‘ನಾವು ಬೇರೆ ಭಾಷೆಯಲ್ಲಿ ಮಾತಾಡ್ತೀವಿ, ಅದು ಯಾವುದು ಅಂತ ಈಗ ಬೇಡ’: ವೇದಿಕೆಯಲ್ಲಿ ಶಿವಣ್ಣ ಮನದ ಮಾತು
‘ತ್ರಿವಿಕ್ರಮ’ ಸಿನಿಮಾದ ಹೀರೋ ವಿಕ್ರಮ್ ರವಿಚಂದ್ರನ್ ಬಗ್ಗೆ ಶಿವರಾಜ್ಕುಮಾರ್ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಆ ವಿಡಿಯೋ ಇಲ್ಲಿದೆ..
‘ಕ್ರೇಜಿ ಸ್ಟಾರ್’ ರವಿಚಂದ್ರನ್ (Ravichandran) ಪುತ್ರ ವಿಕ್ರಮ್ ರವಿಚಂದ್ರನ್ ನಟನೆಯ ‘ತ್ರಿವಿಕ್ರಮ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರಕ್ಕೆ ಅದ್ದೂರಿ ಪ್ರೀ-ರಿಲೀಸ್ ಇವೆಂಟ್ ಮಾಡಲಾಗಿದೆ. ಭಾನುವಾರ (ಜೂನ್ 19) ಸಂಜೆ ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಶಿವರಾಜ್ಕುಮಾರ್ (Shivarajkumar) ಅತಿಥಿಯಾಗಿ ಬಂದಿದ್ದರು. ಈ ವೇಳೆ ಅವರು ರವಿಚಂದ್ರನ್ ಮಕ್ಕಳ ಬಗ್ಗೆ ಮನಸಾರೆ ಮಾತನಾಡಿದರು. ಕೆಲವೇ ದಿನಗಳ ಹಿಂದೆ ವಿಕ್ರಮ್ ರವಿಚಂದ್ರನ್ (Vikram Ravichandran) ಅವರು ಕರೆ ಮಾಡಿದ್ದರ ಬಗ್ಗೆಯೂ ಅವರು ವಿವರ ನೀಡಿದರು. ‘ವಿಕ್ಕಿ ಅಂದು ಫೋನ್ ಮಾಡಿದ್ದ. ಸಾಮಾನ್ಯವಾಗಿ ನಾವು ಬೇರೆ ಭಾಷೆಯಲ್ಲಿ ಮಾತಾಡ್ತೀವಿ. ಅದು ಯಾವ ಭಾಷೆ ಅಂತ ಇವಾಗ ಹೇಳೋದು ಬೇಡ’ ಎಂದು ಗುಟ್ಟು ಕಾಯ್ದುಕೊಂಡರು ಶಿವಣ್ಣ. ‘ವಿಕ್ಕಿಯ ಡ್ಯಾನ್ಸ್ ನೋಡಿ ನನಗೆ ನನ್ನ ತಮ್ಮ ಅಪ್ಪು ನೋಡಿದಂತೆ ಆಯ್ತು’ ಎಂದು ಕೂಡ ಅವರು ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Jun 20, 2022 10:15 AM
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ

