Radhika Apte: ‘ಸ್ತನದ ಗಾತ್ರ ಹೆಚ್ಚಿಸಿಕೊಳ್ಳುವಂತೆ ಹೇಳಿದ್ದರು’: ಹಿಂದಿ ಚಿತ್ರರಂಗದ ಕರಾಳ ಸತ್ಯ ತೆರೆದಿಟ್ಟ ರಾಧಿಕಾ ಆಪ್ಟೆ

‘ಆರಂಭದಲ್ಲಿ ನನ್ನ ಮೇಲೆ ಬಹಳ ಒತ್ತಡ ಇತ್ತು. ದೇಹ ಮತ್ತು ಮುಖಕ್ಕೆ ಹಲವು ಮಾರ್ಪಾಡು ಮಾಡಿಕೊಳ್ಳುವಂತೆ ಹೇಳಲಾಗಿತ್ತು’ ಎಂದಿದ್ದಾರೆ ನಟಿ ರಾಧಿಕಾ ಆಪ್ಟೆ.

Radhika Apte: ‘ಸ್ತನದ ಗಾತ್ರ ಹೆಚ್ಚಿಸಿಕೊಳ್ಳುವಂತೆ ಹೇಳಿದ್ದರು’: ಹಿಂದಿ ಚಿತ್ರರಂಗದ ಕರಾಳ ಸತ್ಯ ತೆರೆದಿಟ್ಟ ರಾಧಿಕಾ ಆಪ್ಟೆ
ರಾಧಿಕಾ ಆಪ್ಟೆ
Follow us
TV9 Web
| Updated By: ಮದನ್​ ಕುಮಾರ್​

Updated on: Jun 11, 2022 | 3:01 PM

ಹೊರಗಿನಿಂದ ನೋಡುವವರಿಗೆ ಬಣ್ಣದ ಲೋಕ ತುಂಬ ಚೆನ್ನಾಗಿ ಕಾಣುತ್ತದೆ. ಆದರೆ ಅದರೊಳಗಿನ ಕೆಲವು ಕಹಿ ಸತ್ಯಗಳು ಅಷ್ಟು ಸುಲಭವಾಗಿ ಹೊರಗಿನ ಜಗತ್ತಿಗೆ ಗೊತ್ತಾಗುವುದಿಲ್ಲ. ಅಂಥ ಕೆಲವು ಕರಾಳ ವಿಚಾರಗಳನ್ನು ಬಾಲಿವುಡ್​ (Bollywood) ನಟಿ ರಾಧಿಕಾ ಆಪ್ಟೆ ಅವರು ಬಹಿರಂಗಪಡಿಸಿದ್ದಾರೆ. ಚಿತ್ರರಂಗದಲ್ಲಿ ರಾಧಿಕಾ ಆಪ್ಟೆ (Radhika Apte) ಅವರು ಸಖತ್​ ಜನಪ್ರಿಯತೆ ಪಡೆದುಕೊಂಡಿದ್ದಾರೆ. ವೆಬ್​ ಸಿರೀಸ್​ಗಳ ಮೂಲಕವೂ ಅವರು ಜನಮನ ಗೆದ್ದಿದ್ದಾರೆ. ಹೀಗೆ ಭದ್ರವಾಗಿ ನೆಲೆ ಕಂಡುಕೊಂಡಿರುವ ಅವರಿಗೆ ಈಗ ಯಾರ ಹಂಗು ಕೂಡ ಇಲ್ಲ. ಹಾಗಾಗಿ ಅನೇಕ ವಿಚಾರಗಳನ್ನು ಅವರ ಬಯಲಿಗೆ ಎಳೆದಿದ್ದಾರೆ. ಆರಂಭದ ದಿನಗಳಲ್ಲಿ ಸ್ತನ, ಮೂಗು, ಕಾಲು ಸೇರಿದಂತೆ ದೇಹದ ಅನೇಕ ಭಾಗಗಳಿಗೆ ಪ್ಲಾಸ್ಟಿಕ್​ ಸರ್ಜರಿ (Plastic Surgery) ಮಾಡಿಸಿಕೊಳ್ಳುವಂತೆ ಕೆಲವರು ಹೇಳಿದ್ದರು ಎಂಬುದನ್ನು ರಾಧಿಕಾ ಆಪ್ಟೆ ಈಗ ಬಾಯಿ ಬಿಟ್ಟಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಈ ವಿಷಯ ಚರ್ಚೆ ಆಗುತ್ತಿದೆ.

ರಾಧಿಕಾ ಆಪ್ಟೆ ಅವರು ‘ಫಾರೆನ್ಸಿಕ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರದಲ್ಲಿ ವಿಕ್ರಾಂತ್​ ಮೆಸ್ಸಿ ಅವರು ಜೋಡಿಯಾಗಿದ್ದಾರೆ. ಈ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಮಾತನಾಡಿರುವ ರಾಧಿಕಾ ಆಪ್ಟೆ ಅವರು ಶಾಕಿಂಗ್​​ ಸತ್ಯಗಳನ್ನು ತೆರೆದಿಟ್ಟಿದ್ದಾರೆ. ಅವಕಾಶ ಕೇಳಿಕೊಂಡು ಚಿತ್ರರಂಗಕ್ಕೆ ಬರುವ ಹೆಣ್ಣುಮಕ್ಕಳನ್ನು ಸೌಂದರ್ಯದ ಹೆಸರಿನಲ್ಲಿ ದಾರಿ ತಪ್ಪಿಸುವವರು ಹಲವರಿದ್ದಾರೆ. ಅಂಥವರು ರಾಧಿಕಾ ಆಪ್ಟೆಗೆ ಬಗೆಬಗೆಯ ಸಲಹೆ ನೀಡಿದ್ದರು.

ಇದನ್ನೂ ಓದಿ: Radhika Apte: ನಗ್ನ ವಿಡಿಯೋ ಲೀಕ್​; 4 ದಿನ ಮನೆಯಿಂದ ಹೊರಬಂದಿರಲಿಲ್ಲ ನಟಿ ರಾಧಿಕಾ ಆಪ್ಟೆ

ಇದನ್ನೂ ಓದಿ
Image
Radhika Apte: ನಗ್ನವಾಗಿ ಕಾಣಿಸಿಕೊಂಡ ರಾಧಿಕಾ ಆಪ್ಟೆ; ಅವರನ್ನು ಬ್ಯಾನ್​ ಮಾಡಿ ಎಂದ ನೆಟ್ಟಿಗರು
Image
ರಾಧಿಕಾ ಜೊತೆ ನಗ್ನ ದೃಶ್ಯದಲ್ಲಿ ನಟಿಸುವಾಗ ನಡೆದ ಮಾತುಕತೆ ಬಗ್ಗೆ ಬಾಯಿ ಬಿಟ್ಟ ನಟ ಆದಿಲ್ ಹುಸೇನ್​
Image
Radhika Apte: ಕೊವಿಡ್​ ಲಸಿಕೆ ಪಡೆದ ನಟಿ ರಾಧಿಕಾ ಆಪ್ಟೆ; ಸುತ್ತಿಬಳಸಿ ಕಾಲೆಳೆದ ನಟ ವಿಜಯ್​ ವರ್ಮಾ
Image
Radhika Apte: ನಗ್ನ ವಿಡಿಯೋ ಲೀಕ್​; 4 ದಿನ ಮನೆಯಿಂದ ಹೊರಬಂದಿರಲಿಲ್ಲ ನಟಿ ರಾಧಿಕಾ ಆಪ್ಟೆ

‘ಆರಂಭದಲ್ಲಿ ನನ್ನ ಮೇಲೆ ಬಹಳ ಒತ್ತಡ ಇತ್ತು. ದೇಹ ಮತ್ತು ಮುಖಕ್ಕೆ ಹಲವು ಮಾರ್ಪಾಡು ಮಾಡಿಕೊಳ್ಳುವಂತೆ ಹೇಳಲಾಗಿತ್ತು. ಮೊದಲ ಭೇಟಿಯಲ್ಲಿ ಮೂಗು ಬದಲಾಯಿಸಿಕೊಳ್ಳುವಂತೆ ಹೇಳಿದ್ದರು. ಎರಡನೇ ಬಾರಿ ಭೇಟಿ ಆದಾಗ ಸ್ತನಗಳಿಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಕಾಲು, ದವಡೆ, ಗಲ್ಲ.. ಹೀಗೆ ಮುಂದುವರಿಯಿತು’ ಎಂದಿದ್ದಾರೆ ರಾಧಿಕಾ ಆಪ್ಟೆ.

ಇದನ್ನೂ ಓದಿ: ರಾಧಿಕಾ ಜೊತೆ ನಗ್ನ ದೃಶ್ಯದಲ್ಲಿ ನಟಿಸುವಾಗ ನಡೆದ ಮಾತುಕತೆ ಬಗ್ಗೆ ಬಾಯಿ ಬಿಟ್ಟ ನಟ ಆದಿಲ್ ಹುಸೇನ್​

ಚಿತ್ರರಂಗದಲ್ಲಿ ಹೀಗೆ ದಾರಿ ತಪ್ಪಿಸುವವರ ಮಾತಿಗೆ ರಾಧಿಕಾ ಆಪ್ಟೆ ಬೆಲೆ ನೀಡಲಿಲ್ಲ. ಸ್ವಂತ ಸಾಮರ್ಥ್ಯದ ಮೂಲಕ ಅವರು ಗೆಲುವು ಕಂಡಿದ್ದಾರೆ. ನಟನೆಯ ಮೂಲಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರು ನಟಿಸಿರುವ ‘ಫಾರೆನ್ಸಿಕ್​’ ಸಿನಿಮಾ ಜೂನ್​ 23ರಂದು ಜೀ5 ಮೂಲಕ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಪ್ರಾಚಿ ದೇಸಾಯಿ ಕೂಡ ಅಭಿನಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ