AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ಕೆಲಸದ ಮೇಲೆ ಗಮನಹರಿಸಿ’; ನಾಗ ಚೈತನ್ಯ ಫ್ಯಾನ್ಸ್​​ಗೆ ಎಚ್ಚರಿಕೆ ನೀಡಿದ ಸಮಂತಾ

ಟಾಲಿವುಡ್ ನಟಿ ಶೋಭಿತಾ ಧುಲಿಪಾಲ ಜತೆ ನಾಗ ಚೈತನ್ಯ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ವಿಚಾರದಲ್ಲಿ ಅನಗತ್ಯವಾಗಿ ಸಮಂತಾ ಅವರನ್ನು ಎಳೆದು ತಂದಿದ್ದೆ ನಾಗ ಚೈತನ್ಯ ಫ್ಯಾನ್ಸ್.

‘ನಿಮ್ಮ ಕೆಲಸದ ಮೇಲೆ ಗಮನಹರಿಸಿ’; ನಾಗ ಚೈತನ್ಯ ಫ್ಯಾನ್ಸ್​​ಗೆ ಎಚ್ಚರಿಕೆ ನೀಡಿದ ಸಮಂತಾ
ಸಮಂತಾ-ನಾಗ ಚೈತನ್ಯ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Jun 21, 2022 | 12:01 PM

Share

ಸಮಂತಾ (Samantha) ವಿಚ್ಛೇದನ ಪಡೆದು ವರ್ಷ ಆಗುತ್ತಾ ಬಂದಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸಮಂತಾ ಹಾಗೂ ನಾಗ ಚೈತನ್ಯ (Naga Chaitanya) ವಿಚ್ಛೇದನ ಪಡೆದು ದೂರವಾದರು. ಈಗ ಇಬ್ಬರೂ ತಮ್ಮದೇ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಆದರೆ, ಕೆಲವರು ಸುಮ್ಮನೆ ಕೂತಿಲ್ಲ. ಈ ಮಾಜಿ ದಂಪತಿ ಬಗ್ಗೆ ಒಂದಲ್ಲಾ ಒಂದು ವದಂತಿ ಹಬ್ಬಿಸುತ್ತಲೇ ಬಂದಿದ್ದಾರೆ. ಇವರೆಲ್ಲರಿಗೂ ಸಮಂತಾ ಈಗ ತಿರುಗೇಟು ನೀಡಿದ್ದಾರೆ. ಕಟು ಮಾತುಗಳಿಂದ ಎಲ್ಲರಿಗೂ ತಿವಿದಿದ್ದಾರೆ. ಅವರು ಮಾಡಿರುವ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದೆ.

ಟಾಲಿವುಡ್ ನಟಿ ಶೋಭಿತಾ ಧುಲಿಪಾಲ ಜತೆ ನಾಗ ಚೈತನ್ಯ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ವಿಚಾರದಲ್ಲಿ ಅನಗತ್ಯವಾಗಿ ಸಮಂತಾ ಅವರನ್ನು ಎಳೆದು ತಂದಿದ್ದೆ ನಾಗ ಚೈತನ್ಯ ಫ್ಯಾನ್ಸ್. ಸಮಂತಾ ಕಡೆಯವರು ಈ ರೀತಿ ವದಂತಿ ಹಬ್ಬಿಸಿದ್ದು ಎಂದು ನಾಗ ಚೈತನ್ಯ ಫ್ಯಾನ್ಸ್ ಆರೋಪಿಸಿದ ಬಗ್ಗೆ ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಸಮಂತಾ ಸಿಟ್ಟಾಗಿದ್ದಾರೆ. ನೇರ ಮಾತುಗಳಿಂದ ಇದಕ್ಕೆ ಉತ್ತರ ನೀಡಿದ್ದಾರೆ.

ಇದನ್ನೂ ಓದಿ
Image
ಟಾಲಿವುಡ್​ ನಟಿಯ ಜತೆ ನಾಗ ಚೈತನ್ಯ ಕದ್ದುಮುಚ್ಚಿ ಓಡಾಟ? ಐಷಾರಾಮಿ ಹೋಟೆಲ್​ನಲ್ಲಿ ಆಗುತ್ತಿತ್ತು ಭೇಟಿ
Image
‘ಸಮಂತಾ ಆಂಟಿ ನನ್ನ ಬೆಸ್ಟ್​ ಫ್ರೆಂಡ್​’ ಎಂದ ಮಹೇಶ್​ ಬಾಬು ಪುತ್ರಿ ಸಿತಾರಾ; ವಿಡಿಯೋ ವೈರಲ್​
Image
Happy Birthday Samantha: ಅಭಿಮಾನಿಗಳು ಸಮಂತಾಗೆ ಫಿದಾ ಆಗಲು ಈ ಚಿತ್ರಗಳೇ ಕಾರಣ..
Image
Samantha: ಸಮಂತಾ ಸ್ಟೈಲ್​ಗಿಲ್ಲ ಸರಿಸಾಟಿ; ಬಗೆಬಗೆಯ ಫ್ಯಾಶನ್ ಅವತಾರದಲ್ಲಿ ಮಿಂಚುವ ನಟಿ- ಫೋಟೋಗಳು ಇಲ್ಲಿವೆ

‘ಹೆಣ್ಣು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಅದು ನಿಜ ಎನ್ನುತ್ತೀರಿ. ಗಂಡು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಇದು ಹೆಣ್ಣಿನ ಕೆಲಸ ಎನ್ನುತ್ತೀರಿ, ಸ್ವಲ್ಪ ಪ್ರಬುದ್ಧರಾಗಿ. ಇದರಲ್ಲಿ ಭಾಗಿಯಾದವರೇ ಎಲ್ಲವನ್ನೂ ಬಿಟ್ಟು ಮುಂದೆ ಸಾಗಿದ್ದಾರೆ. ನೀವೂ ಇದನ್ನು ಬಿಟ್ಟು ಮುಂದೆ ಸಾಗಿ. ನಿಮ್ಮ ಕೆಲಸ ನೋಡಿಕೊಳ್ಳಿ. ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ’ ಎಂದು ಸಮಂತಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?

ನಾಗ ಚೈತನ್ಯ ಅವರು ಟಾಲಿವುಡ್​ನ ಖ್ಯಾತ ನಟರಲ್ಲಿ ಒಬ್ಬರು. ಅವರು ಮತ್ತೊಂದು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಈ ಮೊದಲೇ ಹುಟ್ಟಿಕೊಂಡಿತ್ತು. ಆದರೆ, ಆ ಬಗ್ಗೆ ಅಕ್ಕಿನೇನಿ ಕುಟುಂಬದ ಯಾರೊಬ್ಬರೂ ಮೌನ ಮುರಿದಿಲ್ಲ. ಹೀಗಿರುವಾಗಲೇ ನಾಗ ಚೈತನ್ಯ ಬಗ್ಗೆ ಹೊಸಹೊಸ ವದಂತಿಗಳು ಹುಟ್ಟಿಕೊಳ್ಳುತ್ತಿವೆ. ಮದುವೆಗೂ ಮೊದಲು ಸಮಂತಾ ಹಾಗೂ ನಾಗ ಚೈತನ್ಯ ಡೇಟಿಂಗ್ ಮಾಡುತ್ತಿದ್ದರು. ಈ ವಿಚಾರದಲ್ಲಿ ಇಬ್ಬರೂ ರಹಸ್ಯ ಕಾಯ್ದುಕೊಂಡಿದ್ದರು. ನಂತರ ಇವರು ಮದುವೆ ಆದರು. ನಾಲ್ಕು ವರ್ಷ ಸಂಸಾರ ನಡೆಸಿದ ಈ ದಂಪತಿ ಈಗ ಬೇರೆ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:28 am, Tue, 21 June 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ