ಯೋಗದ ವಿಚಾರದಲ್ಲಿ ಹಲವರಿಗೆ ಮಾದರಿ ಡಾ.ರಾಜ್ಕುಮಾರ್; ಇಲ್ಲಿದೆ ವಿಡಿಯೋ
ನಟ ಡಾ. ರಾಜ್ಕುಮಾರ್ ಕೂಡ ಯೋಗವನ್ನು ಕಲಿತಿದ್ದರು. ಅವರು ಯೋಗದ ಹಲವು ಭಂಗಿಗಳನ್ನು ಅನಾಯಾಸವಾಗಿ ಮಾಡುತ್ತಿದ್ದರು
ಇಂದು (ಜೂನ್ 21) ವಿಶ್ವ ಯೋಗ ದಿನಾಚರಣೆ (International Yoga Day). ದೇಶದ ನಾನಾ ಭಾಗಗಳಲ್ಲಿ ಯೋಗವನ್ನು ಆಚರಿಸಲಾಗುತ್ತಿದೆ. ಯೋಗ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಬಂದು ಯೋಗ ಮಾಡಿದ್ದಾರೆ. ಮೋದಿಗೆ ಸಾವಿರಾರು ಜನರು ಸಾತ್ ನೀಡಿದ್ದಾರೆ. ನಟ ಡಾ. ರಾಜ್ಕುಮಾರ್ (Dr. Rajkumar) ಕೂಡ ಯೋಗವನ್ನು ಕಲಿತಿದ್ದರು. ಅವರು ಯೋಗದ ಹಲವು ಭಂಗಿಗಳನ್ನು ಅನಾಯಾಸವಾಗಿ ಮಾಡುತ್ತಿದ್ದರು. ರಾಜ್ಕುಮಾರ್ ಯೋಗ ಮಾಡುತ್ತಿರುವ ಹಳೆಯ ವಿಡಿಯೋ ಈಗ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ರಾಜ್ಕುಮಾರ್ ಅವರು ಸಿನಿಮಾದಲ್ಲಿ ಹಲವು ಆದರ್ಶಗಳನ್ನು ನೀಡಿದ್ದಾರೆ. ಇದರ ಜತೆಗೆ ನಿಜ ಜೀವನದಲ್ಲೂ ಅವರು ಎಲ್ಲರಿಗೂ ಮಾದರಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Jun 21, 2022 08:41 AM
Latest Videos