Sukumar: ‘ಪುಷ್ಪ’ ನೋಡಿ ಸುಕುಮಾರ್​ಗೆ ಮೆಸೇಜ್​ ಮಾಡಿದ ‘3 ಈಡಿಯಟ್ಸ್​’ ನಿರ್ದೇಶಕ ರಾಜ್​ಕುಮಾರ್​ ಹಿರಾನಿ

Rajkumar Hirani | Sukumar: ಸುಕುಮಾರ್​ ಅವರ ಪ್ರತಿಭೆಯನ್ನು ರಾಜ್​ಕುಮಾರ್​ ಹಿರಾನಿ ಕೊಂಡಾಡಿದ್ದಾರೆ. ಇಬ್ಬರ ನಡುವಿನ ಮೆಸೇಜ್​ಗಳ ಸ್ಕ್ರೀನ್​ ಶಾಟ್​ ವೈರಲ್​ ಆಗಿದೆ.

Sukumar: ‘ಪುಷ್ಪ’ ನೋಡಿ ಸುಕುಮಾರ್​ಗೆ ಮೆಸೇಜ್​ ಮಾಡಿದ ‘3 ಈಡಿಯಟ್ಸ್​’ ನಿರ್ದೇಶಕ ರಾಜ್​ಕುಮಾರ್​ ಹಿರಾನಿ
ರಾಜ್​ಕುಮಾರ್​ ಹಿರಾನಿ, ಸುಕುಮಾರ್​, ಅಲ್ಲು ಅರ್ಜುನ್​
Follow us
TV9 Web
| Updated By: ಮದನ್​ ಕುಮಾರ್​

Updated on:Jun 11, 2022 | 11:49 AM

ದಕ್ಷಿಣದ ಸಿನಿಮಾಗಳ ಭರ್ಜರಿ ಗೆಲುವನ್ನು ಕಂಡು ಉತ್ತರ ಭಾರತದ ಮಂದಿ ಬೆರಗಾಗಿದ್ದಾರೆ. ‘ಪುಷ್ಪ’ (Pushpa Movie), ‘ಕೆಜಿಎಫ್​: ಚಾಪ್ಟರ್​ 2’, ‘ಆರ್​ಆರ್​ಆರ್​’, ‘777 ಚಾರ್ಲಿ’ ರೀತಿಯ ಸಿನಿಮಾಗಳು ಹಿಂದಿ ಭಾಷೆಯ ಪ್ರೇಕ್ಷಕರ ಮನ ಗೆದ್ದಿವೆ. ಬಾಲಿವುಡ್​ ಸೆಲೆಬ್ರಿಟಿಗಳು ಕೂಡ ಈ ಚಿತ್ರಗಳಿಗೆ ಫಿದಾ ಆಗಿದ್ದಾರೆ. ಈಗಾಗಲೇ ಹಿಂದಿ ಚಿತ್ರರಂಗದ ಅನೇಕ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ದಕ್ಷಿಣದ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಈಗಿನದ್ದು ‘3 ಈಡಿಯಟ್ಸ್​’ ಖ್ಯಾತಿಯ ನಿರ್ದೇಶಕ ರಾಜ್​ಕುಮಾರ್​ ಹಿರಾನಿ (Rajkumar Hirani) ಅವರ ಸರದಿ. ರಾಜ್​ಕುಮಾರ್​ ಹಿರಾನಿ ಅವರಿಗೆ ‘ಪುಷ್ಪ’ ಸಿನಿಮಾ ಸಖತ್​ ಇಷ್ಟ ಆಗಿದೆ. ಸಿನಿಮಾ ನೋಡಿ ಮೆಚ್ಚಿಕೊಂಡಿರುವ ಅವರು ನಿರ್ದೇಶಕ ಸುಕುಮಾರ್​ಗೆ ಮೆಸೇಜ್​ ಮಾಡಿದ್ದಾರೆ. ಯಶಸ್ವಿ ನಿರ್ದೇಶಕನಿಂದ ಬಂದ ಈ ಮೆಸೇಜ್​ ಕಂಡು ಸುಕುಮಾರ್ (Sukumar)​ ತುಂಬ ಖುಷಿಪಟ್ಟಿದ್ದಾರೆ. ಸದ್ಯ ಇವರಿಬ್ಬರ ಮೆಸೇಜ್​ ಸಂಭಾಷಣೆಯ ಸ್ಕ್ರೀನ್​ ಶಾಟ್​ ವೈರಲ್​ ಆಗಿದೆ.

‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ್ದಾರೆ. ಫಹಾದ್​ ಫಾಸಿಲ್​, ಡಾಲಿ ಧನಂಜಯ ಅವರಂತಹ ಪ್ರತಿಭಾವಂತ ಕಲಾವಿದರಿಂದಾಗಿ ಚಿತ್ರದ ಮೆರುಗು ಹೆಚ್ಚಿದೆ. ಹಿಂದಿ ಬಾಕ್ಸ್​ ಆಫೀಸ್​ನಲ್ಲಿ ನೂರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದ್ದು ಈ ಸಿನಿಮಾದ ಹೆಚ್ಚುಗಾರಿಕೆ. ಈ ಸಿನಿಮಾ ನೋಡಿದ ಬಳಿಕ ರಾಜ್​ಕುಮಾರ್​ ಹಿರಾನಿ ಅವರು ಮೆಸೇಜ್​ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
3 Idiots: ‘3 ಈಡಿಯಟ್ಸ್​’ ಚಿತ್ರೀಕರಣಗೊಂಡ ಬೆಂಗಳೂರಿನ ಐಐಎಂ ಕ್ಯಾಂಪಸ್​ ಈಗ ಹೇಗಿದೆ? ಇಲ್ಲಿದೆ ನೋಡಿ
Image
ಶಾರುಖ್ ಖಾನ್​ಗೆ ಇದೆ ವಿಚಿತ್ರ ಹವ್ಯಾಸ; ಇದಕ್ಕಾಗಿ ಅವರು ಖರ್ಚು ಮಾಡಿದ್ದು 40 ಲಕ್ಷ ರೂಪಾಯಿ
Image
‘ಡಂಕಿ’ ಸಿನಿಮಾದ ಫೋಟೋ ಲೀಕ್; 40ರ ಹರೆಯದವರಂತೆ ಕಂಡ ಶಾರುಖ್ ಖಾನ್
Image
ಶಾರುಖ್-ಹಿರಾನಿ ಸಿನಿಮಾದಲ್ಲಿ ಹಲವು ಸ್ಟಾರ್​ಗಳು; ‘ಓಂ ಶಾಂತಿ ಓಂ’ ನೆನಪಿಸಿದ ಹೊಸ ಚಿತ್ರ

ಇದನ್ನೂ ಓದಿ: 150 ಕೋಟಿ ರೂ. ಬಾಚಿದ ‘ಭೂಲ್​ ಭುಲಯ್ಯ 2’; ಬಾಲಿವುಡ್​ ಗುಂಪುಗಾರಿಕೆಗೆ ತಕ್ಕ ಉತ್ತರ ನೀಡಿದ ನಟ

‘ಗುಡ್​ ಮಾರ್ನಿಂಗ್​ ಸುಕುಮಾರ್​ ಅವರೇ.. ನಾನು ರಾಜು ಹಿರಾನಿ. ಪುಷ್ಪ ಸಿನಿಮಾ ನೋಡಿದೆ. ತುಂಬ ಹಿಂದೆಯೇ ನಾನು ನಿಮಗೆ ಮೆಸೇಜ್​ ಮಾಡಬೇಕಿತ್ತು. ಆದರೆ ನಿಮ್ಮ ನಂಬರ್​ ಇರಲಿಲ್ಲ. ನಿನ್ನೆ ಮಹಾವೀರ್​ ಜೈನ್​ ಅವರನ್ನು ಭೇಟಿಯಾದಾಗ ನಿಮ್ಮ ಬಗ್ಗೆ ಮಾತನಾಡುತ್ತಿದ್ದೆವು. ಆಗ ನಿಮ್ಮ ನಂಬರ್​ ಸಿಕ್ತು’ ಎಂದು ರಾಜ್​ಕುಮಾರ್​ ಹಿರಾನಿ ಅವರು ಮೆಸೇಜ್​ನಲ್ಲಿ ಮಾತು ಶುರು ಮಾಡಿದ್ದಾರೆ.

ಇದನ್ನೂ ಓದಿ: ಹಾಲಿವುಡ್​ನ ಚಾಕೊಲೇಟ್​ ತಂದು ಬಾಲಿವುಡ್​ನಲ್ಲಿ ಗೋಲ್​ಗಪ್ಪ ಮಾಡಿದ ಆಮಿರ್​ ಖಾನ್​; ಸಖತ್​ ಟ್ರೋಲ್​

‘ಎಂಥ ಅದ್ಭುತ ಸಿನಿಮಾ ಮಾಡಿದ್ದೀರಿ. ಇದರ ಬಗ್ಗೆ ನಾನು ತುಂಬ ಜನರ ಜೊತೆ ಮಾತನಾಡಿದ್ದೇನೆ. ಇವನಿಗೆ ಏನಾಗಿದೆಯಪ್ಪಾ ಅಂತ ಅವರೆಲ್ಲ ನನ್ನನ್ನು ನೋಡಿ ಅಚ್ಚರಿಪಟ್ಟಿದ್ದಾರೆ. ಸಿನಿಮಾದ ಬರವಣಿಗೆ ನನಗೆ ಇಷ್ಟ ಆಯ್ತು. ಪ್ರತಿ ದೃಶ್ಯವನ್ನು ಅಸಾಧಾರಣವಾಗಿ ನೀವು ಕಟ್ಟಿಕೊಟ್ಟಿದ್ದೀರಿ. ಕಲಾವಿದರ ನಟನೆ ಶ್ರೇಷ್ಠವಾಗಿದೆ. ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಪವರ್​ಫುಲ್​ ಆಗಿದೆ. ಅತ್ಯುತ್ತಮ ಮನರಂಜನೆ ನೀಡುವ ಈ ಸಿನಿಮಾವನ್ನು ನೋಡಿ ನಾನು ಎಂಜಾಯ್​ ಮಾಡಿದ್ದೇನೆ. ಸದಾ ಅದ್ಭುತವಾದ ಸಿನಿಮಾಗಳನ್ನು ಮಾಡಿ’ ಎಂದಿದ್ದಾರೆ ರಾಜ್​ಕುಮಾರ್​ ಹಿರಾನಿ.

ಸುಕುಮಾರ್​ ಅವರನ್ನು ಭೇಟಿ ಮಾಡಬೇಕು ಎಂಬ ಹಂಬಲವನ್ನೂ ರಾಜ್​ಕುಮಾರ್​ ಹಿರಾನಿ ವ್ಯಕ್ತಪಡಿಸಿದ್ದಾರೆ. ‘ನೀವು ಮುಂಬೈಗೆ ಬಂದಾಗ ದಯವಿಟ್ಟು ಕರೆ ಮಾಡಿ’ ಎಂದು ಅವರು ತಿಳಿಸಿದ್ದಾರೆ. ಈ ಮೆಸೇಜ್​ ನೋಡಿ ಸುಕುಮಾರ್​ ಖುಷಿ ಆಗಿದ್ದಾರೆ. ‘ನೀವೇ ನಮಗೆ ಸ್ಫೂರ್ತಿ’ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:49 am, Sat, 11 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ