ಯೋಗ ಎಂದರೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದಲ್ಲ, ಅದು ದೇಹಕ್ಕೆ ಸಂಬಂಧಿಸಿದ್ದು ಎಂದ ಜಗ್ಗೇಶ್
ಯೋಗ, ಭಗವದ್ಗೀತೆ ಎಂದರೆ ಹಿಂದೂಯಿಸಂ ಅಂದುಕೊಂಡಿದ್ದಾರೆ. ಆದರೆ, ಯೋಗ ಎಂದರೆ ಅದು ದೇಹಕ್ಕೆ ಸಂಬಂಧಿಸಿದ್ದು ಎಂದರು ಜಗ್ಗೇಶ್.
ಇಂದು (ಜೂನ್ 21) ವಿಶ್ವ ಯೋಗ ದಿನಾಚರಣೆ (International Yoga Day). ಈ ವಿಶೇಷ ದಿನದಂದು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ಅವರು ಯೋಗದ ಬಗ್ಗೆ ಮಾತನಾಡಿದ್ದಾರೆ. ‘ನಾನು ಇವತ್ತು ಮೇಕಪ್ ಹಾಕಿಕೊಂಡರೆ 30 ವರ್ಷದವನ ತರಹ ಕಾಣಿಸುತ್ತೀನಿ. ಇದಕ್ಕೆ ಕಾರಣ ಯೋಗ. ಯೋಗ, ಭಗವದ್ಗೀತೆ ಎಂದರೆ ಹಿಂದೂಯಿಸಂ ಅಂದುಕೊಂಡಿದ್ದಾರೆ. ಆದರೆ, ಯೋಗ ಎಂದರೆ ಅದು ದೇಹಕ್ಕೆ ಸಂಬಂಧಿಸಿದ್ದು. ನಾನು ಬೆಳಗ್ಗೆ ಎದ್ದರೆ ಆಸನಗಳು ಮತ್ತು ಪ್ರಾಣಾಯಾಮ ಮಾಡಿಯೇ ವಾಕಿಂಗ್ ಮಾಡೋದು. ಈ ಯೋಗ ದಿನಾಚರಣೆಯನ್ನು ಒಂದು ದಿನಕ್ಕೆ ಮಾತ್ರ ಸೀಮಿತ ಮಾಡಬೇಡಿ. ನಿತ್ಯವೂ ಯೋಗ ಮಾಡಿ. ಯಾವ ಮನುಷ್ಯ ಯೋಗವನ್ನು ಪ್ರ್ಯಾಕ್ಟೀಸ್ ಮಾಡುತ್ತಾನೋ ಅವನು ತುಂಬಾ ಶಾಂತಚಿತ್ತನಾಗಿರುತ್ತಾನೆ. ಯೋಗ ಅಭ್ಯಾಸದಿಂದ ಒಳಗಡೆ ಜ್ಞಾನ ಹೆಚ್ಚಾಗುತ್ತದೆ’ ಎಂದಿದ್ದಾರೆ ಜಗ್ಗೇಶ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.