾಯಿ ಪಲ್ಲವಿ; ನಿರೀಕ್ಷೆ ಮೂಡಿಸಿದ ‘ವಿರಾಟ ಪರ್ವಂ’ ಸಿನಿಮಾ
Sai Pallavi Photos: ಒಂದು ಶೇಡ್ನಲ್ಲಿ ಹಳ್ಳಿ ಹುಡುಗಿಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಾರೆ. ಮತ್ತೊಂದು ಶೇಡ್ನಲ್ಲಿ ನಕ್ಸಲೈಟ್ ಆಗಿ ಪ್ರೇಕ್ಷಕರ ಎದುರು ಬರಲಿದ್ದಾರೆ.
Updated on: Jun 07, 2022 | 7:30 AM

Sai Pallavi plays two shade character in Virata Parvam Telugu movie with Rana Daggubati

Sai Pallavi plays two shade character in Virata Parvam Telugu movie with Rana Daggubati

ಜೂನ್ 17ರಂದು ‘ವಿರಾಟ ಪರ್ವಂ’ ಸಿನಿಮಾ ಬಿಡುಗಡೆ ಆಗಲಿದೆ. ಸದ್ಯಕ್ಕೆ ಟ್ರೇಲರ್ ಬಿಡುಗಡೆ ಆಗಿದ್ದು, ಜನಮೆಚ್ಚುಗೆ ಗಳಿಸುತ್ತಿದೆ. ಸತ್ಯ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಹಾಗಾಗಿ ಸಿನಿಪ್ರಿಯರ ನಿರೀಕ್ಷೆ ಹೆಚ್ಚಿದೆ.

‘ವಿರಾಟ ಪರ್ವಂ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರಿಗೆ ಜೋಡಿಯಾಗಿ ಸ್ಟಾರ್ ನಟ ರಾಣಾ ದಗ್ಗುಬಾಟಿ ಅಭಿನಯಿಸಿದ್ದಾರೆ. ಟ್ರೇಲರ್ನಲ್ಲಿ ಇಬ್ಬರ ಪಾತ್ರಗಳೂ ಹೈಲೈಟ್ ಆಗಿವೆ. ಸಾಯಿ ಪಲ್ಲವಿ ಪಾತ್ರಕ್ಕೆ ಸ್ಕೋಪ್ ಇದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷಿ ಸಿಕ್ಕಿದೆ.

ಸಾಯಿ ಪಲ್ಲವಿ ಮಾತ್ರವಲ್ಲದೇ ಅನೇಕ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಂದಿತಾ ದಾಸ್, ಪ್ರಿಯಾಮಣಿ, ಈಶ್ವರಿ ರಾವ್ ಮುಂತಾದ ಕಲಾವಿದರ ಸಂಗಮದಿಂದಾಗಿ ‘ವಿರಾಟ ಪರ್ವಂ’ ಮೆರುಗು ಹೆಚ್ಚಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.




