Sai Pallavi: ಥಿಯೇಟರ್ಗೆ ಜನರನ್ನು ಕರೆಸುವಲ್ಲಿ ಸೋತ ಸಾಯಿ ಪಲ್ಲವಿ; ‘ಲೇಡಿ ಪವರ್ ಸ್ಟಾರ್’ ಬಿರುದು ಈಗೇನಾಯ್ತು?
Virata Parvam: ದೊಡ್ಡ ಅಭಿಮಾನಿ ಬಳಗ ಹೊಂದಿದ್ದರೂ ಕೂಡ ಸಾಯಿ ಪಲ್ಲವಿ ನಟನೆಯ ‘ವಿರಾಟ ಪರ್ವಂ’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಕುಂಟುತ್ತಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಚಿತ್ರತಂಡ ಪತ್ತೆ ಹಚ್ಚಬೇಕಿದೆ.
ತೆಲುಗಿನ ‘ವಿರಾಟ ಪರ್ವಂ’ (Virata Parvam) ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡಲಿದೆ ಎಂದೇ ಊಹಿಸಲಾಗಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಜೂನ್ 17ರಂದು ಈ ಸಿನಿಮಾ ಬಿಡುಗಡೆ ಆಯಿತು. ಸಾಯಿ ಪಲ್ಲವಿ ಮತ್ತು ರಾಣಾ ದಗ್ಗುಬಾಟಿ (Rana Daggubati) ಈ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಟಾಲಿವುಡ್ನಲ್ಲಿ ಸ್ಟಾರ್ ಕಲಾವಿದರಾದ ಇವರಿಬ್ಬರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಿದ್ದರೂ ಕೂಡ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ‘ವಿರಾಟ ಪರ್ವಂ’ ಸಿನಿಮಾ ವಿಫಲವಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಈ ಚಿತ್ರಕ್ಕೆ ಗೆಲುವು ಸಿಕ್ಕಿಲ್ಲ. ಕರ್ನಾಟಕದಲ್ಲೂ ಈ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೆಲ್ಲದಕ್ಕೂ ಸಾಯಿ ಪಲ್ಲವಿ (Sai Pallavi) ಅವರ ಹೇಳಿಕೆಯಿಂದ ಆದ ವಿವಾದವೇ ಕಾರಣ ಇರಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ.
ಸಾಯಿ ಪಲ್ಲವಿ ಸಿನಿಮಾ ಎಂದರೆ ಒಂದಷ್ಟು ಸಂಖ್ಯೆಯ ಪ್ರೇಕ್ಷಕರು ಖಂಡಿತವಾಗಿಯೂ ಚಿತ್ರಮಂದಿರಕ್ಕೆ ಬರುತ್ತಾರೆ. ಈ ಹಿಂದೆ ತೆರೆಕಂಡ ‘ಲವ್ ಸ್ಟೋರಿ’ ಸಿನಿಮಾ ಹಿಟ್ ಆಗಿತ್ತು. ಆದರೆ ಈ ಬಾರಿ ‘ವಿರಾಟ ಪರ್ವಂ’ ನೋಡಲು ಜನರು ಯಾಕೋ ಹಿಂದೇಟು ಹಾಕುತ್ತಿದ್ದಾರೆ. ನಟ ರಾಣಾ ದಗ್ಗುಬಾಟಿ ಅವರಿಗೂ ಇದರಿಂದ ಹಿನ್ನಡೆ ಆಗಿದೆ. ಹೈದರಾಬಾದ್ನಲ್ಲಿ ಬಹುತೇಕ ಶೋಗಳು ಖಾಲಿ ಹೊಡೆಯುತ್ತಿವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಈ ಸಿನಿಮಾ ಹೀನಾಯವಾಗಿ ಸೋತಂತೆ ಆಗುತ್ತದೆ.
ನಡೆಯಲಿಲ್ಲ ‘ಲೇಡಿ ಪವರ್ ಸ್ಟಾರ್’ ಮ್ಯಾಜಿಕ್:
ಸಾಯಿ ಪಲ್ಲವಿ ಅವರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಆ ಕಾರಣಕ್ಕಾಗಿ ಅವರನ್ನು ‘ಲೇಡಿ ಪವರ್ ಸ್ಟಾರ್’ ಎಂದು ಕರೆಯಲಾಗುತ್ತಿದೆ. ಮುಂಬರುವ ಸಿನಿಮಾಗಳ ಟೈಟಲ್ ಕಾರ್ಡ್ನಲ್ಲಿಯೂ ಅವರ ಹೆಸರಿನ ಜೊತೆ ಈ ಬಿರುದು ಇರಲಿದೆ ಎನ್ನಲಾಗುತ್ತಿದೆ. ಅಷ್ಟೆಲ್ಲಾ ಅಭಿಮಾನಿಗಳನ್ನು ಹೊಂದಿದ್ದರೂ ಕೂಡ ಸಾಯಿ ಪಲ್ಲವಿ ನಟನೆಯ ‘ವಿರಾಟ ಪರ್ವಂ’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಕುಂಟುತ್ತಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಚಿತ್ರತಂಡ ಪತ್ತೆ ಹಚ್ಚಬೇಕಿದೆ.
ಇದನ್ನೂ ಓದಿ: Sai Pallavi: ಸಾಯಿ ಪಲ್ಲವಿ ವಿವಾದದ ಬಳಿಕ ‘ವಿರಾಟ ಪರ್ವಂ’ ಚಿತ್ರಕ್ಕೆ ಜನರು ನೀಡಿದ ರೇಟಿಂಗ್ ಎಷ್ಟು?
ನೈಜ ಘಟನೆಗಳನ್ನು ಆಧರಿಸಿ ‘ವಿರಾಟ ಪರ್ವಂ’ ಸಿನಿಮಾ ಸಿದ್ಧಗೊಂಡಿದೆ. ನಕ್ಸಲ್ ನಾಯಕನ ಪಾತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸಿದ್ದಾರೆ. ಪ್ರಿಯಾಮಣಿ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೇಣು ಉಡುಗುಲ ಅವರ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:55 am, Mon, 20 June 22